Video: ತಂದೆಯ ಎದುರೇ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗ, ದೇವರಂತೆ ಬಂದು ಕಾಪಾಡಿದ ಪೊಲೀಸ್‌ ಕಾನ್‌ಸ್ಟೇಬಲ್

ಕೆಲವೊಬ್ಬರು ಕ್ಷುಲ್ಲಕ ಕಾರಣಗಳಿಗೆ ಮನನೊಂದು, ತಮ್ಮೆಲ್ಲಾ ಸಮಸ್ಯೆಗಳಿಗೆ ಸಾವು ಒಂದೇ ಪರಿಹಾರವೆಂದು ವಿಷ ಸೇವಿಸಿಯೋ ಅಥವಾ ನದಿಗೆ, ಬಾವಿಗೆ ಹಾರಿಯೋ ಪ್ರಾಣ ಕಳೆದುಕೊಳ್ಳಲುವ ನಿರ್ಧಾರಕ್ಕೆ ಬರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಸಾವೊಂದೇ ಪರಿಹಾರವೆಂದು ತನ್ನ ತಂದೆಯ ಎದುರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಆ ಸಂದರ್ಭದಲ್ಲಿ ಅಲ್ಲಿಗೆ ದೇವರತೆ ಬಂದ ಪೊಲೀಸ್‌ ಅಧಿಕಾರಿ ಆ ಯುವಕನನ್ನು ನದಿಗೆ ಹಾರದಂತೆ ತಡೆದಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Video: ತಂದೆಯ ಎದುರೇ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗ, ದೇವರಂತೆ ಬಂದು ಕಾಪಾಡಿದ ಪೊಲೀಸ್‌ ಕಾನ್‌ಸ್ಟೇಬಲ್
ವೈರಲ್​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 10:27 AM

ಪೊಲೀಸರು ಕಳ್ಳರನ್ನು, ಕೊಲೆಗಟುಕರನ್ನು ಹಾಗೂ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಶಿಕ್ಷೆಯನ್ನು ನೀಡುವುದು ಮಾತ್ರವಲ್ಲದೆ ಮಾನವೀಯ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುವಂತಹದ್ದು, ಜನರ ಸಮಸ್ಯೆಗಳನ್ನು ಸ್ವತಃ ಮುಂದೆ ನಿಂತು ಪರಿಹರಿಸುವಂತಹದ್ದು ಮಾಡುತ್ತಿರುತ್ತಾರೆ. ಪೊಲೀಸರು ಜನಪರವಾಗಿ ಕೆಲಸ ಮಾಡುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ಅಂಥದ್ದೇ ಮಾದರಿ ಪೊಲೀಸರೊಬ್ಬರು ಇದೀಗ ಸುದ್ದಿಯಲ್ಲಿದ್ದು, ತನ್ನ ತಂದೆಯ ಎದುರೇ ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನೊಬ್ಬನನ್ನು ಆ ಪೊಲೀಸ್‌ ತಮ್ಮ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಯುವಕನೊಬ್ಬ ತನ್ನ ತಂದೆಯ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದಯವಿಟ್ಟು ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡ ಎಂದ್ರೂ ಯುವಕ ತಂದೆಯ ಮಾತನ್ನು ಕೇಳದೆ ನದಿಗೆ ಹಾರುವ ನಿರ್ಧಾರವನ್ನು ಮಾಡುತ್ತಾನೆ. ಆ ಸಂದರ್ಭದಲ್ಲಿ ಸಮಯ ಪ್ರಜ್ಞೆಯಿಂದ ಪೊಲೀಸ್‌ ಕಾನ್‌ಸ್ಟೇಬಲ್‌ ಶಿವ ಶ್ಯಾಮ್‌ ಯುವಕನನ್ನು ಇತ್ತ ಕಡೆ ಎಳೆದು ಪ್ರಾಣ ರಕ್ಷಿಸಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿ ಸಚಿನ್‌ ಕೌಶಿಕ್‌ (upcopsachin) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ತಂದೆ ಕೈ ಮುಗಿದು ಕೇಳಿಕೊಂಡರೂ ಮಾತು ಕೇಳದ ಮಗ ಬ್ರಿಡ್ಜ್‌ ಮೇಲೆ ನಿಂತು ನದಿಗೆ ಹಾರಲು ಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಪೊಲೀಸ್‌ ಪೇದೆಯೊಬ್ಬರು ಬಂದು ನದಿಗೆ ಹಾರಲು ಯತ್ನಿಸಿದ ಯುವಕನನ್ನು ಕ್ಷಣಾರ್ಧದಲ್ಲಿ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ… ಇರಾನ್‌ ಪೊಲೀಸರು ಎಷ್ಟು ಫ್ರೆಂಡ್ಲಿ ನೋಡಿ…

ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ ವಿಡಿಯೋ 40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಮೂಲ್ಯ ಜೀವವನ್ನು ಉಳಿಸಿದ ಪೊಲೀಸ್‌ ಅಧಿಕಾರಿಗೆ ನನ್ನ ನಮನಗಳುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಖಾಕಿ ರೂಪದ ದೇವರುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:25 am, Wed, 7 August 24