Viral: ಎಸಿ ಸರಿಯಾಗಿ ವರ್ಕ್‌ ಆಗ್ತಿಲ್ಲ ಎಂದು ರೈಲ್ವೆ ಚೈನ್‌ ಎಳೆದ ಪ್ರಯಾಣಿಕನಿಗೆ ಥಳಿಸಿದ ರೈಲ್ವೇ ಪೊಲೀಸ್‌; ವೈರಲ್‌ ಆಯ್ತು ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2024 | 11:16 AM

ಭಾರತೀಯ ರೈಲ್ವೆಗೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ರೈಲಿನಲ್ಲಿ ಎಸಿ ಸರಿಯಾಗಿ ವರ್ಕ್‌ ಆಗ್ತಿಲ್ಲ ಎಂದು ದೂರು ನೀಡಿದಾಗ ಇದಕ್ಕೆ ಯಾರು ಸ್ಪಂದಿಸಿಲ್ಲ ಎಂದು ಪ್ರಯಾಣಿಕರೊಬ್ಬರು ಚೈನ್‌ ಎಳೆದಿದ್ದಾರೆ. ಇದರಿಂದ ಕೋಪಗೊಂಡ ಆರ್‌ಪಿಎಫ್‌ ಸಿಬ್ಬಂದಿ ಪ್ರಯಾಣಿಕನ್ನು ರೈಲಿನಿಂದ ದರದರನೇ ಎಳೆದೊಯ್ದಿದ್ದಾರೆ. ಈ ಬಗ್ಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಅಮಾಯಕರ ಮೇಲೆ ಕೆಲ ಪೊಲೀಸರು ಅಧಿಕಾರದ ಮದದಿಂದ ದರ್ಪ ತೋರುತ್ತಿರುತ್ತಾರೆ. ಈ ಹಿಂದೆಯೂ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಎಸಿ ಸರಿಯಾಗಿ ವರ್ಕ್‌ ಆಗ್ತಿಲ್ಲ ಎಂದು ಹೇಳಿದ ಪ್ರಯಾಣಿಕನಿಗೆ ರೈಲ್ವೇ ಪೊಲೀಸರು ಥಳಿಸಿದ್ದಾರೆ. ಹೌದು ಎಸಿ ಸರಿಯಾಗಿ ಕೂಲಿಂಗ್‌ ಆಗ್ತಿಲ್ಲ ಎಂದು ದೂರು ನೀಡಿದ್ರೂ ಇದಕ್ಕೆ ಯಾರು ಸ್ಪಂದಿಸಿಲ್ಲ ಎಂದು ಪ್ರಯಾಣಿಕರೊಬ್ಬರು ಚೈನ್‌ ಎಳೆದಿದ್ದಾರೆ. ಇದರಿಂದ ಕೋಪಗೊಂಡ ಆರ್‌ಪಿಎಫ್‌ ಸಿಬ್ಬಂದಿ ಪ್ರಯಾಣಿಕನ್ನು ರೈಲಿನಿಂದ ದರದರನೇ ಎಳೆದೊಯ್ದಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ಲಕ್ನೋದಲ್ಲಿ ನಡೆದಿದ್ದು, ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್‌ 13237 ರೈಲಿನ ಎಸಿ ಕೋಚ್‌ ಬಿ-6 ನಲ್ಲಿ ಪ್ರಯಾಣಿಸುತ್ತಿದ್ದ ಅನಂತ್‌ ಪಾಂಡೆ ಎಂಬವರು ಎಸಿ ಸರಿಯಾಗಿ ವರ್ಕ್‌ ಆಗ್ತಿಲ್ಲ ಎಂದು ಸಿಬ್ಬಂದಿಗಳಿಗೆ ದೂರನ್ನು ನೀಡುತ್ತಾರೆ. ಆದರೆ ಸಿಬ್ಬಂದಿಗಳು ದೂರು ನೀಡಿದ್ರೂ ಕ್ಯಾರೆ ಅನ್ನಲಿಲ್ಲ. ಇದರಿಂದ ಕೋಪಗೊಂಡ ಅನಂತ್‌ ರೈಲು ಆಯೋಧ್ಯೆಯಿಂದ ಹೊರಟಾಗ ಚೈನ್‌ ಎಳೆದಿದ್ದಾರೆ. ಅದರ ಬಳಿಕವೂ ವಿಚಾರಣೆಗೆ ಬರದಿದ್ದಾಗ ಇನ್ನೂ ಎರಡು ಬಾರಿ ಚೈನ್‌ ಎಳೆದಿದ್ದಾರೆ. ಇದರಿಂದ ಕೋಪಗೊಂಡ ರೈಲ್ವೇ ಪೊಲೀಸರು ರೈಲು ಚಾರ್ಬಾಗ್‌ ರೈಲು ನಿಲ್ದಾಣ ತಲುಪಿದಾಗ ನನ್ನನ್ನು ದರದರನೇ ಎಳೆದೊಯ್ದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಅನಂತ್‌ ಪಾಂಡೆ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಲಕ್ನೋ ವಿಭಾಗದ ಆರ್‌ಪಿಎಫ್‌ ಕಮಾಂಡೆಂಟ್‌ ದೇವಾಂಶ್‌ ಶುಕ್ಲಾ “ಪಾಟ್ನಾ ಕೋಟಾ ಎಕ್ಸ್‌ಪ್ರೆಸ್‌ನಲ್ಲಿ ಬರುತ್ತಿದ್ದ ಪ್ರಯಾಣಿಕ ಅನಂತ್‌ ಪಾಂಡೆ ಮೂರು ಬಾರಿ ಚೈನ್‌ ಎಳೆದು ನಿಲ್ಲಿಸಿದರು. ಇದು ಆರ್‌ಪಿಎಫ್‌ ಕಾಯ್ದೆಯಡಿ ಅಪರಾಧದ ವರ್ಗಕ್ಕೆ ಸೇರುತ್ತದೆ. ಈ ಬಗ್ಗೆ ಆ ಪ್ರಯಾಣಿಕಣಿಗೂ ವಿವರಿಸಲಾಯಿತು ಮತ್ತು ಚಾರ್‌ಬಾಗ್‌ನಲ್ಲಿ ಚೈನ್‌ ಎಳೆದಿದ್ದಕ್ಕಾಗಿ ಸೆಕ್ಷನ್‌ 141 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು, ಇದೀಗ ಆ ವ್ಯಕ್ತಿ ರೈಲ್ವೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಆ ಪ್ರಯಾಣಿಕನನ್ನು ಎಳೆದೊಯ್ದದ್ದಿದ್ದಾರೆಯೇ ಹೊರತು ಆತನ ಮೇಲೆ ಆರ್‌ಪಿಎಫ್‌ ಸಿಬ್ಬಂದಿ ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ಮೊಮೊಸ್​ ತಿಂದ ಮಹಿಳೆ ಸಾವು, 20 ಜನ ಅಸ್ವಸ್ಥ

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಚೈನ್‌ ಎಳೆದ ಪ್ರಯಾಣಿಕನನ್ನು ರೈಲ್ವೇ ಪೊಲೀಸರು ಕೋಚ್‌ನಿಂದ ಎಬ್ಬಿಸಿ ದರ ದರನೇ ಎಳೆದೊಯ್ಯುತ್ತಿರುವ ದೃಶ್ಯವನ್ನು ಕಾಣಬಹುದು. INCUttarPradesh ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 84 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಾನೂನಿನ ನೆಪದಲ್ಲಿ ನಡೆಯುವ ಗೂಂಡಾಗಿರಿಯನ್ನು ಮೊದಲು ನಿಲ್ಲಿಸಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಚೈನ್‌ ಎಳೆಯುವುದು ಕೂಡಾ ತಪ್ಪಲ್ಲವೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ