ಪ್ಲಾಸ್ಟಿಕ್​ ಬಾಟಲಿಗಳನ್ನು ಕೊಟ್ಟರೆ ಬಸ್​​ನಲ್ಲಿ ಉಚಿತ ಪ್ರಯಾಣ, ಬಸ್​ ನಿಲ್ದಾಣದಲ್ಲಿದೆ ಮಶಿನ್​; ಈ ದೇಶದಲ್ಲೊಂದು ವಿನೂತನ ಆಫರ್​ !​

600 ಎಂಎಲ್​ ಅಥವಾ ಅದಕ್ಕೂ ಕಡಿಮೆ ಅಳತೆಯ ಪ್ರತಿ ಬಾಟಲಿಗೂ ಒಂದು ಪಾಯಿಂಟ್​ ಇರುತ್ತದೆ. ಹಾಗೇ, 600 ಎಂಎಲ್​ ಮತ್ತು ಅದಕ್ಕೂ ದೊಡ್ಡದಾದ ಬಾಟಲಿಗಳಿಗೆ 2 ಪಾಯಿಂಟ್. ಅಂದರೆ ಪ್ರತಿ ಬಾಟಲಿಗೆ 2 ಪಾಯಿಂಟ್ ಪಡೆಯಬಹುದು.

ಪ್ಲಾಸ್ಟಿಕ್​ ಬಾಟಲಿಗಳನ್ನು ಕೊಟ್ಟರೆ ಬಸ್​​ನಲ್ಲಿ ಉಚಿತ ಪ್ರಯಾಣ, ಬಸ್​ ನಿಲ್ದಾಣದಲ್ಲಿದೆ ಮಶಿನ್​; ಈ ದೇಶದಲ್ಲೊಂದು ವಿನೂತನ ಆಫರ್​ !​
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 30, 2022 | 6:24 PM

ಯುನೈಟೆಡ್​ ಅರಬ್​ ಎಮಿರೇಟ್ಸ್​​ನಲ್ಲಿ ಸಾರ್ವಜನಿಕ ಬಸ್​​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಒಂದು ಅವಕಾಶವನ್ನು ಅಬು ಧಮಿ ಮುನ್ಸಿಪಲ್ಟೀಸ್​ ಮತ್ತು ಸಾರಿಗೆ ಇಲಾಖೆಯ ಸಮಗ್ರ ಸಾರಿಗೆ ಕೇಂದ್ರ ಕಲ್ಪಿಸಿದೆ. ಆದರೆ ಉಚಿತವಾಗಿ ಅಂದರೆ ಯಾರು ಬೇಕಾದರೂ ಹೋಗಿ, ಸುಮ್ಮನೆ ಪ್ರಯಾಣ ಮಾಡುವಂತಿಲ್ಲ. ಅದಕ್ಕೊಂದು ಟಾಸ್ಕ್​ ಇದೆ. ಮತ್ತೇನಲ್ಲ, ಖಾಲಿ ಪ್ಲಾಸ್ಟಿಕ್​ ಬಾಟಲಿಗಳನ್ನು ಸಂಗ್ರಹಿಸಿ ತಂದು ಕೊಡಬೇಕು. ನೀರು, ತಂಪು ಪಾನೀಯ ಅಥವಾ ಇನ್ನೇನಾದರೂ ಕುಡಿದ ಬಳಿಕ ಪ್ಲಾಸ್ಟಿಕ್​ ಬಾಟಲಿಗಳನ್ನು ಅಲ್ಲಲ್ಲೇ ಬಿಸಾಕುವುದು ಸಾಮಾನ್ಯವಾಗಿಬಿಟ್ಟಿದೆ. ಒಮ್ಮೆ ಡಸ್ಟ್​ಬಿನ್​ಗೆ ಹಾಕಿದರೂ ಕೂಡ ಅದು ಸಂಸ್ಕರಣೆಗೊಳ್ಳುವುದಿಲ್ಲ. ಎಲ್ಲೆಂದರಲ್ಲಿ ಈ ಪ್ಲಾಸ್ಟಿಕ್​ ಬಿಸಾಡಿ ಉಂಟಾಗುವ ಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಅಬುಧಾಬಿ ಸರ್ಕಾರ ಹೀಗೊಂದು ಭರ್ಜರಿ ಆಫರ್​ ನೀಡಿದೆ.

ಅಬುಧಾಬಿ ಡಿಎಂಟಿ ಈ ಅಭಿಯಾನಕ್ಕೆ Points for Plastic: the Bus Tariff ಎಂದು ಹೆಸರಿಟ್ಟಿದೆ. ಅದರಡಿಯಲ್ಲಿ ಅಬುಧಾಬಿಯ ಮುಖ್ಯ ಬಸ್​ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್​ ಡಿಪೋಸಿಟ್​  (ಪ್ಲಾಸ್ಟಿಕ್ ಬಾಟಲಿಯನ್ನು ಠೇವಣಿ ಇಡುವ) ಮಶಿನ್​ ಅಳವಡಿಸಲಾಗಿದೆ. ಯಾವುದೇ ಪ್ರಯಾಣಿಕ ಖಾಲಿ ಪ್ಲಾಸ್ಟಿಕ್​  ಬಾಟಲಿಯನ್ನು ಅದರಲ್ಲಿ ಹಾಕಿದರೆ ಅದರ ಬದಲಿಗೆ ಅವರಿಗೆ ಪಾಯಿಂಟ್​ ಸಿಗುತ್ತದೆ. ಹೀಗೆ ಪ್ಲಾಸ್ಟಿಕ್​ ಬಾಟಲಿ ಕೊಟ್ಟು ಗಳಿಸಿದ ಪಾಯಿಂಟ್​ಗಳನ್ನು ಬಸ್​ ಪ್ರಯಾಣ ದರಕ್ಕೆ ಅನ್ವಯ ಮಾಡಿಕೊಳ್ಳಬಹುದು.

ಉದಾಹರಣೆಗೆ, 600 ಎಂಎಲ್​ ಅಥವಾ ಅದಕ್ಕೂ ಕಡಿಮೆ ಅಳತೆಯ ಪ್ರತಿ ಬಾಟಲಿಗೂ ಒಂದು ಪಾಯಿಂಟ್​ ಇರುತ್ತದೆ. ಹಾಗೇ, 600 ಎಂಎಲ್​ ಮತ್ತು ಅದಕ್ಕೂ ದೊಡ್ಡದಾದ ಬಾಟಲಿಗಳಿಗೆ 2 ಪಾಯಿಂಟ್. ಅಂದರೆ ಪ್ರತಿ ಬಾಟಲಿಗೆ 2 ಪಾಯಿಂಟ್ ಪಡೆಯಬಹುದು. ಹೀಗೆ ಪ್ಲಾಸ್ಟಿಕ್​ ಬಾಟಲಿಯಿಂದ ಗಳಿಸಿದ ಒಂದು ಪಾಯಿಂಟ್​ 10 ಫಿಲ್ಸ್​ಗಳಿಗೆ ಸಮ(ಫಿಲ್ಸ್​ ಎಂದರೆ ಕರೆನ್ಸಿಯ ಘಟಕ. ಭಾರತದಲ್ಲಿ ರೂಪಾಯಿಗೆ ಪೈಸೆ ಘಟಕವಿದ್ದಂತೆ). ಹಾಗೇ 10 ಪಾಯಿಂಟ್​ಗಳು 1 ದಿರ್ಹಾಮ್​​ಗೆ ಸರಿಸಮ( ದಿರ್ಹಾಮ್​ ಎಂದರೆ ಯುನೈಟೆಡ್ ಅರಬ್​​ ಎಮಿರೇಟ್ಸ್​ನ ಕರೆನ್ಸಿ). ಈ ಲೆಕ್ಕಾಚಾರದಲ್ಲಿ ಬಸ್​ ದರವನ್ನು ಪರಿಗಣಿಸಿ, ಎಷ್ಟು ಹಣ ಆಗುತ್ತದೆಯೋ ಅಷ್ಟು ದೂರ ಉಚಿತ ಪ್ರಯಾಣ ಮಾಡಬಹುದಾಗಿದೆ.

ಪರಿಸರ ಸಂಸ್ಥೆ – ಅಬುಧಾಬಿ (ಇಎಡಿ), ಅಬುಧಾಬಿ ತ್ಯಾಜ್ಯ ನಿರ್ವಹಣಾ ಕೇಂದ್ರ (ತದ್ವೀರ್) ಮತ್ತು ಡಿ ಗ್ರೇಡ್ ಸಹಯೋಗದಲ್ಲಿ ಈ ಅಭಿಯಾನ ಶುರುವಾಗಿದೆ. ಅಂದರೆ ಜನರು ಮನೆಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್​ ಬಾಟಲಿಗಳನ್ನು ಹೇಗೆ ಬೇಕಾದರೆ ಹಾಗೇ ಎಸೆದು, ಪರಿಸರ ಮಾಲಿನ್ಯ ಮಾಡದೆ, ಅದನ್ನು ತಂದುಕೊಡಬೇಕು. ಈ ಮೂಲಕ ಪ್ಲಾಸ್ಟಿಕ್​ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು ಎಂಬುದು ಉದ್ದೇಶ.

ಇದನ್ನೂ ಓದಿ: ನಾನು ನನ್ನ ರಾಜಕಾರಣಿ ಎಂದು ನನ್ನ ಕರೆದುಕೊಳ್ಳಲ್ಲ, ನಾನು ಆಕಸ್ಮಿಕವಾಗಿ ಸಂಸದೆಯಾಗಿದ್ದೇನೆ: ಸಂಸದೆ ಸುಮಲತಾ

Published On - 6:23 pm, Wed, 30 March 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು