Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 30, 2022 | 8:32 AM

Twitter Trends: ಟಾರ್ ರಸ್ತೆಯ ಮೇಲೆ ಚಾಚಿಕೊಂಡಿರುವ ಮರಗಳಿಂದ ಉದುರಿರುದ ಹೂ ಪಕಳೆಗಳು ಮತ್ತು ಹೂ ತುಂಬಿಕೊಂಡಿರುವ ಮರಗಳು ಬೆಂಗಳೂರಿನ ಮೆರುಗು ಹೇಗೆ ಹೆಚ್ಚಿಸಿವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಂತಿದೆ. ಗಮನ ಸೆಳೆಯು ಕೆಲ ಪೋಸ್ಟ್​ಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.

Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು
ಬೆಂಗಳೂರಿನ ಮರಗಳಲ್ಲಿ ಅರಳಿರುವ ಹೂಗಳು
Follow us on

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಉದ್ಯಾನನಗರಿ (Garden City Bengaluru) ಎಂಬ ಬಿರುದೂ ಇದೆ. ಬೆಂಗಳೂರಿನಲ್ಲಿ ಅಳಿದುಳಿದಿರುವ ಹಲವು ಮರಗಳಿಗೆ ಇದು ಹೂ ಬಿಡುವ ಕಾಲ. ರಸ್ತೆಯಲ್ಲಿ ನಡೆಯುತ್ತಾ ಕತ್ತೆತ್ತಿ ನೋಡಿದರೆ ಬಣ್ಣಬಣ್ಣದ ಚಿತ್ತಾರ ಹೊಸ ಮೆರುಗು ಕೊಟ್ಟಂತೆ ಕಾಣಿಸುತ್ತದೆ. ಬೆಂಗಳೂರಿನ ಈ ಸಂಭ್ರಮವನ್ನು ಜನರು ಟ್ವಿಟರ್​ನಲ್ಲಿ #Spring ಹ್ಯಾಷ್​ಟ್ಯಾಗ್​ಗಳೊಂದಿಗೆ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಕಬ್ಬನ್​ಪಾರ್ಕ್​ನಲ್ಲಿರುವ ಕಾಂಡದಿಂದಲೇ ಹೂ ಬಿಡುವ ಮರವೊಂದಕ್ಕೆ ಮೀನಾ ಮುಕೇಶ್ ಎನ್ನುವವರು ರಾಪುಂಜೆಲ್ ಎಂದು ಬೊಂಬೆಯ ಹೆಸರನ್ನು ಹೊಸದಾಗಿ ನಾಮಕರಣ ಮಾಡಿದಿದ್ದಾರೆ. ‘ಈ ಮರದ ಕಾಂಡದಿಂದಲೇ ಮೊಗ್ಗು, ಹೂಗ, ಕಾಯಿ ಕಾಣಿಸುತ್ತದೆ. ಇದೊಂದು ಥರ ರಾಪುಂಜೆಲ್​ನ ಸುಂದರ ನೀಳ ಕೂದಲಿಗೆ ಮಾಡಿದ ಅಲಂಕಾರದಂತೆ ಕಾಣಿಸುತ್ತದೆ’ ಎಂದು ಅವರು ಖುಷಿಪಟ್ಟಿದ್ದಾರೆ.

ಸಜ್ಜಿದ್ ದಾರ್ ಎನ್ನುವವರು ವೈಟ್​ಫೀಲ್ಡ್​ನಲ್ಲಿ ಹೂ ತುಂಬಿಕೊಂಡ ಮರದ ಅಡಿ ನಿಂತ ಕಾರೊಂದರ ಚಿತ್ರ ಹಂಚಿಕೊಂಡಿದ್ದಾರೆ. ಟಾರ್ ರಸ್ತೆಯ ಮೇಲೆ ಚಾಚಿಕೊಂಡಿರುವ ಮರಗಳಿಂದ ಉದುರಿರುದ ಹೂ ಪಕಳೆಗಳು ಮತ್ತು ಹೂ ತುಂಬಿಕೊಂಡಿರುವ ಮರಗಳು ಬೆಂಗಳೂರಿನ ಮೆರುಗು ಹೇಗೆ ಹೆಚ್ಚಿಸಿವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಂತಿದೆ.

ಗಮನ ಸೆಳೆಯು ಕೆಲ ಪೋಸ್ಟ್​ಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.

 

 

 

 

 

 

 

ಇದನ್ನೂ ಓದಿ: ಟ್ವಿಟರ್ ಡೊನಾಲ್ಡ್ ಟ್ರಂಪ್​​ನ್ನು ಬ್ಲಾಕ್ ಮಾಡುತ್ತದೆ, ಆದರೆ ಹಿಂದೂ ದೇವರ ವಿರುದ್ಧ ಪೋಸ್ಟ್ ಮಾಡಿದ ಬಳಕೆದಾರರ ವಿರುದ್ಧ ಯಾಕಿಲ್ಲ?: ದೆಹಲಿ ಹೈಕೋರ್ಟ್

ಇದನ್ನೂ ಓದಿ: CM of Karnataka: ಮುಖ್ಯಮಂತ್ರಿಯ ಟ್ವಿಟರ್​ ಖಾತೆಯನ್ನೇ ಹ್ಯಾಕ್​ ಮಾಡಿದ ಕಿಡಿಗೇಡಿಗಳು