AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಫ್ಯಾನ್ ಕ್ಲೀನ್ ಮಾಡುವ ಟೆನ್ಷನ್ ಇನ್ನಿಲ್ಲ; ಮಾರುಕಟ್ಟೆಗೆ ಬಂದ ಫ್ಯಾನ್​​​ ಕವರ್​​​

ಇನ್ನು ಮುಂದೆ ಫ್ಯಾನ್ ಕ್ಲೀನ್ ಮಾಡುವ ಟೆನ್ಷನ್ ಇಲ್ಲ. ಯಾಕೆಂದರೆ ಇತ್ತೀಚೆಗೆ ಬಣ್ಣ ಬಣ್ಣದ ಆಕರ್ಷಕ ಫ್ಯಾನ್​​ ಕವರ್​​​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Viral Video: ಫ್ಯಾನ್ ಕ್ಲೀನ್ ಮಾಡುವ ಟೆನ್ಷನ್ ಇನ್ನಿಲ್ಲ; ಮಾರುಕಟ್ಟೆಗೆ ಬಂದ ಫ್ಯಾನ್​​​ ಕವರ್​​​
ceiling fan coverImage Credit source: flipkart
ಅಕ್ಷತಾ ವರ್ಕಾಡಿ
|

Updated on: Mar 23, 2024 | 10:29 AM

Share

ಮನೆಯಲ್ಲಿ ಫ್ಯಾನ್​​​ ಕ್ಲೀನ್​​ ಮಾಡುವುದೇ ಒಂದು ದೊಡ್ಡ ತಲೆನೋವಿನ ಕೆಲಸ. ಯಾಕೆಂದರೆ ಕ್ಲೀನ್​ ಮಾಡಿದ ಒಂದೇ ವಾರದಲ್ಲಿ ಮತ್ತೆ ಧೂಳು ಹಿಡಿದುಬಿಡುತ್ತದೆ. ಪ್ರತಿ ಬಾರಿಯೂ ಎತ್ತರದ ಟೇಬಲ್ ಮೇಲೆ ಹತ್ತಿ ಫ್ಯಾನ್ ಕ್ಲೀನ್ ಮಾಡಬೇಕು. ಜೊತೆಗೆ ಧೂಳಿನ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಇನ್ನು ಮುಂದೆ ಫ್ಯಾನ್ ಕ್ಲೀನ್ ಮಾಡುವ ಟೆನ್ಷನ್ ಇಲ್ಲ. ಯಾಕೆಂದರೆ ಇತ್ತೀಚೆಗೆ ಬಣ್ಣ ಬಣ್ಣದ ಆಕರ್ಷಕ ಫ್ಯಾನ್​​ ಕವರ್​​​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್ ಮೀಶೋನಲ್ಲಿ ಯುವತಿಯೊಬ್ಬಳು ಫ್ಯಾನ್​​ ಕವರ್​​​ ಉತ್ಪನ್ನದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇವಲ 200ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಬಣ್ಣ ಬಣ್ಣದ ಆಕರ್ಷಕ ಫ್ಯಾನ್​​ ಕವರ್​​ಗಳನ್ನು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು

ಈ ಕವರ್​  ನಿಮ್ಮ ಫ್ಯಾನ್​​​ನ ಅಂದ ಹೆಚ್ಚುವುದು ಮಾತ್ರವಲ್ಲದೇ, ಕೊಳಕು ಧೂಳುಗಳ ಸಮಸ್ಯೆಗಳು ಇಲ್ಲ. ವಾರಗಳಿಗೊಮ್ಮೆ ನೀವು ಈ ಕವರ್​​ ಬದಲಿಸಿ ನೀರಿನಲ್ಲಿ ತೊಳೆದು ಮತ್ತೆ ಬಳಸಬಹುದಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ