ಇತ್ತೀಚಿನ ದಿನಗಳಲ್ಲಿ ಮೆಟ್ರೋದಲ್ಲಿ ರೀಲ್ಸ್ ಮಾಡುವವರ ಹಾವಳಿ ಹೆಚ್ಚಾಗಿದೆ. ಇದೀಗ ಮತ್ತೊಮ್ಮೆ ದೆಹಲಿ ಮೆಟ್ರೋ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಯುವತಿಯರಿಬ್ಬರು ಹೋಳಿ ಹಬ್ಭದ ಪ್ರಯುತ್ನ ಪರಸ್ಪರ ಬಣ್ಣ ಹಚ್ಚಿಕೊಂಡು ಅಸಭ್ಯವಾಗಿದ್ದು ವರ್ತಿಸಿದ್ದು, ಯುವತಿಯರ ಅವತಾರ ಕಂಡು ಪ್ರಯಾಣಿಕರು ಕಿಡಿಕಾರಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಬ್ಬರು ಹುಡುಗಿಯರು ನೆಲದ ಮೇಲೆ ಕುಳಿತಿರುವುದು ಮತ್ತು ನೆಲದ ಮೇಲೆ ಬಣ್ಣ ಹರಡಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇದರ ನಂತರ, ಅಂಗ್ ಲಗಾ ದೇ ರೆ… ಸಾಂಗ್ ಪ್ಲೇ ಆದ ತಕ್ಷಣ, ಇಬ್ಬರೂ ಅಸಭ್ಯ ರೀತಿಯಲ್ಲಿ ಪರಸ್ಪರ ಬಣ್ಣಗಳನ್ನು ಹಚ್ಚಲು ಪ್ರಾರಂಭಿಸುತ್ತಾರೆ.
We need a law against this asap pic.twitter.com/3qH1aom1Ml
— Madhur Singh (@ThePlacardGuy) March 23, 2024
ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು
ಈ ವೀಡಿಯೊವನ್ನು @ThePlacardGuy ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಯಾವುದೇ ಕಾನೂನಿನ ಅಗತ್ಯವಿಲ್ಲ. 15 ಸೆಕೆಂಡ್‌ಗೆ 1 ಲಕ್ಷ ರೂಪಾಯಿ ಶುಲ್ಕ ವಿಧಿಸಿದರೆ ಸಾಕು’ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ‘ಅಂತಹವರನ್ನು ಮೆಟ್ರೋದಲ್ಲಿ ನಿಷೇಧಿಸಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ