AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನನ್ನ ರಾಜಕಾರಣಿ ಎಂದು ನನ್ನ ಕರೆದುಕೊಳ್ಳಲ್ಲ, ನಾನು ಆಕಸ್ಮಿಕವಾಗಿ ಸಂಸದೆಯಾಗಿದ್ದೇನೆ: ಸಂಸದೆ ಸುಮಲತಾ

ಅತ್ಯುತ್ತಮ ಗುಣಮಟ್ಟದ ಐಸಿಯು ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ನೀಡಿದ್ದೇನೆ. ಯಾವುದೇ ಅನುಭವ ಇಲ್ಲದೇ ಸಂಸದರ ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೆ. ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ ಎಂದು ದೆಹಲಿಯಲ್ಲಿ ಸಂಸದೆ ಸುಮಲತಾ ತಿಳಿಸಿದ್ದಾರೆ.

ನಾನು ನನ್ನ ರಾಜಕಾರಣಿ ಎಂದು ನನ್ನ ಕರೆದುಕೊಳ್ಳಲ್ಲ, ನಾನು ಆಕಸ್ಮಿಕವಾಗಿ ಸಂಸದೆಯಾಗಿದ್ದೇನೆ: ಸಂಸದೆ ಸುಮಲತಾ
ಸಂಸದೆ ಸುಮಲತಾ
Follow us
TV9 Web
| Updated By: preethi shettigar

Updated on:Mar 30, 2022 | 6:19 PM

ದೆಹಲಿ: ಸಂಸದೆಯಾಗಿ ಮೂರು ವರ್ಷ ಪೂರ್ಣಗೊಳಿಸುತ್ತಿದ್ದೇನೆ. ಹಲವು ಸವಾಲುಗಳನ್ನು ಈ ಅವಧಿಯಲ್ಲಿ ಎದುರಿಸಿದ್ದೇನೆ. ಸಿನಿಮಾದವರು ಏನು ಕೆಲಸ ಮಾಡ್ತಾರೆ ಎಂದು ಹಿಯಾಳಿಸಲಾಗಿತ್ತು. ಅದಾಗ್ಯೂ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಮಂಡ್ಯ ನಗರದಲ್ಲಿ ಅಂಡರ್ ಪಾಸ್ (underpass) ನಿರ್ಮಾಣಕ್ಕೆ ಮನವಿ ಮಾಡಿದೆ. ಅದಕ್ಕೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಮಹಿಳೆಯರಿಗೆ (Women) ವಿಶೇಷ ಬೋಗಿ ಸಿಗುವಂತೆ ಮಾಡಿದ್ದೇನೆ. ಹಿಂದಿನ ಹಲವು ಸಂಸದರು, ಸಂಸದರ ನಿಧಿ ಬಳಕೆ ಮಾಡಿರಲಿಲ್ಲ. ಅದನ್ನು ಹೆಚ್ಚುವರಿಯಾಗಿ ಪಡೆದು ಜಿಲ್ಲೆಗೆ ವೆಂಟಿಲೇಟರ್ ಖರೀದಿ ಮಾಡಿಸಿದೆ ಮತ್ತು ಅತ್ಯುತ್ತಮ ಗುಣಮಟ್ಟದ ಐಸಿಯು ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ನೀಡಿದ್ದೇನೆ. ಯಾವುದೇ ಅನುಭವ ಇಲ್ಲದೇ ಸಂಸದರ ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೆ. ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ ಎಂದು ದೆಹಲಿಯಲ್ಲಿ ಸಂಸದೆ ಸುಮಲತಾ (sumalatha) ತಿಳಿಸಿದ್ದಾರೆ.

ಜೆಡಿಎಸ್ ನಾಯಕರ ವಿರುದ್ಧ ದೆಹಲಿಯಲ್ಲಿ ಸುಮಲತಾ ವಾಗ್ದಾಳಿ

ಬಳಿಕ ಮಾತನಾಡಿದ ಅವರು, ದಿಶಾ ಪ್ರಗತಿ ಪರಿಶೀಲನಾ ಸಭೆ ಇಟ್ಟುಕೊಂಡು ವಿವಾದ ಮಾಡಲಾಗುತ್ತಿದೆ. ಕೆಲವು ನಾಯಕರು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಸಭೆಗೂ ಮುನ್ನ ಅವರಿಗೆ ಮಾಹಿತಿ ನೀಡದರೂ ಸಭೆಗೆ ಹಾಜರಾಗಿಲ್ಲ. ನಾನು ಸಭೆ ನಡೆಸಿದ ಬಳಿಕ ಸ್ಥಳೀಯ ನಾಯಕರನ್ನು ಬಿಟ್ಟು ಸಭೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅಕ್ರಮ ಗಣಿಗಾರಿಗೆ ಬಗ್ಗೆ ಧ್ವನಿ ಎತ್ತಿದ ಬಳಿಕ ಹೀಗೆ ಟಾರ್ಗೆಟ್ ಮಾಡಲಾಗುತ್ತಿದೆ. ನಾನು ನನ್ನ ರಾಜಕಾರಣಿ ಎಂದು ನನ್ನ ಕರೆದುಕೊಳ್ಳಲ್ಲ. ನಾನು ಆಕಸ್ಮಿಕವಾಗಿ ಸಂಸದೆಯಾಗಿದ್ದೇನೆ. ನಮ್ಮಗೆ ಈಗಲೂ ಸಿನಿಮಾದಲ್ಲೂ ಉತ್ತಮ ಅವಕಾಶಗಳಿದೆ. ಆದರೆ ಸಂಸದೆಯಾಗಿ ನಾನು ಮಾಡುವ ಕೆಲಸಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮಾತು ನಡೆಯನ್ನು ಜನರು ಹೇಗೆ ತೆಗೆದುಕೊಂಡಿದ್ದರು ಎಲ್ಲರಿಗೂ ಗೊತ್ತಿದೆ. ಮತ್ತದೇ ಮಾರ್ಗದಲ್ಲಿ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ದೆಹಲಿಯಲ್ಲಿ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಲೆಂದೆ ಮಾತನಾಡುತ್ತಾರೆ: ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಕಿಡಿ

ಸುಮಲತಾ ಅಂಬರೀಶ್ ಬಗ್ಗೆ ಮಾತನಾಡಿದ್ರೆ ಮೈಲೈಜ್ ಸಿಗುತ್ತೆ ಎಂದು ಜೆಡಿಎಸ್ ಯುವ ನಾಯಕರಿಗೆ ಗೊತ್ತಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಲೆಂದೆ ಮಾತನಾಡುತ್ತಾರೆ. ಜೆಡಿಎಸ್ ಶಾಸಕರೊಬ್ಬರು ಬಹಿರಂಗ ಮಾತುಕತೆಗೆ ಆಹ್ವಾನಿಸಿದ್ದರು. ನಾನು ಮಾತುಕತೆಗೆ ಸಿದ್ಧವಾಗಿದ್ದೇನೆ. ನನ್ನ ಬಳಿ ಎಲ್ಲದಕ್ಕೂ ಉತ್ತರವಿದೆ ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಕಿಡಿಕಾರಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಬಾರಿ ರಾಜಕೀಯ ಅನುಭವಿಯಂತೆ ಸಲಹೆ ನೀಡಿದ್ದಾರೆ. ಏನು ಸಾಧನೆ, ಏನು ಕೊಡುಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಚಿಕ್ಕವರಾದರೂ ಪರವಾಗಿಲ್ಲ, ನನ್ನಿಂದ ತಪ್ಪಾಗಿದ್ರೆ ಸಲಹೆ ಸ್ವೀಕರಿಸುವೇ. ಆದರೆ ಫ್ಯಾಕ್ಟ್ ಇಟ್ಟುಕೊಂಡು ಮಾತನಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು ನೀಡಿದ್ದಾರೆ.

ಸಾ.ರಾ ಮಹೇಶ್ ಕಡೆಯ ಬೆಂಬಲಿಗರು ಜೀವ ಬೆದರಿಕೆ ಹಾಕಲು ಬಂದಿದ್ದರು: ಸುಮಲತಾ

ಶಾಸಕರಾದ ಸುರೇಶ್ ಗೌಡ ಮತ್ತು ಅನ್ನದಾನಿ ಕೊವೀಡ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿ ಬಂದರು. ಬಳಿಕ ಕೊವೀಡ್ ಹೋರಾಟದಲ್ಲಿ ನೀವ್ ಏನ್ ಮಾಡಿದ್ರಿ ಎಂದು ನನ್ನ ಪ್ರಶ್ನಿಸಿದರು. ನಾನು ಆಕ್ಸಿಜನ್ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆರೋಗ್ಯ ಸಚಿವರ ಜೊತೆಗೂಡಿ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್​ಗಳನ್ನು ನಿರ್ಮಾಣ ಮಾಡಿಸಿದ್ದೇನೆ. ಸಾಲಿಗ್ರಾಮದಲ್ಲಿ ಎಸ್ಸಿ – ಎಸ್ಟಿ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆಗೆ ತೆರಳಿದಾಗ ಬೆದರಿಕೆ ಹಾಕಿದ್ದರು. ಸಾ.ರಾ ಮಹೇಶ್ ಕಡೆಯ ಬೆಂಬಲಿಗರು ಜೀವ ಬೆದರಿಕೆ ಹಾಕಲು ಬಂದಿದ್ದರು.ಆಗ ಸ್ಥಳೀಯ ಮಹಿಳೆಯರು ನನ್ನ ಬೆಂಬಲಕ್ಕೆ ಬಂದಿದ್ದರು ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.

ಕೆಆರ್‌ಎಸ್ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದ್ದಕ್ಕೆ ಅಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದೆ. ಇದರಿಂದ ಕೆಲವರಿಗೆ ನೋವು ಕಷ್ಟವಾಗಿದೆ. ನಾನು ಮೂರು ವರ್ಷದಲ್ಲಿ ಇಷ್ಟು ಸವಾಲು ಎದುರಿಸಿದ್ದೇವೆ. ಜೀವ ಬೆದರಿಕೆ ನಡುವೆ ಇಷ್ಟೇಲ್ಲ ಕೆಲಸ ಮಾಡಿದ್ದೇನೆ. ಜನರು ನನ್ನ ಜೊತೆಗೆ ಇರ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಸುಮಲತಾ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸದರಾಗಿ ಮಂಡ್ಯಕ್ಕೆ ಸುಮಲತಾರ ಕೊಡುಗೆ ಏನು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ಮಂಡ್ಯದಲ್ಲಿ ಮತ್ತೆ ಶಾಸಕ ಸಂಸದೆ ಜಟಾಪಟಿ: ಸುಮಲತಾ ವಿರುದ್ಧ ಸುರೇಶ್ ಗೌಡ ವಾಗ್ದಾಳಿ

Published On - 6:07 pm, Wed, 30 March 22

ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!