ಮೊಬೈಲ್ ಇಲ್ಲದೆ ಇಂದಿನ ಕಾಲದಲ್ಲಿ ಬದುಕುವುದು ಕಷ್ಟ ಎನ್ನುವಂತಾಗಿದೆ. ಮಕ್ಕಳು ಕೂಡಾ ಇದಕ್ಕೆ ಹೊರತೇನಿಲ್ಲ ಬಿಡಿ. ಅಂಬೆಗಾಲಿಡುವ ಮಗುವಿನಿಂದ ಹಿಡಿದು ನರ್ಸರಿ ಹೋಗುವ ಪುಟ್ ಪುಟಾಣಿ ಮಗು ಸಹ ಮೊಬೈಲ್ ಬಳಕೆ ಮಾಡುವುದನ್ನು ಕಲಿತಿದ್ದು, ಆಟ-ಊಟ ಎಲ್ಲಾ ಸಮಯದಲ್ಲೂ ಮೊಬೈಲ್ ಫೋನ್ ಬೇಕೇ ಬೇಕು ಎಂದು ಹಠ ಮಾಡಿ ಕೂರುತ್ತಿದ್ದಾರೆ. ಇತ್ತೀಚಿಗಂತೂ ಮಕ್ಕಳ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಪುಟಾಣಿಗಳ ಈ ಚಟವನ್ನು ಬಿಡಿಸಲು ಇಲ್ಲೊಂದು ಶಾಲೆಯ ಶಿಕ್ಷಕರು ವಿನೂತನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ಕಣ್ಣಿಗೆ ಬಿಳಿ ಬಟ್ಟೆ ಕಟ್ಟಿ ಅದಕ್ಕೆ ಕೆಂಪು ಬಣ್ಣ ಬಳಿದು ಮೊಬೈಲ್ ನೋಡಿ ಕಣ್ಣು ಹೋಯಿತು ಎಂದು ಭಯಪಡಿಸುತ್ತಾ ಮೊಬೈಲ್ ಬಳಸದಂತೆ ಎಚ್ಚರಿಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಶಿಕ್ಷಕರ ಈ ಪ್ರಯತ್ನಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕರು ಮಕ್ಕಳ ಮೊಬೈಲ್ ಚಟವನ್ನು ಬಿಡಿಸಲು ವಿಶೇಷ ಅಭಿಯಾನವೊಂದನ್ನು ಕೈಗೊಂಡಿದ್ದಾರೆ. ಹೌದು ಇಲ್ಲಿನ ಹೆಚ್.ಪಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶಿಕ್ಷಕರು ಪುಟಾಣಿ ಮಕ್ಕಳ ಮೊಬೈಲ್ ಬಳಸದಂತೆ ಜಾಗೃತಿ ಮೂಡಿಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ವಿಕಾಸ್ ಮೆಹ್ತಾ (VikashMohta_IND) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
बच्चों से मोबाइल की लत छुड़वानी है तो ये दिखा दें ये वीडियो..!
यूपी के बदायूं के HP इंटरनेशनल स्कूल की टीचर्स ने बच्चों को मोबाइल से दूर करने के लिए एक अवेयरनेस प्लान बनाया है। वीडियो में एक टीचर आंखो पर पट्टी बांधकर रोती नज़र आती है। टीचर के पूछने पर कहती है कि ज्यादा मोबाइल… pic.twitter.com/4XrNZXWR2a
— Vikash Mohta (@VikashMohta_IND) September 11, 2024
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊಬೈಲ್ ಬಳಸದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಜಾಗೃತಿ ಮೂಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಸಾಲಾಗಿ ನಿಂತಿದ್ದ ಪುಟಾಣಿ ಮಕ್ಕಳ ಮುಂದೆ ಒಂದು ಕಣ್ಣಿಗೆ ಬಿಳಿ ಬಟ್ಟೆ ಸುತ್ತಿ ಅದಕ್ಕೆ ರಕ್ತದಂತೆ ಕೆಂಪು ಬಣ್ಣವನ್ನು ಬಳಿದು ಅಯ್ಯೋ ನನ್ನ ಕಣ್ಣು ಹೋಯ್ತು ಎಂದು ಅಳುತ್ತಾ ಬರುತ್ತಾರೆ. ನಂತರ ಇನ್ನೊಬ್ಬ ಶಿಕ್ಷಕಿ ಏನಾಯ್ತು ನಿಮಗೆ ಎಂದು ಕೇಳುತ್ತಾರೆ. ಆಗ ಆ ಶಿಕ್ಷಕಿ ನಾನು ಜಾಸ್ತಿ ಮೊಬೈಲ್ ಯೂಸ್ ಮಾಡಿದ ಕಾರಣ ನನ್ನ ಕಣ್ಣಿಗೆ ಹೀಗೆಲ್ಲಾ ಆಯ್ತು… ಮಕ್ಳ ನೀವ್ಯಾರೂ ಮೊಬೈಲ್ ಯೂಸ್ ಮಾಡ್ಬೇಡಿ ಎಂದು ಹೇಳುತ್ತಾರೆ. ನಂತರ ಇತರೆ ಶಿಕ್ಷಕಿಯರು ಮಕ್ಕಳಿಗೆ ಮೊಬೈಲ್ ಕೊಟ್ರೂ ನಮ್ಗೆ ಬೇಡ ಎಂದು ಭಯದಿಂದ ಮಕ್ಕಳು ಮೊಬೈಲ್ ತೆಗೆದುಕೊಳ್ಳಲಿಲ್ಲ.
ಇದನ್ನೂ ಓದಿ: ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಹಾಡಿಗೆ ಮಸ್ತ್ ಆಗಿ ಕುಣಿದ ಫಾರಿನ್ ಹುಡುಗೀರು
ಸೆಪ್ಟೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ಒಳ್ಳೆಯ ಪ್ರಯತ್ನʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಕ್ಕಳನ್ನು ಮೊಬೈಲ್ ಚಟದಿಂದ ಮುಕ್ತಗೊಳಿಸಲು ಈ ಹೊಸ ವಿಧಾನ ತುಂಬಾ ಉಪಯುಕ್ತವಾಗಿದೆ ಮತ್ತು ಪರಿಣಾಮಕಾರಿಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ