108 ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ; ಹೆಣ್ಣು ಮಗುವಿಗೆ ಜನ್ಮ ನೀಡಿದ ಉತ್ತರ ಕನ್ನಡದ ಮಹಿಳೆ

ಅಧಿಕ ರಕ್ತದೊತ್ತಡ ಹಾಗೂ ಹೆರಿಗೆ ನೋವು ಕಾಣಿಸಿದ್ದರಿಂದ ತಾಲೂಕು ಆಸ್ಪತ್ರೆಯವರು ಹುಬ್ಬಳ್ಳಿ ಕ್ರಿಮ್ಸ್‌ಗೆ ಕಳಿಸಿಕೊಟ್ಟಿದ್ದರು. ಆದರೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ವರೂರ ಬಳಿ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ ಸಿಬ್ಬಂದಿ, ಸುರಕ್ಷಿತವಾಗಿ ಅಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.

108 ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ; ಹೆಣ್ಣು ಮಗುವಿಗೆ ಜನ್ಮ ನೀಡಿದ ಉತ್ತರ ಕನ್ನಡದ ಮಹಿಳೆ
ಆಂಬುಲೆನ್ಸ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: preethi shettigar

Updated on:Mar 05, 2022 | 10:43 PM

ಉತ್ತರ ಕನ್ನಡ: ಹೆರಿಗೆ ನೋವು ಹೆಚ್ಚಾಗಿದ್ದರಿಂದ 108 ಆಂಬ್ಯುಲೆನ್ಸ್​ನಲ್ಲಿಯೇ(108 Ambulance) ಮಹಿಳೆಯೊರ್ವರಿಗೆ ಹೆರಿಗೆ ಆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಬಳಿ ನಡೆದಿದೆ. ವರೂರು ಬಳಿ ಆಂಬ್ಯುಲೆನ್ಸ್​ನಲ್ಲಿ ಹೆಣ್ಣು ಮಗುವಿಗೆ ಮಹಿಳೆ(Woman) ಜನ್ಮ ನೀಡಿದ್ದಾರೆ. ಇಂದೂರ ಗ್ರಾಮದ ದಾವಲಬಿ ಮಹಬೂಬಷಾ ಹನಕನಹಳ್ಳಿ(19) ಹೆಣ್ಣು ಮಗುವಿಗೆ(Child) ಜನ್ಮ ನೀಡಿದ್ದಾರೆ. ಅಧಿಕ ರಕ್ತದೊತ್ತಡ ಹಾಗೂ ಹೆರಿಗೆ ನೋವು ಕಾಣಿಸಿದ್ದರಿಂದ ತಾಲೂಕು ಆಸ್ಪತ್ರೆಯವರು ಹುಬ್ಬಳ್ಳಿ ಕ್ರಿಮ್ಸ್‌ಗೆ ಕಳಿಸಿಕೊಟ್ಟಿದ್ದರು. ಆದರೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ವರೂರ ಬಳಿ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ ಸಿಬ್ಬಂದಿ, ಸುರಕ್ಷಿತವಾಗಿ ಅಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.

ತಾಯಿ ಮಗು ಇಬ್ಬರು ಸುರಕ್ಷಿತವಾಗಿದ್ದು, ಹುಬ್ಬಳ್ಳಿ ಕ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರ ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓರ್ ಬಳಿ ಕಾರು ಅಪಘಾತ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓರ್ ಬಳಿ ಸಿಗ್ನಲ್​ ಹತ್ತಿರ ನಿಂತಿದ್ದ ಕಾರಿಗೆ  ಮತ್ತೊಂದು ಕಾರು ಡಿಕ್ಕಿಯಾಗಿದೆ. ಸಿಗ್ನಲ್​ ಫ್ರೀ ಇದ್ದರೂ ತೆರಳದ ಹಿನ್ನೆಲೆ ಕಾರಿಗೆ ಡಿಕ್ಕಿಯಾಗಿದೆ. ಹೀಗಾಗಿ ರಸ್ತೆಬದಿಯೇ ಕಾರು ಚಾಲಕರ ಮಧ್ಯೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ವ್ಯಕ್ತಿಗೆ ತಳ್ಳಿದ ಹಿಂಬದಿ ಕಾರು ಚಾಲಕ. ಈ ವೇಳೆ ಗಂಡನನ್ನ ಹೊಡೆಯದಂತೆ ಮಹಿಳೆ ಅಡ್ಡ ಬಂದಿದ್ದಾರೆ. ಹಲ್ಲೆ ಮಾಡಿದ ‌ಚಾಲಕ ಕುಡಿದಿರುವ ಬಗ್ಗೆ ಆರೋಪ ಮಾಡಲಾಗಿದ್ದು, ಟ್ರಾಫಿಕ್ ಪೊಲೀಸರು ಬರುತ್ತಿದ್ದಂತೆ ಕುಡಿದ ಚಾಲಕ ಸೈಲೆಂಟ್ ಆಗಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹೆರಿಗೆ ವೇಳೆ ಗರ್ಭಿಣಿ, ಮಗು ಸಾವು! ಆಸ್ಪತ್ರೆ ಮುಂದೆ ಕುಟುಂಬಸ್ಥರು ಧರಣಿ

ಹೆರಿಗೆ ನೋವಿನಲ್ಲೂ ಸೈಕಲ್​ ತುಳಿದುಕೊಂಡು ಆಸ್ಪತ್ರೆಗೆ ಹೋದ ನ್ಯೂಜಿಲೆಂಡ್​ ಸಂಸದೆ; ಒಂದೇ ತಾಸಲ್ಲಿ ಮಗು ಜನನ

Published On - 10:21 pm, Sat, 5 March 22