ಭಾವಿ ಗಂಡನಿಗೆ ಕನ್ನಡಕ ಇಲ್ಲದೇ ಓದಲು ಬರಲ್ಲ ಎಂದು ಹಸೆಮಣೆಯಲ್ಲೇ ಮದುವೆಯಾಗಲ್ಲ ಎಂದ ಯುವತಿ

| Updated By: guruganesh bhat

Updated on: Jun 26, 2021 | 7:14 PM

ಜತೆಗೆ ವಂಚನೆಯ ಆರೋಪ ಒಡ್ಡಿ ಯುವಕ ಮತ್ತು ಯುವಕನ ಕುಟುಂಬದ ಮೇಲೆ ಪ್ರಕರಣವನ್ನೂ ದಾಖಲಿಸಿದಳು. ಅಲ್ಲದೇ ಈಗಾಗಲೇ ವರದಕ್ಷಿಣೆ ಎಂದು ಒಂದು ದ್ವಿಚಕ್ರ ವಾಹನ ಮತ್ತು ಹಣವನ್ನೂ ಯುವಕನ ಮನೆಯವರು ತೆಗೆದುಕೊಂಡಿದ್ದರಂತೆ. ಅದನ್ನೂ ಮರಳಿ ನೀಡುವಂತೆ ಯುವತಿ ಆಗ್ರಹಿಸಿದ್ದಾಳೆ.

ಭಾವಿ ಗಂಡನಿಗೆ ಕನ್ನಡಕ ಇಲ್ಲದೇ ಓದಲು ಬರಲ್ಲ ಎಂದು ಹಸೆಮಣೆಯಲ್ಲೇ ಮದುವೆಯಾಗಲ್ಲ ಎಂದ ಯುವತಿ
ಸಾಂಕೇತಿಕ ಚಿತ್ರ
Follow us on

ಭಾವಿ ಪತಿ ಬಳಿ ಕನ್ನಡಕ ಇಲ್ಲದೇ ಓದಲು ಸಾಧ್ಯವಿಲ್ಲ ಎಂದು ತಿಳಿದ ವಧು ಮದುವೆ ಮಂಟಪದಲ್ಲೇ ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆ ಮುರಿದುಕೊಂಡಿದ್ದೊಂದೇ ಅಲ್ಲದೇ, ಮದುಮಗ ಮತ್ತು ಆತನ ಕುಟುಂಬದ ಮೇಲೂ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಉತ್ತರ ಪ್ರದೇಶದ ಜಮ್ಲಾಪುರದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ.

ಅದು ಮದುವೆಯ ದಿನ. ಮದುವೆಯ ಶಾಸ್ತ್ರಗಳು ಸರಾಗವಾಗಿ ಯಾವುದೇ ಅಡ್ಡಿಯಿಲ್ಲದೇ ನಡೆಯುತ್ತಿದ್ದವು. ವರ ಚೆನ್ನಾಗಿ ತಯಾರಿಯೇ ಕುಳಿತಿದ್ದ. ಆದರೆ ಆತ ಕನ್ನಡಕ ಧರಿಸಿದ್ದ. ವಧುವಿಗೆ ಮತ್ತು ಆಕೆಯ ಖಾಸಾ ಸಂಬಂಧಿ ಮಹಿಳೆಯೋಬ್ಬಳಿಗೆ ಏನನ್ನಿಸಿತೋ ಏನೋ. ಕನ್ನಡಕ ಧರಿಸಿ ಕುಳಿತ ಆತನ ಕಣ್ಣಿನಮೇಲೆ ಅನುಮಾನ ಶುರುವಾಯಿತು. ಹಸೆ ಮಂಟಪದಲ್ಲೇ ತನ್ನ ಭಾವಿ ಪತಿಯ ಬಳಿ ಕನ್ನಡಕ ತೆಗೆದು ಸುದ್ದಿ ಪತ್ರಿಕೆಯೊಂದನ್ನು ಓದಲು ವಧು ಕೇಳಿದಳು. ಈ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರ ತಾಳಿ ಕಟ್ಟಿಸಿಕೊಳ್ಳುತ್ತೇನೆ ಎಂದುಬಿಟ್ಟಳು.

ಆದರೆ ವರನ ಬಳಿ ಕನ್ನಡಕ ಇಲ್ಲದೇ ಓದಲು ಸಾಧ್ಯವಿರಲಿಲ್ಲ. ಆತ ಕನ್ನಡಕ ಇಲ್ಲದೇ ಓದಲು ಬರುವುದಿಲ್ಲ ಎಂದು ಒಪ್ಪಿಕೊಂಡ. ಇದೇ ಕಾರಣ ಒಡ್ಡಿದ ಯುವತಿ ನಿನ್ನ ಜತೆ ಮದುವೆ ಆಗಲಾರೆ ಎಂದು ಮದುವೆ ಆಗಲು ನಿರಾಕರಿಸಿದಳು. ಜತೆಗೆ ವಂಚನೆಯ ಆರೋಪ ಒಡ್ಡಿ ಯುವಕ ಮತ್ತು ಯುವಕನ ಕುಟುಂಬದ ಮೇಲೆ ಪ್ರಕರಣವನ್ನೂ ದಾಖಲಿಸಿದಳು. ಅಲ್ಲದೇ ಈಗಾಗಲೇ ವರದಕ್ಷಿಣೆ ಎಂದು ಒಂದು ದ್ವಿಚಕ್ರ ವಾಹನ ಮತ್ತು ಹಣವನ್ನೂ ಯುವಕನ ಮನೆಯವರು ತೆಗೆದುಕೊಂಡಿದ್ದರಂತೆ. ಅದನ್ನೂ ಮರಳಿ ನೀಡುವಂತೆ ಯುವತಿ ಆಗ್ರಹಿಸಿದ್ದಾಳೆ.

ಯುವಕನ ಮನೆಯವರ ಮೇಲೆ ಯುವತಿಯ ದೂರಿನ ಆಧಾರದಲ್ಲಿ ಎಪ್​ಐಆರ್ ದಾಖಲಾಗಿದೆ. ಆದರೆ ಪೊಲೀಸರು ಪರಸ್ಪರ ಒಪ್ಪಂದದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಿದ್ದರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 

ಗುಜರಾತ್​ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್

ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

(UP bride rejects marry after know grooms did not read without glass)