ವಿಮಾನ ಹಾರಾಟದ ಸಮಯದಲ್ಲಿ ಹವಾಮಾನವು ಕೆಟ್ಟದಾಗಿದ್ದಾಗ, ವಿಮಾನದಲ್ಲಿ ಭಾರೀ ಪ್ರಕ್ಷುಬ್ಧತೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ವಿಮಾನವು ತೀವ್ರವಾಗಿ ಅಲುಗಾಡಲು ಶುರುವಾಗಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುತ್ತದೆ. ಹೀಗೆ ವಾಯು ಪ್ರಕ್ಷುಬ್ಧತೆಯಿಂದ ಅನೇಕ ವಿಮಾನ ಅಪಘಾತಗಳು ಸಾವು ನೋವುಗಳು ಸಂಭವಿಸಿದೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಉರುಗ್ವೇ ಕಡೆಗೆ ತೆರಳಿದ್ದ ಏರ್ ಯುರೋಪಾ ವಿಮಾನವು ವಾಯು ಪ್ರಕ್ಷುಬ್ಧತೆಗೆ ತುತ್ತಾಗಿದೆ. ಪರಿಣಾಮವಾಗಿ ಒಬ್ಬ ಪ್ರಯಾಣಿಕ ಲಗೆಜ್ ಕಂಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಹಲವರಿಗೆ ಗಾಯಗಳಾಗಿವೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಸ್ಪೇನ್ ದೇಶದ ಮ್ಯಾಡ್ರಿಡ್‌ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ತೆರಳುತ್ತಿದ್ದ ಏರ್ ಯುರೋಪಾ ಬೋಯಿಂಗ್ 787-9 ಡ್ರೀಮ್ ಲೈನರ್ ವಿಮಾನವು ವಾಯು ಪ್ರಕ್ಷುಬ್ಧತೆಗೆ ತುತ್ತಾಗಿದ್ದು, ವಿಮಾನವು ತೀವ್ರವಾಗಿ ಅಲುಗಾಡಿದರ ಪರಿಣಾಮ ಸೀಟ್ ಮೇಲೆ ಕುಳಿತಿದ್ದ ಪ್ರಯಾಣಿಕರೊಬ್ಬರು ಸೀದಾ ಹೋಗಿ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅಲ್ಲದೆ 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ನಂತರ ವಿಮಾನವನ್ನು ಸುರಕ್ಷಿತವಾಗಿ ಬ್ರೆಜಿಲ್‌ನಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ.
Severe turbulence on an Air Europe flight resulted in a passenger being thrown into the overhead luggage compartment, with at least 30 people injured. The plane safely landed in Brazil. pic.twitter.com/i6tpBArHaQ
— Sneha Mordani (@snehamordani) July 1, 2024
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸ್ನೇಹಾ (snehamordani) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವಾಯು ಪ್ರಕ್ಷುಬ್ಧತೆಯಿಂದಾಗಿ, ತೀವ್ರವಾಗಿ ವಿಮಾನವು ಅಲುಗಾಡಿದಾಗ ಸೀದಾ ಹೋಗಿ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರೊಬ್ಬರನ್ನು ಸಹ ಪ್ರಯಾಣಿಕರು ಜೋಪಾನವಾಗಿ ಕೆಳಗಿಳಿಸುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪ್ರಧಾನಿ ರೋಹಿತ್, ಗೃಹ ಸಚಿವ ಕೊಹ್ಲಿ, ಟೀಮ್ ಇಂಡಿಯಾ ಆಟಗಾರರು ಕೇಂದ್ರ ಸಚಿವರಾದ್ರೆ ಹೇಗಿರ್ತಾರೆ ನೋಡಿ
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಭಯಾನಕ ದೃಶ್ಯವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ