Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!

|

Updated on: Feb 06, 2023 | 5:56 PM

ಪ್ರೇಮಿಗಳ ದಿನದಂದು ಅನಿಮಲ್ ಶೆಲ್ಟರ್​​ನಿಂದ ಸ್ವೀಕರಿಸಿದ ಎಲ್ಲಾ ಮಾಜಿ ಪ್ರೇಮಿಗಳ ಹೆಸರುಗಳ ವೀಡಿಯೊವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಮೂಲಕ ಲವ್ ಬ್ರೇಕಪ್ ಆದವರು ತಮ್ಮ ಮಾಜಿ ಪ್ರೇಮಿಯ ವಿರುದ್ಧ ಸೇಡು ತೀರಿಸಿಕೊಳ್ಳಬಹುದು.

Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!
ಅಮೆರಿಕಾದ ಅನಿಮಲ್ ಶೆಲ್ಟರ್​​ನ ಜಾಹೀರಾತು
Image Credit source: Indian Express
Follow us on

ಪ್ರೇಮಿಗಳ ದಿನ (Valentine’s Day) ಪ್ರೀತಿಯನ್ನು ಆಚರಿಸುವ ಒಂದು ದಿನವಾಗಿದೆ. ಆದರೆ, ಇತ್ತೀಚೆಗೆ ಬ್ರೇಕಪ್ (Break Up) ಆದವರಿಗೆ ಇದು ಕಹಿ ಸಂದರ್ಭವಾಗಿದೆ. ಅದಕ್ಕಾಗಿಯೇ ಅಮೆರಿಕಾದ ಓಹಿಯೋದಲ್ಲಿನ ಅನಿಮಲ್ ಶೆಲ್ಟರ್ ತನ್ನ ಪ್ರೇಮಿಗಳ ದಿನದ ಅಭಿಯಾನದ ಭಾಗವಾಗಿ ತಮ್ಮ ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಒಳ್ಳೆಯ ಅವಕಾಶವನ್ನು ನೀಡುತ್ತಿದೆ. ಅನಿಮಲ್ ಫ್ರೆಂಡ್ ಹ್ಯೂಮನ್ ಸೊಸೈಟಿಗೆ 5 ಡಾಲರ್ ದೇಣಿಗೆ ನೀಡಿ, ತಮ್ಮ ಮಾಜಿ ಪ್ರೇಮಿಯ ಹೆಸರನ್ನು ಬೆಕ್ಕಿನ ಮೂತ್ರದ ಬಾಕ್ಸ್​​ಗೆ ಇಡಬಹುದು.

ಮಾಜಿ ಪ್ರೇಮಿಗಳ ಹೆಸರನ್ನಿಟ್ಟ ಮೂತ್ರದ ಬಾಕ್ಸನ್ನು ಬೆಕ್ಕುಗಳ ಬಳಿ ಇಡಲಾಗುತ್ತದೆ. ಅದರಲ್ಲಿ ಬೆಕ್ಕುಗಳು ಮಲ-ಮೂತ್ರ ಮಾಡುತ್ತವೆ. ಫೆಬ್ರವರಿ 12ರವರೆಗೆ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ. ಪ್ರೇಮಿಗಳ ದಿನದಂದು ಅನಿಮಲ್ ಶೆಲ್ಟರ್​​ನಿಂದ ಸ್ವೀಕರಿಸಿದ ಎಲ್ಲಾ ಮಾಜಿ ಪ್ರೇಮಿಗಳ ಹೆಸರುಗಳ ವೀಡಿಯೊವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಮೂಲಕ ಲವ್ ಬ್ರೇಕಪ್ ಆದವರು ಪ್ರೇಮಿಗಳ ದಿನದಂದು ತಮ್ಮ ಮಾಜಿ ಪ್ರಿಯಕರ/ ಪ್ರೇಮಿಯ ವಿರುದ್ಧ ಸೇಡು ತೀರಿಸಿಕೊಳ್ಳಬಹುದು.

ಇದನ್ನೂ ಓದಿ: Love Story: ಪ್ರೀತಿ ಬ್ರೇಕ್​ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು: ಎಂಥಾ ಪವಿತ್ರ ಪ್ರೀತಿ ಎಂದ ಜನರು

ಈ ಆಫರ್ ಬಗ್ಗೆ ಜಾಹೀರಾತು ನೀಡಿರುವ ಅಮೆರಿಕಾದ ಪ್ರಾಣಿ ದತ್ತು ಸಂಸ್ಥೆಯು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೀಗೆ ಬರೆದಿದೆ: ನಾವು ಫೆಬ್ರವರಿ 1ರಿಂದ ಫೆಬ್ರವರಿ 12ರವರೆಗೆ ದೇಣಿಗೆಗಳನ್ನು ಸ್ವೀಕರಿಸುತ್ತೇವೆ. ಪ್ರೇಮಿಗಳ ದಿನದಂದು ನಾವು ಸ್ವೀಕರಿಸುವ ಎಲ್ಲಾ ಹೆಸರುಗಳನ್ನು ಬೆಕ್ಕಿನ ಮೂತ್ರದ ಪೆಟ್ಟಿಗೆಗಳಲ್ಲಿ ಪ್ರದರ್ಶಿಸುವ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತೇವೆ.!”

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Mon, 6 February 23