AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರದಲ್ಲಿ ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಸಂಬಂಧಿಕರು; ವಿಡಿಯೋ ವೈರಲ್

ಸಂಬಂಧಿಕರು ಅಪ್ರಾಪ್ತರಿಗೆ ಮದ್ಯ ಕುಡಿಸಿದ್ದಾರೆ. ಮದ್ಯಪಾನವನ್ನು ಕುಡಿದ ಮಕ್ಕಳು ನಿಲ್ಲಲಾಗದೆ ವಾಲಾಡುತ್ತಾ ನಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಮೂವರು ಸಂಬಂಧಿಕರು ಸುಮಾರು 7 ಮಕ್ಕಳಿಗೆ ಮದ್ಯ ಕುಡಿಸಿ ಮಜಾ ತೆಗೆದುಕೊಂಡಿದ್ದಾರೆ. ಮಾಂಸದೂಟದ ಜೊತೆಗೆ ಮಕ್ಕಳು ಆಲ್ಕೋಹಾಲ್ ಸೇವಿಸಿದ್ದಾರೆ.

ರಾಮನಗರದಲ್ಲಿ ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಸಂಬಂಧಿಕರು; ವಿಡಿಯೋ ವೈರಲ್
ಮದ್ಯ ಕುಡಿಯುತ್ತಿರುವ ಮಕ್ಕಳು
sandhya thejappa
|

Updated on:Jun 07, 2021 | 10:37 AM

Share

ರಾಮನಗರ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಅದೆಷ್ಟೋ ಕುಟುಂಬಗಳು ಈ ಮದ್ಯಪಾನದಿಂದ ಬೀದಿಗೆ ಬಂದಿರುವ ಸಂಗತಿಗಳು ಇವೆ. ಮಕ್ಕಳು ಮದ್ಯಪಾನ ದಾಸರಾಗಿದ್ದಾರೆ ಅಂತ ಎಷ್ಟೋ ತಂದೆ- ತಾಯಿಯರು ಕಣ್ಣೀರಿನೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಆದರೆ ಜಿಲ್ಲೆಯ ಕನಕಪುರ ತಾಲೂಕಿನ ಮರಳಿಪುರ ಗ್ರಾಮದಲ್ಲಿ ಸಂಬಂಧಿಕರೇ ಮಕ್ಕಳಿಗೆ ಮದ್ಯವನ್ನು ಕುಡಿಸಿ ವಿಕೃತಿ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಕೋಡಿಹಳ್ಳಿ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಾಗಿದೆ.

ಲಾಕ್​ಡೌನ್​ ಸಮಯದಲ್ಲಿ ಸಂಬಂಧಿಕರು ಅಪ್ರಾಪ್ತರಿಗೆ ಮದ್ಯ ಕುಡಿಸಿದ್ದಾರೆ. ಮದ್ಯಪಾನವನ್ನು ಕುಡಿದ ಮಕ್ಕಳು ನಿಲ್ಲಲಾಗದೆ ವಾಲಾಡುತ್ತಾ ನಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಮೂವರು ಸಂಬಂಧಿಕರು ಸುಮಾರು 7 ಮಕ್ಕಳಿಗೆ ಮದ್ಯ ಕುಡಿಸಿ ಮಜಾ ತೆಗೆದುಕೊಂಡಿದ್ದಾರೆ. ಮಾಂಸದೂಟದ ಜೊತೆಗೆ ಮಕ್ಕಳು ಆಲ್ಕೋಹಾಲ್ ಸೇವಿಸಿದ್ದಾರೆ.

ಮರಳಿಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಮಕ್ಕಳು ಮದ್ಯವನ್ನು ಸೇವಿಸಿದ್ದು, ಈ ಘಟನೆ ವಾರದ ಹಿಂದೆ ನಡೆದಿದೆ. ಕೋಡಿಹಳ್ಳಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡಿದ್ದಾರೆ. ಮೂವರಲ್ಲಿ ಅರುಣ್ ಕುಮಾರ್ ಎಂಬಾತನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢವಾದ ಹಿನ್ನೆಲೆ ಕೊವಿಡ್ ಕೇರ್ ಸೆಂಟರ್​ಗೆ ದಾಖಲಿಸಲಾಗಿದೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.

ಅಪ್ರಾಪ್ತ ಮಕ್ಕಳಿಗೆ ಊಟದ ಜೊತೆ ಮಧ್ಯಪಾಮ ಮಾಡಿಸಿ ಅದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಮೂವರ ವಿರುದ್ಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ ಎಂದು ರಾಮನಗರ ಎಸ್​ಪಿ ಗಿರೀಶ್ ಎಸ್ ತಿಳಿಸಿದ್ದಾರೆ.

ಇದನ್ನೂ ಓದಿ 

Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!

Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?

(Relatives drank alcohol for children in Ramanagar and the video of children drinking alcohol is viral)

Published On - 10:35 am, Mon, 7 June 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?