Viral Post: ಆನ್​ಲೈನ್​ ಮೂಲಕ ಆರ್ಡರ್ ಮಾಡಿದ್ದ ಆಹಾರದಲ್ಲಿ ಸತ್ತ ಇಲಿ ಪತ್ತೆ

|

Updated on: Jan 17, 2024 | 11:58 AM

ಮುಂಬೈನ ಬಾರ್ಬೆಕ್ಯು ನೇಷನ್‌ ಹೋಟೆಲಿನಿಂದ ಆನ್​ಲೈನ್​ ಮೂಲಕ ಆರ್ಡರ್ ಮಾಡಿದ್ದ ಸಸ್ಯಾಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಆಹಾರ ಸೇವಿಸಿದ ವ್ಯಕ್ತಿ ವಾಂತಿ, ವಾಕರಿಕೆ ಹಾಗೂ ಹೊಟ್ಟೆ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

Viral Post: ಆನ್​ಲೈನ್​ ಮೂಲಕ ಆರ್ಡರ್ ಮಾಡಿದ್ದ ಆಹಾರದಲ್ಲಿ ಸತ್ತ ಇಲಿ ಪತ್ತೆ
Dead Rat in Veg Meal
Image Credit source: X/@shukraj
Follow us on

ಉತ್ತರಪ್ರದೇಶದ  ವಕೀಲ ರಾಜೀವ್ ಶುಕ್ಲಾ(35) ಕೆಲಸದ ವಿಚಾರವಾಗಿ ಮುಂಬೈಗೆ ಬಂದಿದ್ದರು. ಶುದ್ಧ ಸಸ್ಯಹಾರಿಯಾಗಿದ್ದರಿಂದ ಮುಂಬೈನ ಬಾರ್ಬೆಕ್ಯು ನೇಷನ್‌ ಹೋಟೆಲಿನಿಂದ ಆನ್​ಲೈನ್​ ಮೂಲಕ ಪುಡ್​​ ಆರ್ಡರ್ ಮಾಡಿದ್ದಾರೆ. ತುಂಬಾ ಹಸಿವಾಗಿದ್ದರಿಂದ ಆಹಾರ ಬಂದ ಕೂಡಲೇ ಎರಡು ತುತ್ತು ಸವಿದ್ದಿದ್ದಾರೆ. ಇನ್ನೇನು ದಾಲ್​​​ ಬಡಿಸುವಷ್ಟರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಜನವರಿ 8, ರಂದು ಸಂಭವಿಸಿದ ಈ ಭಯಾನಕ ಘಟನೆಯನ್ನು ರಾಜೀವ್ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗುತ್ತಿದ್ದಂತೆ ತಕ್ಷಣವೇ ಬಾರ್ಬೆಕ್ಯು ನೇಷನ್ ಅವರಿಗೆ ಇಮೇಲ್ ಮೂಲಕ ಸೂಚನೆ ನೀಡಿದ್ದಾರೆ. ಇದಲ್ಲದೇ ಈಗಾಗಲೇ ಎರಡು ತುತ್ತು ಅಹಾರ ಸೇವಿಸಿದ್ದರಿಂದ ವಾಂತಿ ವಾಕರಿಕೆ ಪ್ರಾರಂಭವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನು ಓದಿ: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?

ಸದ್ಯ ತನ್ನ ಭಯಾನಕ ಅನುಭವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮೂಲಕ ಹೋಟೆಲ್​​ ,ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ