Viral: ರಸ್ತೆ ಬದಿ ಮೊಮೊಸ್‌ ತಿಂತಾ ನಿಂತಿದ್ದವನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಖದೀಮರು; ಸಿಸಿ ಟಿವಿ ದೃಶ್ಯ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2025 | 9:56 AM

ಇತ್ತೀಚಿನ ದಿನಗಳಲ್ಲಿ ಖತರ್ನಾಕ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ, ಅಂಗಡಿಗಳಿಗೆ ನುಗ್ಗಿ ಚಿನ್ನಾಭರಣ, ಹಣ ಕಳ್ಳತನ ಮಾಡುವ, ಸರಗಳ್ಳತನದ ಒಂದಲ್ಲಾ ಒಂದು ಪ್ರಕರಣಗಳು ದಿನನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಆಘಾತಕಾರಿ ಸಿಸಿ ಟಿವಿ ದೃಶ್ಯ ವೈರಲ್‌ ಆಗಿದ್ದು, ಬೈಕ್‌ನಲ್ಲಿ ಬಂದಂತಹ ಖದೀಮರಿಬ್ಬರು ರಸ್ತೆ ಬದಿ ಮೊಮೊಸ್‌ ತಿಂತಾ ನಿಂತಿದ್ದ ವ್ಯಕ್ತಿಯ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

Viral: ರಸ್ತೆ ಬದಿ ಮೊಮೊಸ್‌ ತಿಂತಾ ನಿಂತಿದ್ದವನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಖದೀಮರು; ಸಿಸಿ ಟಿವಿ ದೃಶ್ಯ ವೈರಲ್‌
ವೈರಲ್​​ ವಿಡಿಯೋ
Follow us on

ಉತ್ತರ ಪ್ರದೇಶ, ಮಾ. 23: ಇತ್ತೀಚಿಗೆ ಕಳ್ಳರ (Thieves) ಹಾವಳಿ ತೀರಾ ಹೆಚ್ಚಾಗಿದೆ. ಮನೆ, ಅಂಗಡಿಗಳಿಗೆ ನುಗ್ಗಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಸರಗಳ್ಳರ (Chain Snatchers) ಹಾವಳಿ ಹೆಚ್ಚಾಗಿದೆ. ಒಂಟಿಯಾಗಿ ಓಡಾಡುವವರ ಚಿನ್ನದ ಸರ, ಪರ್ಸ್‌ ಕಳ್ಳತನವಾಗುವ ಒಂದಲ್ಲಾ ಒಂದು ಪ್ರಕರಣಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಸರಗಳ್ಳತನದ ವಿಡಿಯೋ ವೈರಲ್‌ ಆಗುತ್ತಿದ್ದು, ಬೈಕ್‌ನಲ್ಲಿ (bike) ಬಂದಂತಹ ಖದೀಮರಿಬ್ಬರು ಯಾವುದೇ ಭಯವಿಲ್ಲದೆ ರೋಡ್‌ ಸೈಡಲ್ಲಿ ಮೊಮೊಸ್‌ ತಿಂತಿದ್ದ ನಿಂತಿದ್ದ ವ್ಯಕ್ತಿಯೊಬ್ಬರ ಚಿನ್ನದ ಸರ (gold Chain) ಎಗರಿಸಿ ಪರಾರಿಯಾಗಿದ್ದಾರೆ. ಈ ಸರಗಳ್ಳತನದ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಬೈಕ್‌ನಲ್ಲಿ ಬಂದಂತಹ ಖದೀಮರಿಬ್ಬರು ಮೊಮೊಸ್‌ ತಿಂತಿದ್ದ ವ್ಯಕ್ತಿಯ ಕುತ್ತಿಗೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ನೋಯ್ಡಾದ ಸೆಕ್ಟರ್ 24ರ ಪ್ರದೇಶದಲ್ಲಿರುವ ಸ್ಟ್ಯಾಂಡರ್ಡ್ ಸ್ವೀಟ್ಸ್ ಬಳಿ ಮೊಮೊಸ್ ತಿನ್ನುತ್ತಿದ್ದ ಎಂಜಿನಿಯರ್ ಒಬ್ಬರ ಚಿನ್ನದ ಸರ ಕದ್ದು ಖದೀಮರಿಬ್ಬರು ಪಾರಿಯಾಗಿದ್ದಾರೆ. ಈ ಘಟನೆ ಮಾರ್ಚ್ 19, 2025 ರಂದು ರಾತ್ರಿ 10:30 ರ ಸುಮಾರಿಗೆ ನಡೆದಿದ್ದು, ಎಂಜಿನಿಯರ್‌ ರಸ್ತೆ ಬದಿ ಮೊಮೊಸ್‌ ತಿಂತಿದ್ದ ವೇಳೆ ಬೈಕ್‌ನಲ್ಲಿ ಬಂದಂತಹ ಖದೀಮರಿಬ್ಬರು ಜಾಣತನದಿಂದ ಚಿನ್ನದ ಸರವನ್ನು ಎಗರಿಸಿ ಎಸ್ಕೇಪ್‌ ಆಗಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ
ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌
ಈ ಹಳ್ಳಿಯಲ್ಲಿ ಮದುವೆಯಾಗಿ 7 ದಿನಗಳವರೆಗೆ ಬೆತ್ತಲಾಗಿರಬೇಕಂತೆ ಮಹಿಳೆಯರು
ಮಗಳ ವಯಸ್ಸಿನ ಹುಡುಗಿ ಜತೆ ರಸ್ತೆಯಲ್ಲಿ ವ್ಯಕ್ತಿಯ ರೊಮ್ಯಾನ್ಸ್
ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ರಸ್ತೆಯ ಬದಿಯ ಅಂಗಡಿಯಲ್ಲಿ ವ್ಯಕ್ತಿಯೊಬ್ಬರು ಮೊಮೊಸ್‌ ತಿಂತ ನಿಂತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದಂತಹ ಕಳ್ಳರಿಬ್ಬರಲ್ಲಿ ಒಬ್ಬ ಜಾಣತನದಿಂದ ಚಿನ್ನದ ಸರವನ್ನು ಎರಗಿಸಿ ತಕ್ಷಣ ಎಸ್ಕೇಪ್‌ ಆಗಿದ್ದಾರೆ.

ಇದನ್ನೂ ಓದಿ: ಹೃದಯಸ್ಪರ್ಶಿ ದೃಶ್ಯಕ್ಕೆ ಸ್ಕ್ರಿಪ್ಟೆಡ್‌ ಎಂದು ಕಾಮೆಂಟ್‌ ಮಾಡಿದವನಿಗೆ ಕೌಂಟರ್‌ ಕೊಟ್ಟ ಆನಂದ್‌ ಮಹೀಂದ್ರಾ

ಮಾರ್ಚ್‌ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಪರಾಧಿಗಳಿಗೆ ಭಯ ಎಂಬುದೇ ಇಲ್ಲವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೇ ಕಾರಣಕ್ಕೆ ನಾನು ರಸ್ತೆ ಬದಿ ಮೊಮೊಸ್‌ ತಿನ್ನಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದಕ್ಕೆ ಹೇಳುವುದು ನಾವು ಯಾವಾಗಲೂ ಜಾಗರೂಕರಾಗಿರಬೇಕೆಂದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ