Viral Video: ಮಜಾ ಅಂದ್ರೆ ಇದಪ್ಪಾ! 7.5 ಟನ್ ತೂಕದ ಟ್ರಕ್ನಲ್ಲಿ ಸಣ್ಣ ಸ್ಕೂಟರ್ ಕೊಂಡೊಯ್ದ ಪೊಲೀಸರು
ಟ್ರಕ್ನಲ್ಲಿ ಸುಮಾರು 20-30 ಸ್ಕೂಟರ್ ಒಯ್ಯಬಹುದು. ಅಂತಹ ದೈತ್ಯಾಕಾರದ ಟ್ರಕ್ ಮೂಲಕ ಆ ಚಿಕ್ಕ ಎಲೆಕ್ಟ್ರಾನಿಕ್ ಸ್ಕೂಟರ್ ತೆಗೆದುಕೊಂಡ ಹೋದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ವಶಪಡಿಸಿಕೊಂಡ 15 ಕಿಲೊಗ್ರಾಮ್ಗಳಿಗಿಂತ ಕಡಿಮೆ ತೂಕವಿರುವ ಸ್ಕೂಟರ್ಅನ್ನು ಸಾಗಿಸಲು 7.5 ಟನ್ ತೂಕದ ಟ್ರಕ್ಅನ್ನು ಬಳಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್ನಲ್ಲಿ ನಡೆದ ಈ ಘಟನೆಯ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ದೃಶ್ಯ ನೋಡಿದ ನೆಟ್ಟಿಗರು ಹಾಸ್ಯ ಮಾಡಿದ್ದಾರೆ.
ವರದಿಗಳ ಪ್ರಕಾರ, ಜೂನ್ 4ರಂದು ಪೊಲೀಸರು ಹೆರೆಫೋರ್ಡ್ನ್ನಲ್ಲಿ ಸಣ್ಣ ಇಲೆಕ್ಟ್ರಾನಿಕ್ ಸ್ಕೂಟರ್ಅನ್ನು ವಶಪಡಿಸಿಕೊಂಡರು. ನಂತರ ದೊಡ್ಡ್ ಟ್ರಕ್ ಮೂಲಕ ಸ್ಕೂಟರ್ಟನ್ನು ತೆಗೆದುಕೊಂಡು ಹೋಗಲಾಯಿತು. ಸಾರ್ವಜನಿಕ ರಸ್ತೆಗಳಲ್ಲಿ ಸವಾರನನ್ನು ಗುರುತಿಸಿದ ನಂತರ ಸ್ಕೂಟರ್ಅನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿತು.
‘ಅಂತಹ ಸ್ಥಳಗಳಲ್ಲಿ ಇ-ಸ್ಕೂಟರ್ ಬಳಸಿದರೆ ನೀವು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹಾಗೂ ನಿಗದಿತ ದಂಡವನ್ನೂ ಪಾವತಿಸಬೇಕಾಗುತ್ತದೆ’ ಎಂದು ಇಲಾಖೆ ಪೋಸ್ಟ್ ಮಾಡಿದೆ. ಟ್ರಕ್ನಲ್ಲಿ ಸುಮಾರು 20-30 ಸ್ಕೂಟರ್ ಒಯ್ಯಬಹುದು. ಅಂತಹ ದೈತ್ಯಾಕಾರದ ಟ್ರಕ್ ಮೂಲಕ ಆ ಚಿಕ್ಕ ಎಲೆಕ್ಟ್ರಾನಿಕ್ ಸ್ಕೂಟರ್ ತೆಗೆದುಕೊಂಡ ಹೋದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಈ ದೃಶ್ಯ ಇದೀಗ ಬಾರೀ ಚರ್ಚೆಗೂ ಕಾರಣವಾಗಿದೆ.
ಚಿತ್ರ ಸಂಭಾಷಣೆಯು ಇದೀಗ ತರ್ಕವನ್ನು ಹುಟ್ಟುಹಾಕಿದ್ದು, ಅಷ್ಟು ಸಣ್ಣ ಸ್ಕೂಟರ್ ತೆಗೆದುಕೊಂಡು ಹೋಗಲು ಅಷ್ಟು ದೊಡ್ಡ ಟ್ರಕ್ ಬಳಸಿದ್ದೀರಿ ಎಂದು ಸಾಮಾಜಿಕ ಬಳಕೆದಾರರು ಹೇಳಿದ್ದಾರೆ. ಅಷ್ಟು ದೊಡ್ಡ ಟ್ರಕ್ ಬಳಸಿ ಸಂಪನ್ಮ ಲವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಇನ್ನೋರ್ವರು ಹೇಳಿದ್ದಾರೆ. ಆ ಸ್ಕೂಟರ್ಅನ್ನು ಮಡಚಿ ಕಾರಿನಲ್ಲಿ ಇರಿಸಿ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಚಿರಂಜೀವಿ ಸರ್ಜಾ ಇಲ್ಲದೇ ಉರುಳಿತು ಒಂದು ವರ್ಷ; ಅಣ್ಣನಿಗೆ ಧ್ರುವ ಭಾವುಕ ಪತ್ರ ವೈರಲ್
Viral Video: ಪಾಕಿಸ್ತಾನದ ವೈದ್ಯೆಯ ಭಾವಪೂರ್ಣ ಹಾಡಿಗೆ ನೆಟ್ಟಿಗರು ಫಿದಾ!