‘ನನ್ನ ಹೊಟ್ಟೆ, ನನ್ನ ಹಸಿವು’ ಮದುವೆ ಮೊದಲು ಪಿಝಾ ತಿನ್ನೋಕೆ ಯಾರಪ್ಪಣೆ ಬೇಕಂತೆ?
Hungry bride relishes a pizza : ‘ಬಂದವರೆಲ್ಲ ಉಂಡು ಹೋಗುತ್ತಿದ್ದಾರೆ, ನಮಗೆ ಊಟ ಸಿಗುತ್ತದೋ ಇಲ್ಲವೊ?’ ಅದೆಷ್ಟು ವಧು-ವರರ ಹೊಟ್ಟೆ ತಾಳ ಹಾಕಿರುವುದಿಲ್ಲ ಮದುವೆಯ ದಿನ? ಆದರೆ ಇಂದಿನ ವಧುವರರು ಮುಲಾಜಿಗೆ ಬೀಳುವವರಲ್ಲ!

Viral Video: ಭಾರತೀಯ ವಧು ಎಂದತಕ್ಷಣ ಮುಂಜಾನೆ ಬೇಗ ಎದ್ದು ಮದುವೆಗೆ ಸಂಬಂಧಿಸಿದ ವಿವಿಧ ಪೂಜೆ ಪುನಸ್ಕಾರ ಮತ್ತು ಕಾರ್ಯಗಳಲ್ಲಿ ತೊಡಗಿಕೊಂಡು, ಅನ್ನಾಹಾರವಿಲ್ಲದೆ ಜೋತುಮುಖದಲ್ಲಿ ಕುಳಿತುಕೊಳ್ಳುವ ಸಾಲಂಕೃತ ಹುಡುಗಿ ನಿಮ್ಮ ಕಣ್ಣಮುಂದೆ ಬರುವುದು ಸಹಜ. ಇದರ ಜೊತೆಜೊತೆಗೇ ಮದುವೆ ಮಂಟಪದಲ್ಲಿ ಫೋಟೋ, ವಿಡಿಯೋಗಷ್ಟೇ ನಕ್ಕು ಪೋಸ್ ಕೊಟ್ಟು, ಉಳಿದಂತೆ ಯಾವಾಗ ಹನಿ ನೀರು ಸಿಗುತ್ತದೆಯೋ, ಊಟ ಸಿಗುತ್ತದೆಯೋ ಎಂದು ತಟವಟ ಮಾಡುವ ವಧುವರರ ಚಿತ್ರಣವೂ ಅತೀ ಸಾಮಾನ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮದುವೆ ಮೊದಲೇ ಪಟ್ಟಾಗಿ ಪಿಝಾ ತಿಂದು ತಯಾರಾಗುತ್ತಿದ್ದಾಳೆ ಈ ಆಧುನಿಕ ವಧು.
ಈ ವಿಡಿಯೋ 6,000ಕ್ಕೂ ಹೆಚ್ಚು ಜನರಿಗೆ ಇಷ್ಟವಾಗಿದೆ. ಅನೇಕರು ತಮ್ಮ ಮದುವೆಯ ದಿನ ತಮ್ಮ ಪರಿಸ್ಥಿತಿ ಹೇಗಿತ್ತೆಂಬುದನ್ನು ಹಂಚಿಕೊಂಡಿದ್ದಾರೆ. ‘ನನ್ನ ಮದುವೆಯ ದಿನ ನನ್ನ ಸ್ಥಿತಿ ದೇವರಿಗೇ ಪ್ರೀತಿ. ಆ ದಿನ ಬಹಳ ಟೆನ್ಷನ್ನಲ್ಲಿದ್ದೆ’ ಎಂದಿದ್ದಾರೆ ಒಬ್ಬರು. ‘ತನ್ನ ಮದುವೆಯ ದಿನ ಯಾರಾದರೂ ಪಿಝಾ ತಿನ್ನುತ್ತಾರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಹಸಿವು ಯಾರಪ್ಪನ ಮನೆಯದು ಎಂದು ಕೇಳುತ್ತಿದ್ದೀರಾ?
ಮತ್ತಷ್ಟು ವೈರಲ್ ವಿಡಿಯೋ ಅನ್ನು ನೋಡಲು ಕ್ಲಿಕ್ ಮಾಡಿ
Published On - 5:43 pm, Tue, 18 October 22








