AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರಿಗೆ ನೋವಿನಲ್ಲೂ ಸೈಕಲ್​ ತುಳಿದುಕೊಂಡು ಆಸ್ಪತ್ರೆಗೆ ಹೋದ ನ್ಯೂಜಿಲೆಂಡ್​ ಸಂಸದೆ; ಒಂದೇ ತಾಸಲ್ಲಿ ಮಗು ಜನನ

ಒಂದು ಅಚ್ಚರಿಯ ಸಂಗತಿಯೆಂದರೆ ಈ ಸಂಸದೆ ಹೀಗೆ ಸೈಕಲ್​ ಹೊಡೆದುಕೊಂಡು ಹೋಗಿ ಹೆರಿಗೆಗೆ ಅಡ್ಮಿಟ್​ ಆಗಿದ್ದು ಇದೇ ಮೊದಲಲ್ಲ. 2018ರಲ್ಲಿ ಇವರು ತಮ್ಮ ಮೊದಲ ಮಗನಿಗೆ ಜನ್ಮ ನೀಡುವಾಗಲೂ ಹೀಗೇ ಮಾಡಿದ್ದರು.

ಹೆರಿಗೆ ನೋವಿನಲ್ಲೂ ಸೈಕಲ್​ ತುಳಿದುಕೊಂಡು ಆಸ್ಪತ್ರೆಗೆ ಹೋದ ನ್ಯೂಜಿಲೆಂಡ್​ ಸಂಸದೆ; ಒಂದೇ ತಾಸಲ್ಲಿ ಮಗು ಜನನ
ಸೈಕಲ್​ ಹೊಡೆದುಕೊಂಡು ಆಸ್ಪತ್ರೆಗೆ ಹೋದ ನ್ಯೂಜಿಲೆಂಡ್ ಸಂಸದೆ
TV9 Web
| Edited By: |

Updated on:Nov 28, 2021 | 12:08 PM

Share

ನ್ಯೂಜಿಲೆಂಡ್​ನ ಮಹಿಳಾ ರಾಜಕಾರಣಿಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ಹೆರಿಗೆ ನೋವಲ್ಲೂ ಸೈಕಲ್​ ತುಳಿದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿ, ಒಂದು ಸುಂದರವಾದ, ಆರೋಗ್ಯಯುತವಾದ ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಬಳಿಕ ಈ ಬಗ್ಗೆ ಫೇಸ್​ಬುಕ್​​ನಲ್ಲಿ ಪೋಸ್ಟ್​ ಹಾಕಿದ್ದಾರೆ.  ನ್ಯೂಜಿಲೆಂಡ್​​ನ ಸಂಸದೆ ಜೂಲಿ ಅನ್ನೆ ಈ ಸಾಹಸ ಮಾಡಿದವರು. ಇವರು ರಾಜಕಾರಣಿಯಾಗುವುದಕ್ಕೂ ಮೊದಲು ಒಬ್ಬರು ಸೈಕ್ಲಿಸ್ಟ್​. ಆದರೆ ತುಂಬು ಗರ್ಭ, ಆ ಹೆರಿಗೆ ನೋವಿನ ಮಧ್ಯೆ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಸೈಕಲ್​ ತುಳಿದುಕೊಂಡು ಬಂದು ಆಸ್ಪತ್ರೆ ಸೇರಿ ಒಂದೇ ತಾಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದು ಇದೀಗ ಬಹುದೊಡ್ಡ ಸುದ್ದಿಯಾಗಿದೆ.

ಹೆರಿಗೆಯಾದ ಬಳಿಕ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅನ್ನೆ ಜೆಂಟರ್​, ಬಿಗ್​ ನ್ಯೂಸ್​ ! ಇಂದು ಮುಂಜಾನೆ 3.04ಗಂಟೆ ಹೊತ್ತಿಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಯಿತು. ಈ ಸಲ ಹೆರಿಗೆಗೆ ಸೈಕಲ್ ಹೊಡೆದು ಬಂದು ಅಡ್ಮಿಟ್ ಆಗುವ ಯೋಜನೆ ಇರಲಿಲ್ಲ. ಆದರೆ ಕೊನೆಯಲ್ಲಿ ಹಾಗೆಯೇ ಬರುವಂತಾಯ್ತು ಎಂದಿದ್ದಾರೆ. ಹಾಗೇ, ನನಗೆ 2 ಗಂಟೆ ಹೊತ್ತಿಗೆ ಹೆರಿಗೆ ನೋವು ಬರಲು ಶುರುವಾಯಿತು. ಆದರೆ ಅದು ತೀವ್ರವಾಗಿ ಇರಲಿಲ್ಲ. 2-3 ನಿಮಿಷಕ್ಕೊಮ್ಮೆ ಬಿಟ್ಟುಬಿಟ್ಟು ಬರುತ್ತಿತ್ತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತೀವ್ರವಾಯಿತು. ಒಂದು ತಾಸಿನ ಬಳಿಕ ಮಗು ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್​ಗೆ ನೆಟ್ಟಿಗರಂತೂ ಫುಲ್​ ಖುಷಿಯಾಗಿ ಕಾಮೆಂಟ್ ಹಾಕಿ, ತಾಯಿ ಮಗುವಿಗೆ ಹಾರೈಸಿದ್ದಾರೆ. ಇನ್ನು ಸೈಕ್ಲಿಂಗ್​ ವೇಳೆ ಸಂಸದೆಯ ಪತಿಯೂ ಇದ್ದರು.

ಇದೇ ಮೊದಲಲ್ಲ ! ಒಂದು ಅಚ್ಚರಿಯ ಸಂಗತಿಯೆಂದರೆ ಈ ಸಂಸದೆ ಹೀಗೆ ಸೈಕಲ್​ ಹೊಡೆದುಕೊಂಡು ಹೋಗಿ ಹೆರಿಗೆಗೆ ಅಡ್ಮಿಟ್​ ಆಗಿದ್ದು ಇದೇ ಮೊದಲಲ್ಲ. 2018ರಲ್ಲಿ ಇವರು ತಮ್ಮ ಮೊದಲ ಮಗನಿಗೆ ಜನ್ಮ ನೀಡುವಾಗಲೂ ಸೈಕಲ್​ ತುಳಿದುಕೊಂಡು ಹೋಗಿಯೇ ಆಕ್ಲೆಂಡ್​ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಂದು ಹೆರಿಗೆ ಸ್ವಲ್ಪ ತಡವಾಗಿತ್ತು. ಈಗಲೂ ಮತ್ತೆ ಹಾಗೇ ಮಾಡಿದ್ದಾರೆ. ಇವರ ಸಾಹಸಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಸುರಿಯುತ್ತಿದೆ.

ಇದೇ ಹೊತ್ತಲ್ಲಿ ನ್ಯೂಜಿಲೆಂಡ್​​ನ ಮಹಿಳಾ ಪ್ರಧಾನಿ ಇಂಥದ್ದೇ ಒಂದು ಕಾರಣಕ್ಕೆ ಸುದ್ದಿಯಾಗಿದ್ದರು. ಅವರು ಹೆರಿಗೆಗಾಗಿ ರಜೆ ತೆಗೆದುಕೊಂಡಿದ್ದಕ್ಕೆ ಮತ್ತು 2018ರಲ್ಲಿ ತನ್ನ ಮೂರು ತಿಂಗಳ ಮಗುವನ್ನು ವಿಶ್ವಸಂಸ್ಥೆ ಸಭೆಗೆ ಕರೆತಂದು ಎಲ್ಲರ ಗಮನಸೆಳೆದಿದ್ದರು.

ಇದನ್ನೂ ಓದಿ: ನೀವು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿತೀರಾ? ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

Published On - 12:07 pm, Sun, 28 November 21

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ