
ಉತ್ತರ ಪ್ರದೇಶ, ಮೇ 24: ನಮ್ಮ ಸಮಾಜದಲ್ಲಿ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಸುದ್ದಿಗಳನ್ನು ಕೇಳಿದಾಗ ನಿಜಕ್ಕೂ ಆಘಾತವಾಗುತ್ತದೆ. ಅಂತಹದ್ದೊಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಹಣಕ್ಕಾಗಿ ನನ್ನ ಗಂಡ ತೃತೀಯ ಲಿಂಗಿ ಮಹಿಳೆಯಂತೆ (trans woman) ನಟಿಸಿ ಅಶ್ಲೀಲ ವಿಡಿಯೋಗಳನ್ನು (obscene videos) ಮಾಡುತ್ತಾನೆ ಎಂದು ಆರೋಪಿಸಿದ್ದಾರೆ. ನನ್ನ ಗಂಡ ತಲೆಗೆ ವಿಗ್ ಹಾಗೂ ತುಂಡುಡುಗೆ ತೊಟ್ಟು ಇತರ ಪುರುಷರೊಂದಿಗೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಅದನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ವಿಚಿತ್ರ ಪ್ರಕರಣದ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ನನ್ನ ಪತಿ ಹಣಕ್ಕಾಗಿ ತೃತೀಯ ಲಿಂಗಿಯಂತೆ ವೇಷತೊಟ್ಟು ಅಶ್ಲೀಲ ವಿಡಿಯೋಗಳನ್ನು ಮಾಡಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿ ಬಿಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಇಲ್ಲಿನ ಸರ್ಕಾರಿ ವೈದ್ಯ ಡಾ. ವರುಣೇಶ್ ದುಬೆ ಅವರ ಪತ್ನಿ ಸಿಂಪಿ ಪಾಂಡೆ ಇಂತಹದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಮತ್ತು ದಾಂಪತ್ಯ ದ್ರೋಹ, ನಿಂದನೆ ಮತ್ತು ಮಾನಸಿಕ ಕಿರುಕುಳದ ಆರೋಪದಡಿ ಪತಿಯ ವಿರುದ್ಧ ಎಫ್.ಐ.ಆರ್ ಕೂಡ ದಾಖಲಿಸಿದ್ದಾರೆ. ಆತ ಸರ್ಕಾರಿ ವಸತಿ ಗೃಹದಲ್ಲಿ ತಲೆಗೆ ವಿಗ್, ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ನಟಿಸುತ್ತಾ ಇತರ ಪುರುಷರೊಂದಿಗೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಅದನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಎಂದು ಸಿಂಪಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬೈಕ್ ಓಡಿಸುತ್ತಿದ್ದ ಗಂಡನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಹೆಂಡತಿ
ಪತ್ನಿಯ ಆರೋಪಗಳನ್ನೆಲ್ಲಾ ನಿರಾಕರಿಸಿ ಡಾ. ವರುಣೇಶ್ ದುಬೆ ಪ್ರತಿ ದೂರು ದಾಖಲಿಸಿದ್ದು, ನನ್ನ ಹೆಸರನ್ನು ಹಾಳು ಮಾಡುವ ಸಲುವಾಗಿ ಇದನ್ನು ಮಾಡಲಾಗಿದೆ. ಇದ್ಯಾವುದು ನಿಜವಲ್ಲ. ಆಕೆಯೇ ಈ ಫೇಕ್ ವಿಡಿಯೋಗಳನ್ನು ಸೃಷ್ಟಿಸಿದ್ದಾಳೆ. ನನ್ನ ಪತ್ನಿಯ ಸಂಬಂಧಿ ಸಾಫ್ಟ್‌ವೇರ್ ಇಂಜಿನಿಯರ್, ಅವರ ಸಹಾಯದಿಂದ ಡೀಪ್ ಫೇಕ್ ವಿಡಿಯೋ ಮಾಡಿ ನನ್ನ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪತ್ನಿಯ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೌಟುಂಬಿಕ ಹಿಂಸೆ, ಎಐ ಕುಶಲತೆ, ಸೈಬರ್ ಅಪರಾಧ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ