
ಇದೀಗ ವ್ಯಾಲೆಂಟೈನ್ ವೀಕ್ ನಡಿತಿದೆ. ಈ ಪೂರ್ತಿ ವಾರ ಪ್ರೇಮಿಗಳಿಗಂತೂ ಹಬ್ಬ ಅಂದ್ರೆ ತಪ್ಪಾಗಲಾರದು. ಹೆಚ್ಚಿನವರು ಈ ವ್ಯಾಲೆಂಟೈನ್ ವೀಕ್ ನಲ್ಲಿಯೇ ಗಿಫ್ಟ್ ಕೊಟ್ಟು ಪ್ರಪೋಸ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಪ್ರಪೋಸ್ ಡೇ ದಿನ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿ ಸಿಹಿ ತಿನ್ನಿಸಲು ಹೋಗಿದ್ದು, ಆದ್ರೆ ಆ ಹುಡುಗಿ ಪ್ರಪೋಸಲ್ ತಿರಸ್ಕರಿಸಿದ್ದಾಳೆ. ಪ್ರಪೋಸಲ್ ತಿರಸ್ಕರಿಸಿದ್ದಲ್ಲದೆ ಸಿಹಿ ತಿನ್ನಲು ಒಲ್ಲೆ ಎಂದ ಆ ಹುಡುಗಿಯ ಮೇಲೆ ಕೋಪದಲ್ಲಿ ಯುವಕ ಸ್ವೀಟ್ ಬಾಕ್ಸ್ ಎಸೆದು ಅನುಚಿತವಾಗಿ ವರ್ತಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು, ಆತನ ಕ್ರೂರ ಕೃತ್ಯದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದ್ದು, ಫೆಬ್ರವರಿ 8 ರಂದು ಅಂದ್ರೆ ಪ್ರಪೋಸ್ ಡೇ ಯಂದು ಪ್ರೀತಿ ನಿರಾಕರಿಸಿದ ಹುಡುಗಿಯ ಮೇಲೆ ಯುವಕನೊಬ್ಬ ಕೈ ಮಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಹೌದು ಪ್ರೀತಿ ನಿರಾಕರಿಸಿದಳೆಂದು ಆಕೆಯ ಮೇಲೆ ಸ್ವೀಟ್ ಬಾಕ್ಸ್ ಎಸೆದು ನಡು ರಸ್ತೆಯಲ್ಲಿಯೇ ಕ್ರೂರವಾಗಿ ವರ್ತಿಸಿದ್ದು, ಇವರ ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಆ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
UP के अमरोहा जिले के गजरौला मे सरे राह लड़की को प्रपोज़ करने वाले युवक ने इंकार के बाद लड़की के साथ गाली गलौच करते हुए मारपीट की। जिसकी वीडियो वायरल होने के बाद पुलिस ने FIR दर्ज कर ली हैं।#viralvideo #ValentinesDay pic.twitter.com/JpWMTOhnWr
— TRUE STORY (@TrueStoryUP) February 8, 2025
ಈ ಕುರಿತ ವಿಡಿಯೋವನ್ನು TrueStoryUP ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಪ್ರಪೋಸ್ ಡೇ ಯಂದು ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿ ಸಿಹಿ ತಿನ್ನಿಸಲು ಹೊರಟಿರುವ ದೃಶ್ಯವನ್ನು ಕಾಣಬಹುದು. ಆದ್ರೆ ಹುಡುಗಿ ಪ್ರೀತಿ ನಿರಾಕರಿಸಿದ್ದು, ಇದೇ ಕೋಪದಲ್ಲಿ ಯುವಕ ಹುಡುಗಿಯ ಮೇಲೆ ಸ್ವೀಟ್ ಬಾಕ್ಸ್ ಎಸೆದು ಕ್ರೂರವಾಗಿ ವರ್ತಿಸಿದ್ದಾನೆ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ರಷ್ಯನ್ ಯುವತಿ, ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಢಿಕ್ಕಿ
ಫೆಬ್ರವರಿ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಆ ಹುಡುಗಿ ಒಂಟಿಯಾಗಿ ಬರಬಾರದಿತ್ತು, ಹುಡುಗರ ದುರ್ವರ್ತನೆ ಹೆಚ್ಚಾಯಿತು. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇಂತಹ ಗೂಂಡಾಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಆ ಗೂಂಡಾ ಯುವಕನಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Sun, 9 February 25