
Vial Video : ತುಂಬಾ ಕುತೂಹಲದಿಂದ ನೋಟ ಸೆಳೆಯುವ ಪ್ರಾಣಿಗಳೆಂದರೆ ಕಾಂಗರೂಗಳು. ಅವು ನಡೆದರೂ, ಜಿಗಿದರೂ, ಸಹಜವಾಗಿದ್ದರೂ, ಕಿಡಿಗೇಡಿತನ ಮಾಡಿದರೂ ನೆಟ್ಟಿಗರು ಮಾತ್ರ ಅವುಗಳ ವಿಡಿಯೋಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ಎರಡು ಕಾಂಗರೂಗಳ ಮಧ್ಯೆ ನಡೆದ ಕಾಳಗದ ದೃಶ್ಯ ಇಲ್ಲಿದೆ. ಯಾಕಾಗಿ ಇಂಥ ಭಯಂಕರ ಕೋಪತಾಪವೋ…
ಆಸ್ಟ್ರೇಲಿಯಾದ ನಿಸರ್ಗಧಾಮದಲ್ಲಿ ಈ ಬಾಕ್ಸಿಂಗ್ ಪಂದ್ಯಾವಳಿ ನಡೆದಿದೆ! ಟ್ವಿಟರ್ನಲ್ಲಿ ನೌ ದಿಸ್ ಎಂಬ ಪುಟವು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಇವುಗಳ ಜಗಳ ತಾರಕಕ್ಕೇರಿದೆ. ಬಾಕ್ಸಿಂಗ್ ಪಟುಗಳಂತೆ ಇವು ಹೊಡೆದಾಡುತ್ತ ಕೊನೆಗೆ ಒಂದು ಬೇಲಿಯ ಬಳಿ ನಿಯಂತ್ರಣ ಕಳೆದುಕೊಳ್ಳುತ್ತವೆ. ಒಂದು ಕಾಂಗರೂ ಇನ್ನೊಂದು ಕಾಂಗರೂವನ್ನು ಆ ಬೇಲಿಗೆ ಅಪ್ಪಳಿಸುವಂತೆ ಮಾಡುತ್ತದೆ. ಅಪ್ಪಳಿಸುವುದಷ್ಟೇ ಅಲ್ಲ ಬೇಲಿಯೇ ಕಿತ್ತುಕೊಂಡು ಹೋಗುತ್ತದೆ. ಕಾಂಗರೂ ರಸ್ತೆ ಬೀಳುತ್ತದೆ. ಈತನಕ 55,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ವಿಡಿಯೋ ಗಳಿಸಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:30 am, Tue, 30 August 22