Viral Video: ಸೊಂಟದಲ್ಲಿ ರಿಂಗು ತಿರುಗಿಸುತ್ತಾ 50 ಮೆಟ್ಟಿಲು ಏರಿ ಹುಲಾ ಹೂಪಿಂಗ್ನಲ್ಲಿ ವಿಶ್ವ ದಾಖಲೆ ಮುರಿದ ಚೆನ್ನೈ ಬಾಲಕ!
Hula Hooping: ಸುಗುಮಾರ್ ಗಿನ್ನಿಸ್ ದಾಖಲೆಯನ್ನು ಮುರಿಯುವ ಗುರಿಯನ್ನು ಹೊಂದಿದ್ದರಿಂದ ಕಳೆದ ಎರಡು ವರ್ಷಗಳಿಂದ ಹುಲಾ ಹೂಪಿಂಗ್ ಅಭ್ಯಾಸ ಮಾಡುತ್ತಿದ್ದಾನೆ. ಅಂತಿಮವಾಗಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸಾಧನೆಯ ಮೆಟಗ್ಟಿಲೇರಿದ್ದಾನೆ.
ನಡೆದು ಮೆಟ್ಟಿಲೇರಲು ಕಷ್ಟ ಎಂಬ ಕಾರಣಕ್ಕೆ ಎಸ್ಕಲೇಟರ್ ಬಳಸುತ್ತಿರುವ ಈ ಜಾಯಮಾನದಲ್ಲಿ ಇಲ್ಲೊಬ್ಬ ಹುಡುಗ ಸೊಂಟದಲ್ಲಿ ರಿಂಗು ತಿರುಗಿಸುತ್ತಾ 50 ಮೆಟ್ಟಿಲುಗಳನ್ನು ಏರಿದ್ದಾನೆ. ಬಹಳ ಕಡಿಮೆ ಸಮಯದಲ್ಲಿ ಹುಲಾ ಹೂಪಿಂಗ್ ಮಾಡಿದ್ದು 50 ಮೆಟ್ಟಿಲುಗಳನ್ನು ಏರಿ ವಿಶ್ವ ದಾಖಲೆಯನ್ನು ಮುರಿದಿದ್ದಾನೆ. ಇವನ ಸಾಧನೆ ನೋಡಿ ಆಶ್ಚರ್ಯಗೊಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೆನ್ನೈನ ಸುಗುಮಾರ್ ಎಂಬ ಬಾಲಕ 18.28 ಸೆಕೆಂಡುಗಳಲ್ಲಿ ನಂಬಲಾಗದ ಸಾಧನೆ ಮಾಡಿರುವುದು ನೆಟ್ಟಿಗರನ್ನು ಆಶ್ಚರ್ಯಚಕಿರನ್ನಾಗಿ ಮಾಡಿದೆ. ಬಾಲಕ ಸೊಂಟದಲ್ಲಿ ರಿಂಗ್ಅನ್ನು ಇರಿಸಿಕೊಂಡು ಸೊಂಟದು ಸುತ್ತಲೂ ತಿರುಗಿಸುತ್ತಾ 50 ಮೆಟ್ಟಿಲುಗಳನ್ನು ಏರಿದ್ದಾನೆ. ಸಾಧನೆಯ ಗುರಿ ತಲುಪಲು ಮುಖ್ಯವಾಗಿ ಶ್ರದ್ಧೆ ಬೇಕು. ಪರಿಶ್ರಮ ಇರಲೇಬೇಕು. ಜತೆಗೆ ಸಾಧಿಸುವತ್ತ ಮಾತ್ರ ಗುರಿ ಹೊಂದಿರಬೇಕು. ಪ್ರಯತ್ನದಲ್ಲಿ ಶ್ರದ್ಧೆ ಇದ್ದರೆ ಸಾಧನೆಯ ಪಥವೇರುವುದು ಖಂಡಿತ ಎಂಬುದಕ್ಕೆ ಈ ಬಾಲಕನೇ ಸಾಕ್ಷಿ.
ಸಾಧನೆಯ ಹಾದಿ ಹಿಡಿಯಬೇಕು ಎಂಬುದು ಎಲ್ಲರ ಆಸೆ. ಕೆಲವರಿಗೆ ಅದೃಷ್ಟ ಒಲಿದುಬರುತ್ತದೆ ಎಂಬುದು ನಂಬಿಕೆ. ಆದರೆ ಸಾಧಿಸುವ ಛಲವೊಂದಿದ್ದರೆ ಯಾವ ವಯಸ್ಸಿನಲ್ಲಿಯೂ ಸಾಧಿಸಬಹುದು. ಪ್ರಯತ್ನ ಬೇಕು ಅಷ್ಟೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಈ ಬಾಲಕ. ಆಟ, ತುಂಟಾಟಗಳ ನಡುವೆಯೂ ಸಾಧಿಸಲೇಬೇಕು ಎಂದು ಎರಡು ವರ್ಷಗಳಿಂದ ಸತತ ಪ್ರಯತ್ನ ಪಟ್ಟು ಸಾಧನೆಯ ಮೆಟ್ಟಿಲೇರಿದ್ದಾನೆ.
View this post on Instagram
ಸುಗುಮಾರ್ ಗಿನ್ನಿಸ್ ದಾಖಲೆಯನ್ನು ಮುರಿಯುವ ಗುರಿಯನ್ನು ಹೊಂದಿದ್ದರಿಂದ ಕಳೆದ ಎರಡು ವರ್ಷಗಳಿಂದ ಹುಲಾ ಹೂಪಿಂಗ್ ಅಭ್ಯಾಸ ಮಾಡುತ್ತಿದ್ದಾನೆ. ಅಂತಿಮವಾಗಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸಾಧನೆಯ ಮೆಟಗ್ಟಿಲೇರಿದ್ದಾನೆ. ಆನ್ಲೈನಲ್ಲಿ ವಿಡಿಯೋ ಹರಿಬಿಡುತ್ತಿದ್ದಂತೆಯೇ ಅನೇಕರು ಬಾಲಕನನ್ನು ಹುರುದುಂಬಿಸಿದ್ದಾರೆ. ಬಾಲಕನ ಪರಿಶ್ರಮಕ್ಕೆ ಶ್ಲಾಘನೆಗಳು ವ್ಯಕ್ತವಾಗಿವೆ. ಸೊಂಟದಲ್ಲಿ ರಿಂಗ್ ತಿರುಗಿಸುತ್ತಾ ಓಡುತ್ತಿರುವುದನ್ನು ನೋಡಿದ ನೆಟ್ಟಿಗರು ಆತನ ಶ್ರದ್ಧೆಯನ್ನು ಮೆಚ್ಚಲೇ ಬೇಕು ಎಂದು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ:
Viral Video: ಕೊಂಚ ಸ್ಲಿಪ್ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ
Viral Video: ಅಪಹರಿಸಲು ಬಂದ ಕಿಡ್ನಾಪರ್ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ 11 ವರ್ಷದ ಬಾಲಕಿ!
Published On - 11:09 am, Tue, 8 June 21