Viral Video: ಪಾಕಿಸ್ತಾನದ ವೈದ್ಯೆಯ ಭಾವಪೂರ್ಣ ಹಾಡಿಗೆ ನೆಟ್ಟಿಗರು ಫಿದಾ!
ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಪ್ರಾರಂಭಿಸಿದಂತೆಯೇ ಜನರಲ್ಲಿ ಚಿಂತೆ ಕಾಡಲು ಪ್ರಾರಂಭಿಸಿದರು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೇರಿಕೊಂಡಿದ್ದ ರೋಗಿಗಗಳ ಮಾನಸಿಕ ಸ್ಥೈರ್ಯ ಹದಗೆಡುತ್ತಿತ್ತು. ಅವರನ್ನು ಹುರಿದುಂಬಿಸಲು ವೈದ್ಯರು ಹಾಗೂ ಸಿಬ್ಬಂದಿ ಸಂಗೀತದ ಮೊರೆ ಹೋದರೆ.
ಕೊವಿಡ್ ಸೋಂಕಿತರಿಗೆ ಸ್ಥೈರ್ಯ ತುಂಬಲು ಹಾಗೂ ಮಾನಸಿಗೆ ಚೈತನ್ಯ ತುಂಬಲು ಪಾಕಿಸ್ತಾನದ ವೈದ್ಯೆ ಭಾವಪೂರ್ಣವಾಗಿ ಹಾಡು ಹೇಳಿದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ನೋಡಿ ನೆಟ್ಟಿಗರು ವೈದ್ಯರನ್ನು ಹುರುದುಂಬಿಸಿರುವುದರಿಂದ ವೈದ್ಯೆ ಹೃತ್ಪೂರ್ವಕ ಧನ್ಯವಾದವನ್ನು ತಿಳಿಸಿದ್ಧಾರೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಪ್ರಾರಂಭಿಸಿದಂತೆಯೇ ಜನರಲ್ಲಿ ಚಿಂತೆ ಕಾಡಲು ಪ್ರಾರಂಭಿಸಿದರು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೇರಿಕೊಂಡಿದ್ದ ರೋಗಿಗಗಳ ಮಾನಸಿಕ ಸ್ಥೈರ್ಯ ಹದಗೆಡುತ್ತಿತ್ತು. ಅವರನ್ನು ಹುರಿದುಂಬಿಸಲು ವೈದ್ಯರು ಹಾಗೂ ಸಿಬ್ಬಂದಿ ಸಂಗೀತದ ಮೊರೆ ಹೋದರೆ. ವಿವಿಧ ಶೈಲಿಯ ನೃತ್ಯ ಮಾಡುವುದರ ಮೂಲಕ ಜನರನ್ನೂ ಹಾಗೂ ಆಸ್ಪತ್ರೆಯಲ್ಲಿದ ರೋಗಿಗಳಿಗೆ ಧೈರ್ಯ ಹೇಳಲು ಆರಂಭಿಸಿದರು. ಈ ನಿಟ್ಟಿನಲ್ಲಿ ಪಾಕಿಸ್ತಾನದ ವೈದ್ಯೆ ಭಾವಪೂರ್ಣವಾಗಿ ಹಾಡು ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.
Haven’t heard the original but now I don’t want to cuz I’m afraid it might ruin this. Just amazed wow!!! https://t.co/AdiRBIqDxp
— Aman Mishra (@mishraboi) June 5, 2021
ವಿಡಿಯೋದಲ್ಲಿ ಗಮನಿಸುವಂತೆ ನುಸ್ರತ್ ಫತೇಹ್ ಅಲಿ ಖಾನ್ ಅವರ ಪ್ರಸಿದ್ಧ ಗಜಲ್ಅನ್ನು ಭಾಪೂರ್ಣವಾಗಿ ವೈದ್ಯೆ ಹಾಡಿದ್ದಾರೆ. ಟ್ವಿಟರ್ ಬಳಕೆದಾರರೋರ್ವರು ಹಂಚಿಕೊಂಡ ಬಳಿಕ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾಂತೆಯೇ ವೈದ್ಯರ ಇನ್ಸ್ಟಾಗ್ರಾಂ ಮತ್ತುಯುಟ್ಯೂಬ್ ಫಾಲಾವರ್ಸ್ ಸಂಖ್ಯೆಯಲ್ಲಿ ಏರಿಕೆಯಾಗಿದೆ. ನನ್ನನ್ನು ಹುರಿದುಂಬಿಸಿದ್ದಕ್ಕೆ ಧನ್ಯವಾದಗಳು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿಯೂ ಕೂಡಾ ವಿಡಿಯೋ ಪ್ರಶಂಸೆ ಗಳಿಸಿಕೊಳ್ಳುತ್ತಿದೆ.
View this post on Instagram
Published On - 2:35 pm, Mon, 7 June 21