ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಒಂದೇ ಕರಡಿ ಎರಡು ಹುಲಿಗಳನ್ನು ಎದುರಿಸಿ, ಹೆದರಿಸಿ ಓಡಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡಿಯ ಕೂಗಿನಿಂದ ಹೆದರಿ ಹುಲಿಗಳು ಓಡಿಹೋಗಿರುವ ಘಟನೆ ನಡೆದಿದೆ. ಆ ವೀಡಿಯೊ ವೀಕ್ಷಿಸಿ.
ಕಾಡಿನಲ್ಲಿರುವ ಪ್ರತಿಯೊಂದು ಪ್ರಾಣಿಯು ಸಿಂಹ ಮತ್ತು ಹುಲಿಗಳಿಗೆ ಹೆದರುತ್ತದೆ. ಹುಲಿಯ ಘರ್ಜನೆ ಕೇಳಿದ ಸಣ್ಣ ಪ್ರಾಣಿಗಳು ದೂರದಿಂದಲೇ ಓಡಿ ಹೋಗುತ್ತವೆ. ಆದರೆ, ಕರಡಿಯ ಘರ್ಜನೆಗೆ ಹುಲಿ ಹೆದರಿ ಹಿಂದೆ ಸರಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕರಡಿಯ ಕೂಗಿಗೆ ಎರಡು ಹುಲಿಗಳು ಓಡಿ ಹೋಗಿವೆ. ಸವಾಯಿ ಮಾಧೋಪುರದಲ್ಲಿರುವ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಜಂಗಲ್ ಸಫಾರಿ ವೇಳೆ ಈ ದೃಶ್ಯ ಸೆರೆಹಿಡಿಯಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos