Google Doodle: ಪ್ಯಾರಿಸ್‌ ಒಲಿಂಪಿಕ್ಸ್‌ 2024 ಸ್ಪೋರ್ಟ್ಸ್‌ ಕ್ಲೈಂಬಿಂಗ್‌ ಸೆಮಿಫೈನಲ್;‌ ವಿಶೇಷ ಡೂಡಲ್‌ ಹಂಚಿಕೊಂಡ ಗೂಗಲ್

ಪ್ಯಾರಿಸ್‌ ಒಲಿಂಪಿಕ್ಸ್‌ 2024 ಕ್ರೀಡಾಕೂಟವನ್ನು ಗೂಗಲ್‌ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದೆ. ಹೌದು ಒಲಿಂಪಿಕ್ಸ್‌ ಸ್ಪರ್ಧೆ ಆರಂಭವಾದಾಗಿನಿಂದಲೂ ಗೂಗಲ್‌ ಬೇರೆ ಬೇರೆ ಸ್ಪೋರ್ಟ್ಸ್‌ ಈವೆಂಟ್‌ಗಳ ಡೂಡಲ್‌ಗಳನ್ನು ಹಂಚಿಕೊಳ್ಳುತ್ತಾ ಬಂದಿದೆ. ಇಂದು ಸ್ಪೋರ್ಟ್ಸ್‌ ಕ್ಲೈಂಬಿಂಗ್‌ ಸ್ಪರ್ಧೆಯ ವಿಶೇಷ ಡೂಡಲ್‌ ರಚಿಸುವ ಮೂಲಕ, ಈ ಒಂದು ಸ್ಪರ್ಧೆಗೆ ಗೂಗಲ್‌ ವಿಶೇಷ ಗೌರವವನ್ನು ಸಲ್ಲಿಸಿದೆ.

Google Doodle: ಪ್ಯಾರಿಸ್‌ ಒಲಿಂಪಿಕ್ಸ್‌ 2024 ಸ್ಪೋರ್ಟ್ಸ್‌ ಕ್ಲೈಂಬಿಂಗ್‌ ಸೆಮಿಫೈನಲ್;‌ ವಿಶೇಷ ಡೂಡಲ್‌ ಹಂಚಿಕೊಂಡ ಗೂಗಲ್
ಗೂಗಲ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 11:51 AM

ಗೂಗಲ್‌ ದಿನಕ್ಕೊಂದು ಡೂಡಲ್‌ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ 2024 ಕ್ರೀಡಾಕೂಟಕ್ಕೆ ಗೌರವ ಸಲ್ಲಿಸುತ್ತಿದೆ. ಈ ಹಿಂದೆ ಸ್ಕೇಟ್‌ ಬೋರ್ಡಿಂಗ್‌, ಫುಟ್ಬಾಲ್‌, ಜಿಮ್ನಾಸ್ಟಿಕ್‌, ಸರ್ಫಿಂಗ್‌ ಇತ್ಯಾದಿ ಗೇಮ್‌ಗಳಿಗೆ ನಮನ ಸಲ್ಲಿಸಿದ್ದ ಗೂಗಲ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ 12 ನೇ ದಿನವಾದ ಇಂದು ಸ್ಪೋರ್ಟ್ಸ್‌ ಕ್ಲೈಂಬಿಂಗ್‌ ಸ್ಪರ್ಧೆಗೆ ಗೌರವ ಸಲ್ಲಿಸಿದೆ. ಗೂಗಲ್‌ ಈ ಸ್ಪರ್ಧೆಯನ್ನು ವಿಶೇಷ ಅನಿಮೇಟೆಡ್‌ ಡೂಡಲ್‌ನೊಂದಿಗೆ ಸೆಲೆಬ್ರೇಟ್‌ ಮಾಡುವ ಮೂಲಕ ಈ ಒಂದು ಸ್ಪರ್ಧೆಗೆ ವಿಶೇಷ ಗೌರವವನ್ನು ಸಲ್ಲಿಸಿದೆ.

ಇಂದಿನ ಡೂಡಲ್‌ ನಲ್ಲಿ ಗೂಗಲ್‌ ನೀಲಿ ಬಣ್ಣದ ಹಕ್ಕಿಯೊಂದು ಸಾಹಸಮಯವಾಗಿ ಬೆಟ್ಟವನ್ನು ಏರುವುದನ್ನು ತೋರಿಸಲಾಗಿದೆ. ಇದರಲ್ಲಿ ನೀಲಿ ಬಣ್ಣದ ಅನಿಮೇಟೆಡ್‌ ಹಕ್ಕಿಯು ಹದ್ದಿನ ಆಕಾರದಲ್ಲಿರುವ ಬೃಹತ್‌ ಬೆಟ್ಟವನ್ನು ಹಂತಹಂತವಾಗಿ ಏರುವ ದೃಶ್ಯವನ್ನು ಕಾಣಬಹುದು. ಈ ವಿಶೇಷ ಡೂಡಲ್‌ ಸ್ಪೋರ್ಟ್ಸ್‌ ಕ್ಲೈಂಬಿಂಗ್‌ ಕ್ರೀಡೆಯ ಉತ್ಸಾಹ ಮತ್ತು ಸವಾಲು, ಸಾಹಸವನ್ನು ಸಂಕೇತಿಸುತ್ತದೆ. ಮತ್ತು ಇಂದಿನ ಕ್ಲೈಂಬಿಂಗ್‌ ಸೆಮಿ-ಫೈನಲ್‌ ಸ್ಪರ್ಧೆಯನ್ನು ಹೈಲೆಟ್‌ ಮಾಡಲು ಗೂಗಲ್‌ ಈ ವಿಶೇಷ ಡೂಡಲ್‌ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ನೀರಜ್ ಚೋಪ್ರಾ ಚಿನ್ನ ಗೆದ್ದ ದಿನವನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಣೆ

ಏನಿದು ಸ್ಪೋರ್ಟ್ಸ್‌ ಕ್ಲೈಂಬಿಂಗ್?

ಸ್ಪೋರ್ಟ್ ಕ್ಲೈಂಬಿಂಗ್ ಎನ್ನುವುದು ಕೃತಕ ಗೋಡೆ, ಕಲ್ಲು ಬಂಡೆಯನ್ನು ಏರುವ ಸಾಹಸಮಯ ಸ್ಪರ್ಧೆಯಾಗಿದೆ. ಇದು 1940 ರ ದಶಕದಲ್ಲಿ ಪ್ರಾರಂಭವಾಯಿತು. ನಂತರ 1980 ರ ದಶಕದಲ್ಲಿ ಈ ಕ್ರೀಡೆಯು ಜನಪ್ರಿಯವಾಗಲು ಪ್ರಾರಂಭವಾಯಿತು. ಸ್ಪೋರ್ಟ್ ಕ್ಲೈಂಬಿಂಗ್ ವಿವಿಧ ಕ್ರೀಡೆಗಳನ್ನು ಒಳಗೊಂಡಿದೆ. ಒಲಿಂಪಿಕ್ ಗೇಮ್ಸ್ ಪ್ಯಾರಿಸ್ 2024 ಕ್ಲೈಂಬಿಂಗ್ ಸ್ಪರ್ಧೆಯ ಬಗ್ಗೆ ನೀಡಿದ ಮಾಹಿತಿಯ ಪ್ರಕಾರ, ಇಂದು ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಪುರುಷರ ಬೌಲ್ಡರ್‌ ಮತ್ತು ಲೀಡ್‌ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಜೆನ್ಸ್‌ ವ್ಯಾನ್ ರೆನ್ಸ್‌ ಬರ್ಗ್‌, ಆಸ್ಟ್ರೇಲಿಯಾದ ಸಿ ಹ್ಯಾರಿಸನ್‌, ಗ್ರೇಟ್‌ ಬ್ರಿಟನ್‌ನ ಎಚ್‌. ಮ್ಯಾಕ್‌ ಆರ್ಥರ್‌, ಸ್ಲೊವೇನಿಯಾದ ಎಲ್‌. ಪೊಟೊಕಾರ್‌, ಚೀನಾದ ವೈಎಫ್‌. ಪ್ಯಾನ್‌ ಸೇರಿದಂತೆ ಅನೇಕರು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ