ಟ್ವಿಟರ್ ಡೌನ್ ಆಗಿದೆ ಎಂದು ದೂರಿದ ಬಳಕೆದಾರರು; ಕಾರಣವೇನು?

| Updated By: shivaprasad.hs

Updated on: Aug 28, 2021 | 10:34 AM

Twitter Down: ಇಂದು (ಶನಿವಾರ) ಮುಂಜಾನೆ ವೆಬ್​ಸೈಟ್​ನಲ್ಲಿ ಟ್ವಿಟರ್ ಬಳಸುವ ಬಳಕೆದಾರರಿಗೆ ಟ್ವಿಟರ್ ಸರ್ವರ್ ಡೌನ್ ಆಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಟ್ವಿಟರ್ ಡೌನ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಟ್ವಿಟರ್ ಡೌನ್ ಆಗಿದೆ ಎಂದು ದೂರಿದ ಬಳಕೆದಾರರು; ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ ಸರ್ವರ್ ಡೌನ್ ಆಗಿದೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಕಾರಣ, ವೆಬ್​ಸೈಟ್​ಗಳಲ್ಲಿ ಟ್ವಿಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ಈ ಕುರಿತು ‘ಡೌನ್​ಡಿಟೆಕ್ಟರ್​’ನಲ್ಲಿ ರಿಪೋರ್ಟ್ ಮಾಡುತ್ತಿದ್ದಾರೆ. ಇಂದು (ಶನಿವಾರ) ಬೆಳಗ್ಗೆಯಿಂದ ಟ್ವಿಟರ್ ಸರ್ವರ್ ಡೌನ್ ಆಗಿದ್ದು, ಇದುವರೆಗೆ 332 ರಿಪೋರ್ಟ್​ಗಳು ದಾಖಲಾಗಿವೆ. ಮುಂಜಾನೆ 9 ಗಂಟೆಯಿಂದ ಟ್ವಿಟರ್ ಡೌನ್ ಕುರಿತು ಬಳಕೆದಾರರು ರಿಪೋರ್ಟ್ ಮಾಡಿದ್ದು, ಸುಮಾರು 9.25ರ ಸುಮಾರಿಗೆ ಗ್ರಾಫ್ ಮೇಲಕ್ಕೇರಿದೆ. ಬಳಕೆದಾರರಲ್ಲಿ ಹೆಚ್ಚಿನವರು ಟ್ವಿಟರ್ ಅನ್ನು ವೆಬ್​ಸೈಟ್​ಗಳಿಂದ ಬಳಸುವವರಾಗಿದ್ದಾರೆ. ಸುಮಾರು 71 ಪ್ರತಿಶತ ವೆಬ್​ಸೈಟ್ ಮೂಲಕ ಟ್ವಿಟರ್ ಬಳಸುವವರು, ಟ್ವಿಟರ್ ಡೌನ್ ಆದ ಕುರಿತು, ರಿಪೋರ್ಟ್ ಮಾಡಿದ್ದಾರೆ.

ಟ್ವಿಟರ್ ಡೌನ್ ಆದ ಕುರಿತು ರಿಪೋರ್ಟ್ ಮಾಡಿದವರಲ್ಲಿ, 21 ಪ್ರತಿಶತ ಐಫೋನ್, ಐಪ್ಯಾಡ್ ಹಾಗೂ ಆಂಡ್ರಾಯಿಡ್ ಬಳಕೆದಾರರಾಗಿದ್ದಾರೆ. ನಿನ್ನೆ ಅಮೇರಿಕಾ ಭಾಗದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು. ಟ್ವಿಟರ್​ನಲ್ಲಿ ಪ್ರಸ್ತುತ ಟ್ವಿಟರ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಬಳಕೆದಾರರು ಮೀಮ್​ಗಳನ್ನು ಹರಿಬಿಡುತ್ತಿದ್ದು, ಟ್ವಿಟರ್ ಡೌನ್ ಆಗಿರುವುದೋ, ನಮ್ಮ ಇಂಟರ್​ನೆಟ್ಟೋ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಸುಮಾರು 9ಗಂಟೆಯಿಂದ ಹತ್ತು ಗಂಟೆಯ ತನಕ ಟ್ವಿಟರ್ ಡೌನ್ ಆಗಿತ್ತು ಎಂದು ವರದಿಯಾಗಿದ್ದು, ಪ್ರಸ್ತುತ ಟ್ವಿಟರ್ ವೆಬ್​ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಟ್ವಿಟರ್ ಡೌನ್ ಆದ ಕುರಿತು ರಿಪೋರ್ಟ್ ದಾಖಲಾದ ಗ್ರಾಫ್ ಇಲ್ಲಿದೆ:

ಟ್ವಿಟರ್ ಡೌನ್ ಆದಾಗ ದಾಖಲಾದ ರಿಪೋರ್ಟ್

ಅಮೇರಿಕಾದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಬಳಕೆದಾರರ ಟ್ವೀಟ್​ಗಳು:

ಇದನ್ನೂ ಓದಿ:

ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್​ನಲ್ಲಿ ಹೈದರಾಬಾದ್​ಗೆ ರವಾನೆ

‘ಮಹಿಳೆ ಧರಿಸುವ ಉಡುಪುಗಳು ರೇಪ್​ಗೆ ಕಾರಣ ಅಲ್ಲ’: ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಕವಿತಾ ಲಂಕೇಶ್​ ಪ್ರತಿಕ್ರಿಯೆ

(Twitter down is reported by users in Saturday morning)