ಪ್ರೀತಿ ಮಾಯೆ ಹುಷಾರ್ ಎಂದು ತಿಳಿದವರು ಹೇಳುತ್ತಾರೆ. ಈ ಪ್ರೀತಿಯೆಂಬ ಮಾಯೆಯಲ್ಲಿ ಸಿಲುಕಿ ತಮ್ಮ ಸುಂದರ ಜೀವನವನ್ನೇ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಹೌದು ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಜೀವದ ಮೋಸದಾಟಕ್ಕೆ ಬೇಸರಗೊಂಡು ಅದೆಷ್ಟೋ ಜನರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂತಹದೇ ಘಟನೆಯೊಂದು ಇದೀಗ ನಡೆದಿದ್ದು, ದುಡ್ಡಿಗಾಗಿ ಪ್ರಿಯತಮೆ ಮಾಡುತ್ತಿದ್ದ ಬ್ಲಾಕ್‌ಮೇಲ್‌ಗೆ ಬೇಸತ್ತು ಉದ್ಯಮಿಯೊಬ್ಬರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ಇಲ್ಲಿನ ಉದ್ಯಮಿಯೊಬ್ಬರು ಗೆಳತಿಯ ಬ್ಲಾಕ್‌ಮೇಲ್ ಕಾಟಕ್ಕೆ ಬೇಸತ್ತು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 15 ರಂದು ಈ ಘಟನೆ ನಡೆದಿದ್ದು, ಉದ್ಯಮಿ ಮನೋಜ್ ಕುಮಾರ್ (34) ಸೈರ್‌ಪುರ ಪ್ರದೇಶದ ಹೋಟೆಲ್ ಒಂದರಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಬಳಿ ಪೊಲೀಸರಿಗೆ ಪಿಸ್ತೂಲ್, ಕಾರ್ಟ್ರಿಡ್ಜ್ ಶೆಲ್‌ಗಳು ಮತ್ತು ಡೆತ್ ನೋಟ್ ಸಿಕ್ಕಿದ್ದು, ಆ ಲೆಟರ್‌ನಲ್ಲಿ ಉದ್ಯಮಿ ತಾನು ಪ್ರೀತಿಸಿದಾಕೆಯಿಂದ ಮೋಸ ಹೋಗಿರುವುದಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದ್ವಾಪರ ಯುಗವನ್ನು ನೆನಪಿಸುವಂತಿದೆ ಈ ದೃಶ್ಯ, ಗೋವಿನ ಮುಂದೆ ಗರಿ ಬಿಚ್ಚಿ ಕುಣಿದ ಮಯೂರಿ
Lucknow businessman dies by suicide after alleged blackmailing by girlfriend.
In a note, the man stated his girlfriend had been blackmailing him for money and had charged him in a false case of rape.
His note also read his soul won’t rest in peace until justice granted. pic.twitter.com/lnoANgKcg0
— Vani Mehrotra (@vani_mehrotra) July 16, 2024
ʼಆಕೆ ನನ್ನನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದು ಮಾತ್ರವಲ್ಲದೆ ಹಣಕ್ಕಾಗಿ ಪದೇ ಪದೇ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಳು. ನಾನು ನನ್ನ ಫ್ಲಾಟ್ ಅನ್ನು 7 ಲಕ್ಷ ರೂಪಾಯಿಗಳಿಗೆ ಮಾರಿ ಆ ಹಣವನ್ನು ಕೂಡಾ ಆಕೆಗೆ ನೀಡಿದ್ದೇನೆ. ಹೀಗಿದ್ದರೂ ಆಕೆಯ ಹಣದ ದಾಹ ಕಡಿಮೆಯಾಗಿರಲಿಲ್ಲ. ನನ್ನ ಈ ಸಾವಿಗೆ ನ್ಯಾಯ ಸಿಗುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲʼ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.
ವಾಣಿ ಮೆಹ್ರೋತ್ರಾ (vani_mehrotra) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ