ತಾಯಿ ಪ್ರೀತಿನೇ ಹಾಗೆ, ವಿವರಿಸಲು ಅಸಾಧ್ಯ. ಈ ನಿಸ್ವಾರ್ಥ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ಪ್ರೀತಿಯನ್ನು ತೋರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮೂಕ ಪ್ರಾಣಿಗಳು ತನ್ನ ಕಂದಮ್ಮನನ್ನು ಮುದ್ದಿಸುವ, ತೊಂದರೆಗೆ ಸಿಲುಕಿದಾಗ ರಕ್ಷಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶ್ವಾನವೊಂದು ತನ್ನ ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಕಚ್ಚಿಕೊಂಡು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಬಂದಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು DWNews ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ನಾಯಿಯೊಂದು ತನ್ನ ಪುಟ್ಟ ಮರಿಯನ್ನು ಬಾಯಿಯಲ್ಲಿ ಹೊತ್ತುಕೊಂಡು ನೇರವಾಗಿ ಆರೋಗ್ಯ ಕೇಂದ್ರಕ್ಕೆ ಬಂದಿದೆ. ಜನವರಿ 13ರಂದು ಟರ್ಕಿಯ ಅಂಕಾರಾ ನಗರದಲ್ಲಿ ನಡೆದಿರುವ ಘಟನೆ ಇದಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
A mother dog amazed veterinarians by carrying her unconscious, hypothermic puppy to their clinic, a moment that went viral in Turkey. pic.twitter.com/gllzjyE6N4
— DW News (@dwnews) January 16, 2025
ಈ ವಿಡಿಯೋದಲ್ಲಿ ನಾಯಿ ತನ್ನ ಮರಿಯನ್ನು ಹೊತ್ತುಕೊಂಡು ಕ್ಲಿನಿಕ್‍ನ ಬಾಗಿಲ ಬಳಿ ಬಂದು ನಿಂತಿದೆ. ಆ ವೇಳೆ ಆರೋಗ್ಯ ಕೇಂದ್ರದ ಸಿಬ್ಬಂದಿ ಅದನ್ನು ಗಮನಿಸಿ, ತಕ್ಷಣವೇ ಬಾಗಿಲನ್ನು ತೆರೆದಿದ್ದಾರೆ. ಆ ಬಳಿಕ ನಾಯಿ ಮರಿಯನ್ನು ವೈದ್ಯರು ಪರೀಕ್ಷಿಸಿದ್ದು, ದೇಹ ತಣ್ಣಗಾಗಿದ್ದನ್ನು ನೋಡಿ ಈ ನಾಯಿಮರಿ ಸತ್ತಿರಬಹುದೆಂದು ಕೊಂಡಿದ್ದರು. ಕೊನೆಗೆ ನಾಯಿಮರಿಯ ಹೃದಯವನ್ನು ಪರೀಕ್ಷಿಸಿದಾಗ, ಹೃದಯ ಬಡಿದುಕೊಳ್ಳುತ್ತಿದೆ ಎಂದು ತಿಳಿದು ತಕ್ಷಣವೇ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಇದನ್ನೂ ಓದಿ: 554 ಮಿಲಿಯನ್ ವೀಕ್ಷಣೆ ಪಡೆದ ರೀಲ್ಸ್ ಇದು, ರೀಲ್ಸ್ ನಿಂದಲೇ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ
ಈ ವಿಡಿಯೋ ಹತ್ತೊಂಬತ್ತು ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದು, ನೆಟ್ಟಿಗರೊಬ್ಬರು, ‘ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಕೆಗೆ ಜೀವನ ಪರ್ಯಂತ ಋಣಿಯಾಗಿರಬೇಕು: ಎಂದಿದ್ದಾರೆ. ಮತ್ತೊಬ್ಬರು, ‘ತಾಯಿ ಶ್ವಾನಕ್ಕೆ ಸಹಾಯ ಮಾಡಿ ಅದರ ಮರಿಯ ಜೀವ ಉಳಿಸಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ