Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್ ತಯಾರಿಸಿ ಸವಿದ ಗಗನಯಾತ್ರಿ

|

Updated on: Aug 21, 2023 | 6:30 PM

Sandwich : ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಜೀವನವಿಧಾನದ ಬಗ್ಗೆ ಆಗಾಗ ವಿಡಿಯೋಗಳನ್ನು ಕುತೂಹಲದಿಂದ ನೋಡುತ್ತಿರುತ್ತೀರಿ. ಆದರೆ ಇದೀಗ ಅರಬ್​ನ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್​ ತಯಾರಿಸಿದ ತಿಂದ ಈ ವಿಡಿಯೋ ಅನ್ನು ಮಾತ್ರ ಮತ್ತೆಮತ್ತೆ ನೋಡುತ್ತೀರಿ! ನೆಟ್ಟಿಗರಂತೂ ಸಾಕಷ್ಟು ಪ್ರಶ್ನೆಗಳನ್ನು ಇವರಿಗೆ ಕೇಳಿದ್ದಾರೆ. ನೀವು?

Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್ ತಯಾರಿಸಿ ಸವಿದ ಗಗನಯಾತ್ರಿ
ಅರಬದ ಗಗನಯಾತ್ರಿ ಸುಲ್ತಾನ್​ ಅಲ್​ ನೆಯಾದಿ ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​​ವಿಚ್ ತಯಾರಿಸುತ್ತಿರುವ ದೃಶ್ಯ
Follow us on

UAE : ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ನಡೆಸುವ ಜೀವನಶೈಲಿಯ ಬಗ್ಗೆ ಸಾಮಾನ್ಯರಿಗೆ ಕುತೂಹಲ ಇದ್ದೇ ಇರುತ್ತದೆ. ಆಗಾಗ ಈ ಕುತೂಹಲವನ್ನು ತಣಿಸುವ ಅಥವಾ ಹೆಚ್ಚಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗಗನಯಾತ್ರಿಯೊಬ್ಬರು ಹನಿ ಸ್ಯಾಂಡ್​ವಿಚ್ (Honey Sandwich)​ ಎಂಬ ಕ್ವಿಕ್ ಬ್ರೇಕ್​ಫಾಸ್ಟ್​ ತಯಾರಿಸಿಕೊಂಡಿದ್ದಾರೆ. ಯುಎಇ ಗಗನಯಾತ್ರಿ ಸುಲ್ತಾನ್​ ಅಲ್​ ನೆಯಾದಿ (Sultan Al Neyadi) ಈ ಬ್ರೇಕ್​ಫಾಸ್ಟ್ ಅನ್ನು ತಯಾರಿಸಿದ್ದಲ್ಲದೆ ತಿನ್ನುವ ವಿಡಿಯೋ ಅನ್ನು ಕೂಡ X (Twitter) ನಲ್ಲಿ ಪೋಸ್ಟ್​ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ಅನ್ನು ಕುತೂಹಲದಿಂದ ನೋಡುತ್ತಿದ್ದಾರೆ ಮತ್ತು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಬಾಂಗ್ಲಾಭಕ್ಷ್ಯ; ಅವಲಕ್ಕಿಯ ಕೊಲೆಯಾಗಿದೆ ಇಲ್ಲಿ! ಆಕ್ರೋಶಗೊಂಡ ನೆಟ್ಟಿಗರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗುರುತ್ವಾಕರ್ಷಣೆ ಇಲ್ಲದೆ ತೇಲುವ ಬ್ರೆಡ್​, ಮತ್ತು ಮೇಲ್ಮುಖವಾಗಿ ಚಿಮ್ಮಿ ಬ್ರೆಡ್ಡಿಗೆ ಅಂಟಿಕೊಳ್ಳುವ ಜೇನು, ತಯಾರಾದ ಸ್ಯಾಂಡ್ವಿಚ್​ ಅನ್ನು ತಿನ್ನುವ ನೆಯಾದಿ… ಈ ಸುಂದರವಾದ ದೃಶ್ಯ ಅನೇಕ ನೆಟ್ಟಿಗರನ್ನು ಬೆರಗಿಗೆ ತಳ್ಳಿದೆ. ಆ. 20ರಂದು ಹಂಚಿಕೊಂಡಿ ಈ ವಿಡಿಯೋ ಅನ್ನು ಈತನಕ 1.7 ಲಕ್ಷ ಜನರು ನೋಡಿದ್ದಾರೆ. 300ಕ್ಕೂ ಹೆಚ್ಚು ಜನರು ರೀಪೋಸ್ಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್​ ತಯಾರಿಕೆ

ಇದು ನಿಜಕ್ಕೂ ಬಹಳ ಆಕರ್ಷಕವಾಗಿದೆ. ಇಂಥ ವಿಡಿಯೋಗಳನ್ನು ಹುಡುಕಿ ನೋಡುತ್ತೇವೆ, ಮಕ್ಕಳಿಗೂ ತೋರಿಸುತ್ತೇವೆ ಎಂದಿದ್ದಾರೆ ಕೆಲವರು. 42 ವರ್ಷದ ಗಗನಯಾತ್ರಿ ನೆಯಾದಿ ಆರು ತಿಂಗಳ ಸಂಶೋಧನೆಯನ್ನು ಮುಗಿಸಿ ಸೆ. 1ರಂದು ಭೂಮಿಗೆ ಮರಳಲಿದ್ದಾರೆ. ನಿಮ್ಮ ತೂಕ ಮೊದಲು ಎಷ್ಟಿತ್ತು ಈ ಆರುತಿಂಗಳಲ್ಲಿ ಎಷ್ಟಕ್ಕೆ ಇಳಿದಿದೆ ಎಂದು ಕೇಳಿದ್ದಾರೆ ಕೆಲವರು. ನೀವು ಜಗತ್ತಿನ ಒಳಿತಿಗಾಗಿ ಶ್ರಮಿಸುತ್ತಿದ್ದೀರಿ, ನಿಮ್ಮನ್ನು ನಾವು ಪ್ರೀತಿಸುತ್ತೇವೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಹೀಗೊಬ್ಬ ಅಸಿಸ್ಟಂಟ್​ ಮಿ. ಮಾರುತಿ; ನೆಟ್ಟಿಗರ ಕೋಪವೇಕೆ ನೆತ್ತಿಗೇರಿದೆ?

ಅಯ್ಯೋ ಒಂದು ಸ್ಯಾಂಡ್​ವಿಚ್​ ತಿಂದರೆ ಸಾಕಾಗುತ್ತದೆಯೇ? ಎಂದು ಕೇಳಿದ್ದಾರೆ ಒಬ್ಬರು. ಅಲ್ಲಿ ಮೈಕ್ರೋಆರ್ಗ್ಯಾನಿಸಂ ತೇಲುತ್ತಿರುತ್ತವೆಯೇ? ಎಂದು ಕೇಳಿದ್ದಾರೆ ಮತ್ತೊಬ್ಬರು. ಬಾಹ್ಯಾಕಾಶ ಪ್ರಯಾಣದಲ್ಲಿ ಉಪಯೋಗಿಸಲು ವಿಶೇಷವಾದ ಜೇನನ್ನು ತಯಾರಿಸಲಾಗುತ್ತದೆಯೆ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:28 pm, Mon, 21 August 23