Balancing : ಹಳ್ಳಿಮೂಲದವರಾದ ಅನೇಕರಿಗೆ ಬಾಲ್ಯದಲ್ಲಿ (Childhood) ಸಂತೆ ಜಾತ್ರೆ ಹಬ್ಬಗಳು ಎಂದರೆ ಅದೇ ದೊಡ್ಡ ಮನರಂಜನೆ. ವಾರಗಟ್ಟಲೆ ತಿಂಗಳುಗಟ್ಟಲೆ ವರ್ಷಗಟ್ಟಲೆ ಕುತೂಹಲದಿಂದ ಕಾಯವ ಚಡಪಡಿಕೆ ಅನುಭವಿಸಿವರಿಗೇ ಗೊತ್ತು. ಸಂತೆ ಜಾತ್ರೆಯ ಹೊರತಾಗಿ ಆಗಾಗ ಓಣಿಗಳಿಗೆ ದೊಂಬರಾಟದವರು, ದುರಗಮುರಗ್ಯರು, ವೇಷಗಾರರು, ಹೆಳವರು, ಕೋಲೆತ್ತಿನವರು ಬಂದರೆ ಅದೊಂಥರಾ ಬೇರೆಯದೇ ಜಗತ್ತು. ಕರಡಿ, ಒಂಟೆ, ಆನೆ ಬಂದರಂತೂ ಮುಗಿದೇ ಹೋಯಿತು. ಸರ್ಕಸ್ಗಳು ಮಾತ್ರ ಪಟ್ಟಣಕ್ಕೆ ಬರುತ್ತಿದ್ದವು. ಆ ಅಗಾಧ ಜಗತ್ತಿನ್ನು ಕಣ್ಣುತುಂಬಿಕೊಳ್ಳಲು ಪುಟ್ಟಕಣ್ಣುಗಳೆರಡು ಸಾಲುತ್ತಲೇ ಇರುತ್ತಿರಲಿಲ್ಲ. ಇದೆಲ್ಲವನ್ನೂ ನೆನಪಿಸುವ ಒಂದು ವಿಡಿಯೋ ಇಲ್ಲಿದೆ.
ಈಗಾಗಲೇ ಈ ವಿಡಿಯೋ ಅನ್ನು ಸುಮಾರು 80,000 ಜನರು ಇಷ್ಟಪಟ್ಟಿದ್ದಾರೆ. ವಿದೇಶದ ಬೀದಿಯೊಂದರಲ್ಲಿ ಈ ಸಾಹಸ ಕಲಾವಿದರು ಕಲಾಪ್ರದರ್ಶನ ಮಾಡಿದ್ದಾರೆ. ನಾಯಿ ಇಲ್ಲಿ ವಿಶೇಷ ಆಕರ್ಷಣೆ. ನೆಟ್ಟಿಗರು ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ನಾಯಿ ಹೆದರಿದೆ. ಈ ಕೌಶಲವನ್ನು ಕಲಿಯುವಲ್ಲಿ ಅದು ಈ ಮನುಷ್ಯನಿಂದ ಅದೆಷ್ಟು ಕಿರಿಕಿರಿಯನ್ನು ಅನುಭವಿಸಿರಬಹುದು. ದಯವಿಟ್ಟು ಪ್ರಾಣಿಗಳ ಹಕ್ಕನ್ನು ಗೌರವಿಸಿ. ಮನುಷ್ಯ ಬೇರೆ ಪ್ರಾಣಿಯೇ ಬೇರೆ. ಹೀಗೆಲ್ಲ ನಿಮ್ಮ ಸ್ವಾರ್ಥಕ್ಕಾಗಿ ಪಳಗಿಸಬೇಡಿ ಎನ್ನುತ್ತಿದ್ದಾರೆ ಅನೇಕರು.
ಇದನ್ನೂ ಓದಿ : Viral Video: ಮೋಡಗಳ ಮೇಲೆ ವಿಹರಿಸಬೇಕೆ? ಹಾಗಿದ್ದರೆ ಟರ್ಕಿಗೆ ಬನ್ನಿ
ಇಳಿಸಿರಿ ಕೆಳಗೆ ಆ ನಾಯಿಯನ್ನು, ಅದರ ಬಾಲ ನೋಡಿದರೆ ಗೊತ್ತಾಗುವುದಿಲ್ಲವೆ? ಕಾಲುಗಳ ಮಧ್ಯೆ ಬಾಲವನ್ನು ಮುದುರಿಕೊಳ್ಳುತ್ತಿದೆ ಎಂದರೆ ಅದೆಷ್ಟು ಹೆದರಿರಬೇಡ? ಹೌದು ಅದು ಖಂಡಿತ ಹೆದರಿದೆ ಆದರೆ ಅವನ ಮತ್ತು ಅವನ ಪರಿಣತಿಯ ಮೇಲೆ ಅದಕ್ಕೆ ನಂಬಿಕೆ ಇದೆ, ಅದಕ್ಕೆ ಪ್ರದರ್ಶನದಲ್ಲಿ ಭಾಗಿಯಾಗಿದೆ. ಆದರೂ ಇದು ನಾಯಿಗಳನ್ನು ಪ್ರೀತಿಸುವ ಬಗೆಯಲ್ಲ, ಇದು ಬಳಸಿಕೊಳ್ಳುವ ರೀತಿ… ಹೀಗೆಂದು ತಮ್ಮತಮ್ಮಲ್ಲೇ ಚರ್ಚಿಸುತ್ತಿದ್ದಾರೆ ಜನರು.
ಇದನ್ನೂ ಓದಿ : Viral: ದಿನಕ್ಕೆ ರೂ. 70 ಲಕ್ಷ ಶಾಪಿಂಗ್ ಮಾಡುವುದೇ ಈ ಮಿಲಿಯನೇರ್ ಗೃಹಿಣಿಯ ಹವ್ಯಾಸ
ಇದನ್ನು ಕರಗತ ಮಾಡಿಕೊಳ್ಳುವಾಗ ಬಡಜೀವ ಅದೆಷ್ಟು ಸಲ ನೆಲಕ್ಕೆ ಅಪ್ಪಳಿಸಿದೆಯೋ. ಒಟ್ಟಿನಲ್ಲಿ ಇದು ಅತ್ಯಂತ ಕ್ರೂರತನ ಎಂದು ನೆಟ್ಟಿಗರೆಲ್ಲ ಬೇಸರಪಟ್ಟುಕೊಳ್ಳುತ್ತಿದ್ದಾರೆ. ದಿನೇದಿನೆ ಸೂಕ್ಷ್ಮಗೊಳ್ಳುವ ಈ ಜಗತ್ತಿನಲ್ಲಿ ಅದೆಷ್ಟು ಅಭಿಪ್ರಾಯಗಳು. ಯಾವುದು ಸರಿ ಯಾವುದು ತಪ್ಪು?
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ