Video: ಅಬ್ಬಬ್ಬಾ… ಇರಾನ್ ಪೊಲೀಸರು ಎಷ್ಟು ಫ್ರೆಂಡ್ಲಿ ನೋಡಿ…
ಪ್ರತಿಯೊಂದು ದೇಶಗಳಲ್ಲೂ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು ಇಂತಿಷ್ಟೇ ಎಂದು ನಿಗದಿ ಪಡಿಸಲಾಗಿರುತ್ತದೆ. ಒಂದು ವೇಳೆ ಗಾಡಿ ಓವರ್ ಸ್ಪೀಡ್ ಆಗಿದ್ರೆ ಫೈನ್ ಬೀಳೋದು ಗ್ಯಾರಂಟಿ. ಆದ್ರೆ ಇರಾನ್ ದೇಶದಲ್ಲಿ ಈ ರೂಲ್ಸ್ ಬ್ರೇಕ್ ಮಾಡಿದ್ರೆ ಫೈನ್ ಕಟ್ಟಂಗಿಲ್ಲ, ಬದಲಿಗೆ ಎರಡು ಗಂಟೆಗಳ ಕಾಲ ಪೊಲೀಸ್ ಸ್ಟೇಷನ್ ಎದುರು ಗಾಡಿಯನ್ನು ನಿಲ್ಲಿಸಬೇಕಂತೆ. ಈ ಒಂದು ಇಂಟರೆಸ್ಟಿಂಗ್ ವಿಚಾರವನ್ನು ಪುತ್ತೂರಿನ ಟ್ರಾವೆಲರ್ ಸಿನಾನ್ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇರಾನ್ ಪೊಲೀಸರು ಎಷ್ಟು ಫ್ರೆಂಡ್ಲಿ ಎಂಬುದನ್ನು ಕೂಡಾ ವಿವರಿಸಿದ್ದಾರೆ.
ಯಾವುದೇ ದೇಶದಲ್ಲಾಗಿರಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಇಂತಿಷ್ಟು ವಾಹನ ಸವಾರರಿಗೆ ಇಂತಿಷ್ಟು ಫೈನ್ ಬಿದ್ದೇ ಬೀಳುತ್ತದೆ. ಕೆಲ ಟ್ರಾಫಿಕ್ ಪೊಲೀಸರಂತೂ ವಾಹನ ತಪಾಸಣೆ ನೆಪದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಾರೆ. ಆದ್ರೆ ಇರಾನ್ ದೇಶದಲ್ಲಿ ವಾಹನಗಳನ್ನು ಓವರ್ ಸ್ಪೀಡ್ ಆಗಿ ಓಡಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದೆ ಫೈನ್ ಎಲ್ಲ ಕಟ್ಟಂಗಿಲ್ಲಂತೆ. ಈ ತಪ್ಪಿಗೆ ಶಿಕ್ಷೆಯಾಗಿ ವಾಹನ ಸವಾರರು ತಮ್ಮ ಗಾಡಿಯನ್ನು ಪೊಲೀಸ್ ಸ್ಟೇಷನ್ ಎದುರಲ್ಲಿ 2 ಗಂಟೆಗಳ ಕಾಲ ನಿಲ್ಲಿಸಬೇಕಂತೆ. ಜೊತೆಗೆ ಫೈನ್ ರೂಪದಲ್ಲಿ ಹಣ ಕೊಟ್ರು ಇಲ್ಲಿನ ಪೊಲೀಸರು ಸ್ವೀಕಾರ ಮಾಡುವುದಿಲ್ಲಂತೆ. ಹೀಗೆ ಇರಾನ್ ದೇಶದ ಪೊಲೀಸರು ಮತ್ತು ಅವರು ಜನರೊಂದಿಗೆ ಫ್ರೆಂಡ್ಲಿಯಾಗಿ ವ್ಯವಹರಿಸುವ ರೀತಿಯ ಬಗ್ಗೆ ಪುತ್ತೂರಿನ ಟ್ರಾವೆಲರ್ ಸಿನಾನ್ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮಹೇಂದ್ರಾ ಸ್ಕಾರ್ಟಿಯೋ ಕಾರಿನಲ್ಲಿಯೇ ವಿಶ್ವ ಪರ್ಯಟನೆ ಮಾಡುತ್ತಿರುವ ಸಿನಾನ್ ಇತ್ತೀಚಿಗಷ್ಟೇ ಇರಾನ್ ದೇಶಕ್ಕೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಬಾರ್ಡರ್‌ನಿಂದ ಇರಾನ್ ರಾಜಧಾನಿಗೆ ಪ್ರಯಾಣಿಸುತ್ತಿದ್ದಾಗ, ಸಿನಾನ್ ಕಾರ್ ಅನ್ನು ಓವರ್ ಸ್ಪೀಡ್ ಆಗಿ ಓಡಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದರು. ಆಗ ಪೊಲೀಸರು ಅವರನ್ನು ಚೇಸ್ ಮಾಡುತ್ತಾ ಬಂದು ಇವರ ವಾಹನವನ್ನು ನಿಲ್ಲಿಸುತ್ತಾರೆ. ಮತ್ತು ಸ್ಪೀಡ್ ಆಗಿ ವಾಹನವನ್ನು ಓಡಿಸಿದ್ದೀರಿ ಅಲ್ವಾ ಅದಕ್ಕೆ ವಾಹನವನ್ನು ನಿಲ್ಲಿಸಿದ್ದು ಎಂದು ಪೊಲೀಸರು ಹೇಳುತ್ತಾರೆ. ಹಾಗದ್ರೆ ಇವಾಗ ನಾನು ಎಷ್ಟು ಫೈನ್ ಕಟ್ಬೇಕು ಎಂದು ಕೇಳುತ್ತಾರೆ. ಅದಕ್ಕೆ ಇಲ್ಲಪ್ಪಾ ಫೈನ್ ಎಲ್ಲಾ ಕಟ್ಟಂಗಿಲ್ಲ ನಿನ್ನ ಕಾರ್ ಅನ್ನು 2 ಗಂಟೆಗಳ ಕಾಲ ಪೊಲೀಸ್ ಸ್ಟೇಷನ್ ಎದುರುಗಡೆ ನಿಲ್ಲಿಸಬೇಕು ಅದುವೆ ಶಿಕ್ಷೆ ಎಂದು ಪೊಲೀಸರು ಸಿನಾನ್ ಬಳಿ ಹೇಳುತ್ತಾರೆ. ಹೀಗೆ ಪೊಲೀಸ್ ಸ್ಟೇಷನ್‌ಗೆ ಹೋಗುವಾಗ ನನ್ನ ಕಾರಿನಲ್ಲಿ ಡಿಸೇಲ್ ಇಲ್ಲ ಎಂದು ಹೇಳಿದಾಗ ಸ್ವತಃ ಪೊಲೀಸರೇ ತಮ್ಮ ದುಡ್ಡಿನಲ್ಲಿ ಡಿಸೇಲ್ ಹಾಕಿಸಿ ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಬಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಯಾವುದೇ ಲಂಚ ತೆಗೆದುಕೊಳ್ಳದೆ, ಸುಲಿಗೆ ಮಾಡದೆ ಜನರೊಂದಿಗೆ ಮೃದುವಾಗಿ ವ್ಯವಹರಿಸುವ ಇರಾನಿನ ದಕ್ಷ ಹಾಗೂ ಸಹೃದಯಿ ಪೊಲೀಸರ ಈ ಉತ್ತಮ ಗುಣದ ಬಗ್ಗೆ ಸಿನಾನ್ (united.wander) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರತಿನಿತ್ಯ ಕಾಲೇಜಿಗೆ ಹೋಗುತ್ತಿದ್ದ ಬಸ್ಸಿನ ಡ್ರೈವರ್- ಕಂಡಕ್ಟರ್ಗೆ ಪ್ರೀತಿಯ ಉಡುಗೊರೆ ನೀಡಿದ ವಿದ್ಯಾರ್ಥಿನಿಯರು
ಜುಲೈ 13 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ ಕಡೆ ಸಿಕ್ಕಿದ್ದೇ ಚಾನ್ಸ್ ಅಂತ ಹಣವನ್ನು ಸುಲಿಗೆ ಮಾಡ್ತಿದ್ರುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇರಾನಿಯನ್ನರಿಗೆ ದಯೆ ಭಾವ ತುಂಬಾನೇ ಇದೆ. ಅವರು ಪ್ರತಿಯೊಬ್ಬರಿಗೂ ಗೌರವ ನೀಡುತ್ತಾರೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ