ಕೆಲವೊಮ್ಮೆ ಕೆಲವೊಂದು ವಿಚಿತ್ರಗಳನ್ನು ನಂಬಲೇಬೇಕು. ಇನ್ನು ಕೆಲವೊಮ್ಮೆ ಸತ್ಯಕ್ಕೆ ವಿರುದ್ಧವಾದ ವಿಚಾರಗಳನ್ನು ನಂಬಬೇಕಾದ ಪರಿಸ್ಥಿತಿ ಎದುರಾಗತ್ತದೆ. ಅಂತಹ ಒಂದು ಘಟನೆ ಕೊಲಂಬಿಯಾದಲ್ಲಿ (Colombia) ಸಂಭವಿಸಿದೆ. ಹೌದು. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮನೆಯೊಂದನ್ನು ನಿರ್ಮಿಸಲಾಗಿದೆ. ಅಂದರೆ ಮನೆಯ ಮಹಡಿಯನ್ನು ನೆಲಕ್ಕೆ ಇರಿಸಿ ಉಲ್ಟಾ ಮನೆಯನ್ನು (Upside Dwon House) ಕಟ್ಟಲಾಗಿದೆ. ಕೊಲಂಬಿಯಾದ ಬೊಗೋಟಾ (Bogota) ಪ್ರದೇಶದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಸದ್ಯ ಇದರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮನೆಯನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಆಪ್ಟಿಕಲ್ ಇಲ್ಯೂಷನ್ ಉಂಟುಮಾಡುವ ಈ ಮನೆಯನ್ನು ನೋಡಲು ಜನರು ದಂಡೇ ಹರಿದುಬರುತ್ತಿದೆ. ಈ ಮನೆಯನ್ನು ಡ್ರೋನ್ ಮೂಲಕ ಹೆರ್ನಾಂಡೊ ರೊಜೊ ರೊಡ್ರಿಗಸ್ ಎನ್ನುವ ಫೋಟೋಗ್ರಾಫರ್ ಚಿತ್ರೀಕರಣವನ್ನೂ ಮಾಡಿದ್ದಾರೆ. ಇದರ ವಿಡಿಯೋವನ್ನು ಯಾಹೂ.ಕಾಂ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ಉಲ್ಟಾ ಕಾಣುವ ಈ ಮನೆಯನ್ನು ಲಾ ಕಾಸಾ ಲೋಕಾ ಎಂದು ಕರೆಯಲಾಗುತ್ತದೆ. ಈ ಮನೆಯನ್ನು ಕೊಲಂಬಿಯಾದ ಗುವಿಯೋ ಪ್ರದೇಶದ ಸಾಂಟಾ ಮರಿಯಾ ಡಿ ಗುಟಾವಿಟಾ ಎನ್ನುವ ಗ್ರಾಮದಲ್ಲಿ ಫ್ರಿಟ್ಜ್ ಶಾಲ್ ಎನ್ನುವವರು ನಿರ್ಮಿಸಿದ್ದಾರೆ. ಈ ಕುರಿತು ರಾಯಿಟರ್ಸ್ ಕೂಡ ವರದಿ ಮಾಡಿದೆ.
An upside down house in Colombia is capturing the imagination of visitors looking for fun following pandemic restrictions https://t.co/wAqMJBrTEM ? @LuisaFGphoto pic.twitter.com/RfPmm0wAQY
— Reuters Pictures (@reuterspictures) January 24, 2022
22 ವರ್ಷದಿಂದ ಕೋಲಂಬಿಯಾದಲ್ಲಿ ನೆಲೆಸಿದ್ದ ಫ್ರಿಟ್ಜ್ ಶಾಲ್ ಅವರು ತಲೆಕೆಳಗಾದ ಮನೆಯನ್ನು ನಿರ್ಮಿಸಲು ಯೋಚಿಸಿದ್ದರು ಇದೇ ಸಂದರ್ಭದಲ್ಲಿ ರಜಾ ದಿನಗಳಲ್ಲಿ ಕೊಲಂಬಿಯಾದಲ್ಲಿ ಸುತ್ತುವ ವೇಳೆ ಈ ರೀತಿ ಆಪ್ಟಿಕಲ್ ಇಲ್ಯೂಷನ್ ಸೃಷ್ಟಿಸುವ ಮನೆಯ ಮಾದರಿಯನ್ನು ನೋಡಿದ್ದರು. ಇದರಿಂದ ಪ್ರೇರಿತಗೊಂಡು ಅದೆ ರೀತಿ ಮನೆಯನ್ನು ನಿರ್ಮಿಸಿದ್ದಾರೆ. ತಲೆಕೆಳಗಾದ ಮನೆಯಲ್ಲಿ ಮನೆಯ ಮಹಡಿಯು ನೆಲಕ್ಕೆ ಹಾಗೂ ಕಾರ್ ಪಾರ್ಕ್ ಮಾಡಿರುವುದು ಮೆಲಕ್ಕೆ ಇರುವುದನ್ನು ಕಾಣಬಹುದು. ಈ ಕುರಿತು ಫ್ರಿಟ್ಜ್ ಶಾಲ್ ಮನೆ .ಕೇವಲ ತಲೆಕೆಳಗಾಗಿ ಇರುವುದು ಮಾತ್ರವಲ್ಲದೆ ಐದು ಡಿಗ್ರಿ ಎಡಕ್ಕೆ ಮತ್ತು ಐದು ಡಿಗ್ರಿ ಹಿಂದಕ್ಕೆ ವಾಲುತ್ತದೆ. ಮನೆಯ ಒಳಗೆ ಪ್ರವೇಶಿಸವ ಪ್ರವಾಸಿಗರಿಗೆ ಮೊದಲೇ ಎಚ್ಚರಿಕೆ ನೀಡಲಾಗುತ್ತದೆ. ಏಕೆಂದರೆ ಮನೆಯ ಒಳಗೆ ಪ್ರವೇಶಿಸಿದಾಗ ತಲೆ ಸುತ್ತಿದ ಅನುಭವವಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ;
Viral Post; ಮಗಳ ತಲೆಯ ಮೇಲಿನ ಹೊಲಿಗೆಯ ಆಕಾರದಲ್ಲಿ ಹೇರ್ಕಟ್ ಮಾಡಿಸಿಕೊಂಡ ತಂದೆ
Published On - 10:27 am, Thu, 27 January 22