Viral Video: ನೀರಿನೊಳಗೆ ಕುಳಿತು ಆಟವಾಡುತ್ತಿದ್ದ ಪಾಂಡಾ ತನ್ನ ತಲೆ ಮೇಲೆ ಕೈ ಇಟ್ಟು ತಿರುಗಿದ್ದೇಕೆ?

| Updated By: Digi Tech Desk

Updated on: Jun 07, 2021 | 4:39 PM

ನೀರಿನ ಮಧ್ಯದಲ್ಲಿ ಕುಳಿತ ಎರಡು ಪಾಂಡಾಗಳು ತಮ್ಮಷ್ಟಕ್ಕೆ ತಾವು ಆಟವಾಡುತ್ತಿರುವ 11 ಸೆಕೆಂಡಿನ ಈ ವಿಡಿಯೋ ಸದ್ಯ ಟ್ವೀಟರ್​ನಲ್ಲಿ ವೈರಲ್​ ಆಗಿದೆ. ಇದಕ್ಕೆ ಕಾರಣ ನೀರಿನಲ್ಲಿ ಕುಳಿತ ಎರಡು ಪಾಂಡಾದಲ್ಲಿ ಒಂದು ಪಾಂಡಾ ತನ್ನಷ್ಟಕ್ಕೆ ತಾನು ವಿಶ್ರಾಂತಿ ಪಡೆಯುತ್ತಿದೆ. ಆದರೆ ಎದುರಿಗೆ ಮುಖ ಮಾಡಿ ಕುಳಿತ ಇನ್ನೊಂದು ಪಾಂಡಾ ಮಾತ್ರ ನೆಟ್ಟಿಗರ ನಗುವಿಗೆ ಕಾರಣವಾಗಿದೆ.

Viral Video: ನೀರಿನೊಳಗೆ ಕುಳಿತು ಆಟವಾಡುತ್ತಿದ್ದ ಪಾಂಡಾ ತನ್ನ ತಲೆ ಮೇಲೆ ಕೈ ಇಟ್ಟು ತಿರುಗಿದ್ದೇಕೆ?
ನೀರಿನೊಳಗೆ ಕುಳಿತು ಆಟವಾಡುತ್ತಿರುವ ಪಾಂಡಾ
Follow us on

ಪ್ರಕೃತಿಯ ಮಡಿಲೇ ಹಾಗೇ ಅದೃಶ್ಯವಾದ ಹಲವು ಸನ್ನಿವೇಶಗಳನ್ನು ಜನರ ಮುಂದೆ ಆಗಾಗ ತಂದಿಡ್ಡುತ್ತದೆ. ಅರಣ್ಯದಲ್ಲಿ ನಡೆಯುವ ಹಲವು ವಿಚಾರಗಳು ನಗರದಲ್ಲಿ ವಾಸಿಸುವವರಿಗೆ ಹೊಸ ಅನುಭವ ನೀಡುತ್ತದೆ. ಹಾಗೆಯೇ ನಗರದಲ್ಲಿ ನಡೆಯುವ ವಿಷಯಗಳು ಕಾಡಿನಂಚಿನಲ್ಲಿರುವವರಿಗೆ ನೂತನ ಅನುಭವ ತಂದೊಡ್ಡುತ್ತದೆ. ಆದರೆ ಹೊಸ ವಿಷಯಗಳು ನಡೆದಾಗ ಅದರಿಂದ ಸಿಗುವ ಆನಂದ ಹೇಳತೀರದು. ಅಂತೆಯೇ ಪ್ರಾಣಿಗಳು ಅರಣ್ಯದಲ್ಲಿ ತಮ್ಮ ಪಾಡಿಗೆ ತಾವು ಆಟವಾಡುವ ಅಪರೂಪದ ದೃಶ್ಯ ನೋಡಲು ಸಿಕ್ಕರೆ ಎಲ್ಲರೂ ಒಮ್ಮೆ ನಾವು ನೋಡುತ್ತೇವೆ ಎನ್ನುತ್ತಾರೆ. ಈ ವಿಷಯಗಳಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರವೇ ಇಲ್ಲ. ಸದ್ಯ ವೈರಲ್ ಅಗಿರುವ ವಿಡಿಯೋ ಎರಡು ಮುದ್ದಾದ ಪಾಂಡಾಗಳದ್ದು, ನೀರಿನಲ್ಲಿ ಅವುಗಳ ಚೇಷ್ಟೇ ಸದ್ಯ ನೆಟ್ಟಿಗರ ಮೆಚ್ಚುಗೆ ಪಡೆದಿದೆ.

ನೀರಿನ ಮಧ್ಯದಲ್ಲಿ ಕುಳಿತ ಎರಡು ಪಾಂಡಾಗಳು ತಮ್ಮಷ್ಟಕ್ಕೆ ತಾವು ಆಟವಾಡುತ್ತಿರುವ 11 ಸೆಕೆಂಡಿನ ಈ ವಿಡಿಯೋ ಸದ್ಯ ಟ್ವೀಟರ್​ನಲ್ಲಿ ವೈರಲ್​ ಆಗಿದೆ. ಇದಕ್ಕೆ ಕಾರಣ ನೀರಿನಲ್ಲಿ ಕುಳಿತ ಎರಡು ಪಾಂಡಾದಲ್ಲಿ ಒಂದು ಪಾಂಡಾ ತನ್ನಷ್ಟಕ್ಕೆ ತಾನು ವಿಶ್ರಾಂತಿ ಪಡೆಯುತ್ತಿದೆ. ಆದರೆ ಎದುರಿಗೆ ಮುಖ ಮಾಡಿ ಕುಳಿತ ಇನ್ನೊಂದು ಪಾಂಡಾ ಮಾತ್ರ ನೆಟ್ಟಿಗರ ನಗುವಿಗೆ ಕಾರಣವಾಗಿದೆ. ಈ ಪಾಂಡಾ ನೀರಿನಲ್ಲಿ ಕುಳಿತು ತನ್ನನ್ನು ಯಾರೋ ವಿಚಾರಿಸಲು ಬಂದಂತೆ ಪೋಸ್ ಕೊಟ್ಟಿದೆ. ಅಲ್ಲದೆ ತಲೆ ಮೇಲೆ ಕೈ ಇಟ್ಟು ತೀರುಗಿ ನೋಡಿದ ಆ ನೋಟ ಸದ್ಯ ನೋಡುಗರ ಪ್ರೀತಿಗೆ ಪಾತ್ರವಾಗಿದೆ.

ಈ ವಿಡಿಯೋವನ್ನು ‘ಸಮ್ಮರ್ ವೈಬ್ಸ್’ ಎಂಬ ಶೀರ್ಷಿಕೆಯೊಂದಿಗೆ ನೇಚರ್ ಮತ್ತು ಅನಿಮಲ್ಸ್ ಎಂಬ ಟ್ವಿಟರ್ ಪೇಜ್ ಹಂಚಿಕೊಂಡಿದೆ. ಜೂನ್ 5 ರಂದು ಹಂಚಿಕೊಂಡಿರುವ ಈ ವಿಡಿಯೋ 18,500 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು ಸುಮಾರು 7,000 ರೀಟ್ವೀಟ್ ಆಗಿದೆ. ಅಲ್ಲದೆ ಇತರೆ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುವ ಮೂಲಕ ಕೋಟ್ಯಾಂತರ ಜನರ ಗಮನ ಸೆಳೆದಿದೆ.

ವಿಡಿಯೋಗಳನ್ನು ನೋಡಿದ ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ನಾವು ಕೂಡ ಈ ಪಾಂಡಾದಂತೆ ವಿಶ್ರಾಂತಿ ಪಡೆಯಬೇಕು ಮತ್ತು ಅವುಗಳಿರುವ ಜಾಗವನ್ನು ನಾವು ಕೂಡ ಸೇರಬೇಕು ಎಂದು ತಮ್ಮ ಮನೋಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಪ್ರಾಣಿಪ್ರೀಯರು ಈ ವಿಡಿಯೋವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್

ರಾಮನಗರದಲ್ಲಿ ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಸಂಬಂಧಿಕರು; ವಿಡಿಯೋ ವೈರಲ್

Published On - 4:08 pm, Mon, 7 June 21