ಗರ್ಭವತಿ ಎಂದು ತಿಳಿದ 48 ಗಂಟೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

| Updated By: ವಿವೇಕ ಬಿರಾದಾರ

Updated on: Oct 18, 2022 | 11:05 PM

ಗರ್ಭಿಣಿ ಎಂದು ತಿಳಿದ 48 ಗಂಟೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಶಿಕ್ಷಕಿ

ಗರ್ಭವತಿ ಎಂದು ತಿಳಿದ 48 ಗಂಟೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಸಾಂಧರ್ಬಿಕ ಚಿತ್ರ
Follow us on

ವಾಷಿಂಗ್ಟನ್: ಅಮೇರಿಕದ (United States) ವಾಷಿಂಗ್ಟನ್​ನಲ್ಲಿ (Washington) ಮಹಿಳೆಯೊಬ್ಬಳು ತಾನು ಗರ್ಭಿಣಿ ಎಂದು ತಿಳಿದ 48 ಗಂಟೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸುದ್ದಿ ಓದಿ ಚಕಿತವೆನಿಸಿದರೂ ಇದು ಸತ್ಯ. 23 ವರ್ಷದ ಪೇಟನ್ ಸ್ಟೋವರ್ ಎಂಬ ಮಹಿಳೆ ಒಮಾಹಾದಲ್ಲಿ (Omaha) ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಳಿಗೆ ಇತ್ತೀಚಿಗೆ ಆಯಾಸವಾಗಲು ಪ್ರಾರಂಭಿಸಿತು. ಆದರೆ ಇದನ್ನು ನಿರ್ಲಕ್ಷಿಸಿದ್ದಾಳೆ.

ಮುಂದಿನ ದಿನಗಳಲ್ಲಿ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದಾಗ ಅವರ ಕಾಲುಗಳಲ್ಲಿ ಊತವುಂಟಾಗಿತ್ತು. ಕೂಡಲೆ ಮಹಿಳೆ ವೈದ್ಯರನ್ನು ಭೇಟಿ ಮಾಡಿದಳು. ಈ ವೇಳೆ ವೈದ್ಯರು ನೀವು ಗರ್ಭಿಣಿಯಾಗಿದ್ದೀರಿ ಎಂದು ತಿಳಿಸಿದರು.

ಇದರಿಂದ ಅನುಮಾನಗೊಂಡ ಮಹಿಳೆಯ ಪತಿ, ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗಲೂ ಗರ್ಭಿಣಿಯಾಗಿರುವುದು ದೃಢವಾಗಿದೆ. ಅಲ್ಲದೇ ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಮಗು ಇರುವುದು ಕಂಡು ಬಂದಿದೆ. ಇದಾದ 2 ದಿನಕ್ಕೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದು, ತಾವು ಅಂದುಕೊಂಡಿದ್ದಕ್ಕಿಂತ ಬೇಗನೇ ಮಗು ಜನಿಸಿರುವುದು ದಂಪತಿಗಳಿಗೆ ಬಹಳ ಸಂತೋಷವಾಗಿದೆ.

ಮತ್ತಷ್ಟು ಆಸ್ತಿದಾಯಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 pm, Tue, 18 October 22