Art : ನೀವು Autonomous Sensory Meridian Response -ASMR Art ಬಗ್ಗೆ ಕೇಳಿದ್ದೀರಾ? ASMR ಎಂದರೆ ಒಂದು ಬಗೆಯ ಜುಮ್ಮೆನ್ನಿಸುವ ಸಂವೇದನೆ. ಅದು ನೆತ್ತಿಯಿಂದ ಶುರುವಾಗಿ ಕತ್ತಿನ ಹಿಂಭಾಗದಿಂದ ಬೆನ್ನೆಲುಬಿನವರೆಗೆ ವಿಸ್ತರಿಸುವ ಒಂದು ಅಕಾರಣ ಅಥವಾ ಯಾವುದೇ ಸ್ಪಷ್ಟ ಕಾರಣವಿರದೇ ಬರುವ ಒಂದು ಆಹ್ಲಾದಕರ ಭಾವ. ಇದನ್ನು ಕನ್ನಡದಲ್ಲಿ “ಸ್ವಾಯತ್ತ ಸಂವೇದನೆಯ ಉಚ್ಛ್ರಾಯದ ಪ್ರತಿಕ್ರಿಯೆ” ಎನ್ನಬಹುದು. ಇಂಥ ಭಾವನೆಗಳನ್ನು ಉದ್ದೀಪಿಸುವ ಒಂದು ಕಲಾ ಪ್ರಕಾರವೇ ಇದೆ. ಅದೇ ASMR ಕಲೆ. ಯಾವುದೋ ತೀವ್ರವಾದ ಧ್ಯಾನಸ್ಥ ಸ್ಥಿತಿಯಲ್ಲಿ ಎಡೆಬಿಡದ ಪ್ರಯತ್ನದಿಂದ ಅಥವಾ ಒಂದು ರೀತಿಯ ಟ್ರಾನ್ಸ್ ಉತ್ತುಂಗಕ್ಕೆ ಹೋದಾಗ ಸೃಷ್ಟಿಗೊಳ್ಳುವ ಈ ಕಲಾಕೃತಿಗಳು ನೋಡುಗರನ್ನೂ ಕ್ಷಣಕಾಲವಾದರೂ ಆ ದಿವ್ಯ ಸ್ಥಳಕ್ಕೆ ಕರೆದೊಯ್ಯಬಲ್ಲುದು ಎನ್ನುತ್ತದೆ. ಈ ಕಲಾವಿದರು ತಮ್ಮ ಸೃಷ್ಟಿಕಾರ್ಯದಲ್ಲಿ ನಿರತರಾದಾಗಲೇ ಅದನ್ನು ನೋಡುತ್ತಿದ್ದರೆ ನಾವೂ ಅದರಾಳಕ್ಕೆ ಇಳಿದಂಥ ಭಾವನೆ ಬರುತ್ತದೆ. ಇದಕ್ಕೆ ಒಂದು ಉದಾಹರಣೆಯಾಗಿ ಸಮುದ್ರದ ಅಲೆಗಳನ್ನು ಚಿತ್ರಿಸುತ್ತಿರುವ ಕಲಾವಿದರ ಈ ವಿಡಿಯೋವನ್ನು ನೋಡಬಹುದು.
ಇದನ್ನೂ ಓದಿ : Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ
ಹಳೆಯ Typewriter ಸಹಾಯದಿಂದ ಜೇಮ್ಸ್ ಕುಕ್ (James Cook) ಎಂಬ ಕಲಾವಿದರು ಈ ಕಲಾಕೃತಿಯನ್ನು ನಿರ್ಮಿಸುವಲ್ಲಿ ತಲ್ಲೀನರಾಗಿದ್ಧಾರೆ. ಅವರ ಕೌಶಲ, ತಾದಾತ್ಮ್ಯ, ಕಲಾವಂತಿಕೆ ಮತ್ತು ಕೊನೆಯಲ್ಲಿ ತೋರುವ ಅಗಾಧ ದರ್ಶನದಿಂದಾಗಿ ನಮ್ಮಲ್ಲಿ ಒಂದು ರೀತಿಯ ಆನಂದ ಹಾಗೂ ಶಾಂತಿಯನ್ನು ಮೂಡಿಸುತ್ತದೆ. ಈ ವಿಡಿಯೋ ಅನ್ನು ಈಗಾಗಲೇ 10 ಲಕ್ಷ ಜನ ಮೆಚ್ಚಿದ್ದಾರೆ. ಸ್ಪಾಸ್ಟಿಕ್ ಸೆರೆಬ್ರಲ್ ಪಾಲ್ಸಿಯಿಂದಾಗಿ (static cerebral palsy) ಸಾಂಪ್ರದಾಯಿಕ ಕಲೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದ ಪೌಲ್ ಸ್ಮಿತ್ (Paul Smith) ಎಂಬ ಕಲಾವಿದರನ್ನು ಇದು ನೆನಪಿಸುತ್ತಿದೆ. ಅವರು ಟೈಪ್ರೈಟರ್ ಮೂಲಕ ಕಲಾಸೃಷ್ಟಿಯ ಮಾರ್ಗವನ್ನು ಕಂಡುಕೊಂಡವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:22 pm, Sat, 1 July 23