‘ಈ ಯುವತಿಯನ್ನು ಮದುವೆಯಾದ ಪುರುಷನ ಅದೃಷ್ಟವೇ ಬದಲಾಗಲಿದೆ’; ವೈರಲ್​​ ಪೋಸ್ಟ್​​

ಚೀನಾದಲ್ಲಿ, ವಾಂಗ್ ಫೂ ಕ್ಸಿಯಾಂಗ್ ಅಂದರೆ ಅದೃಷ್ಟದ ಮುಖವು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದರ ಪ್ರಕಾರ, ದುಂಡಗಿನ ಗಲ್ಲದ ಜೊತೆಗೆ ಅಗಲವಾದ ಹಣೆ ಮತ್ತು ದುಂಡಗಿನ ಮುಖವನ್ನು ಹೊಂದಿರುವ ಹುಡುಗಿಯರನ್ನು ಮದುವೆಯಾದ ಪುರುಷನ ಅದೃಷ್ಟವೇ ಬದಲಾಗಲಿದೆ ಎಂದು ನಂಬಲಾಗಿದೆ.

'ಈ ಯುವತಿಯನ್ನು ಮದುವೆಯಾದ ಪುರುಷನ ಅದೃಷ್ಟವೇ ಬದಲಾಗಲಿದೆ'; ವೈರಲ್​​ ಪೋಸ್ಟ್​​
Follow us
ಅಕ್ಷತಾ ವರ್ಕಾಡಿ
|

Updated on:Mar 22, 2024 | 6:23 PM

ಚೀನಾದ ಯುವತಿಯೊಬ್ಬಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಹುಡುಗಿಗೆ 29 ವರ್ಷ ಮತ್ತು ಹೆನಾನ್ ಪ್ರಾಂತ್ಯದ ನಿವಾಸಿ. ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ನಂಬಿಕೆಗಳನ್ನು ಆಚರಿಸಿಕೊಂಡು ಬರಲಾಗುತ್ತದೆ. ಅದರಂತೆಯೇ ಚೀನಾದಲ್ಲಿಯೂ ಕೂಡ ಪುರುಷರ ಅದೃಷ್ಟವನ್ನು ಆತನನ್ನು ಮದುವೆಯಾಗುವ ಯುವತಿಯ ಮುಖದ ಆಕಾರದ ಆಧಾರದ ಮೇಲೆ ಹೇಳಲಾಗುತ್ತದೆ. ಅದರಂತೆ ಇದೀಗಾ ಇತ್ತೀಚೆಗೆ ಸುದ್ದಿಯಲ್ಲಿರುವ ಈ ಯುವತಿಯ ಮುಖದ ಆಕಾರದ ಆಧಾರದ ಮೇಲೆ ಭವಿಷ್ಯ ನುಡಿಯಲಾಗಿದ್ದು, ಈ ಯುವತಿಗೆ ದೇವರ ಇಂತಹ ಮುಖವನ್ನು ಕೊಟ್ಟಿದ್ದಾನೆ ಎಂದು ಅಲ್ಲಿನ ಜನರು ನಂಬುತ್ತಾರೆ. ಯಾಕೆಂದರೆ ಈ ಯುವತಿಯನ್ನು ಮದುವೆಯಾದವನು ಶ್ರೀಮಂತನಾಗುತ್ತಾನೆ ಎಂದು ನಂಬಲಾಗಿದೆ.

ಈ ಯುವತಿ ಜನವರಿಯಲ್ಲಿ ಹಂಚಿಕೊಂಡಿರುವ ಆಕೆಯ ವಿಡಿಯೋಗೆ ಇದುವರೆಗೆ 5 ಲಕ್ಷ 70 ಸಾವಿರ ನೆಟ್ಟಿಗರು ಲೈಕ್​ ಮಾಡಿದ್ದಾರೆ. ಇದಲ್ಲದೇ , 76 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ. ಈ ರೀತಿಯ ಮುಖವನ್ನು ಹೊಂದಿರುವ ಹುಡುಗಿಯರು ತಮ್ಮ ಭವಿಷ್ಯದ ಗಂಡನ ಜೀವನದಲ್ಲಿ ಅದೃಷ್ಟವನ್ನು ತರುತ್ತಾಳೆ ಎಂದು ಜನರು ಹೇಳುತ್ತಾರೆ.

ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು

ಅಷ್ಟಕ್ಕೂ ಹುಡುಗಿಯ ಮುಖದಲ್ಲಿ ಏನಿದೆ ವಿಶೇಷ?

ಚೀನಾದಲ್ಲಿ, ವಾಂಗ್ ಫೂ ಕ್ಸಿಯಾಂಗ್ ಅಂದರೆ ಅದೃಷ್ಟದ ಮುಖವು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದರ ಪ್ರಕಾರ, ದುಂಡಗಿನ ಗಲ್ಲದ ಜೊತೆಗೆ ಅಗಲವಾದ ಹಣೆ ಮತ್ತು ದುಂಡಗಿನ ಮುಖವನ್ನು ಹೊಂದಿರುವ ಹುಡುಗಿಯರು ದಯೆ ಮತ್ತು ತಮ್ಮ ಗಂಡನನ್ನು ಶ್ರೀಮಂತರಾನ್ನಾಗಿ ಮಾಡುತ್ತಾರೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಅವರ ಮೂಗು ದುಂಡಾಗಿರಬೇಕು ಮತ್ತು ಉದ್ದವಾಗಿರಬೇಕು ಮತ್ತು ಮೂಗು ಮುಂಭಾಗದಿಂದ ನೇರವಾಗಿರಬೇಕು. ಕೆಳಗಿನ ತುಟಿ ಸ್ವಲ್ಪ ದಪ್ಪವಾಗಿರಬೇಕು, ಕಣ್ಣುಗಳು ಹೊಳೆಯಬೇಕು ಮತ್ತು ಕೂದಲು ಮೃದುವಾಗಿರಬೇಕು, ಅಂತಹ ಹುಡುಗಿಯರು ಅದೃಷ್ಟವನ್ನು ತರುತ್ತಾರೆ ಎಂಬ ನಂಬಿಕೆಯಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Fri, 22 March 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್