ಮುಂಬೈ ಪೊಲೀಸರೇ, ನೀವು ನನ್ನ ಪ್ರೇಮಿಯಾಗುವಿರಾ?

Valentine’s Day : ‘ವೈಯಕ್ತಿಕವಾಗಿ ಗಮನಿಸುತ್ತಿಲ್ಲವೆಂದು ಬೇಸರಿಸಿಕೊಳ್ಳುವುದಿಲ್ಲವೆಂದರೆ ಮಾತ್ರ. ಏಕೆಂದರೆ ನಾವು ಒಬ್ಬರಿಗೆ ಮಾತ್ರ ಬದ್ಧರಾಗಿರಲು ಸಾಧ್ಯವಿಲ್ಲ’ ಎಂದಿದ್ದಾರೆ ಪೊಲೀಸರು.​ ಆದರೆ ಆ ವ್ಯಕ್ತಿ ಹೀಗೆ ಟ್ವೀಟ್ ಮಾಡಿದ್ದರ ಸತ್ಯ ಬೇರೆಯೇ ಇದೆ.

ಮುಂಬೈ ಪೊಲೀಸರೇ, ನೀವು ನನ್ನ ಪ್ರೇಮಿಯಾಗುವಿರಾ?
ಪ್ರಾತಿನಿಧಿಕ ಚಿತ್ರ
Updated By: ಶ್ರೀದೇವಿ ಕಳಸದ

Updated on: Feb 15, 2023 | 11:12 AM

Viral News : ವ್ಯಾಲೆಂಟೈನ್ಸ್​ ಡೇ (Valentine‘s Day) ನಿನ್ನೆಯಷ್ಟೇ ಸಂಪನ್ನಗೊಂಡಿದೆ. ಆದರೆ ಅದರ ನಶೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹರಿದಾಡುತ್ತಲೇ ಇದೆ. ಟ್ವಿಟರ್ ಖಾತೆದಾರರೊಬ್ಬರು ಮುಂಬೈ ಪೊಲೀಸರನ್ನು ಟ್ಯಾಗ್​ ಮಾಡಿ, ‘ಮುಂಬೈ ಪೊಲೀಸರೇ, ನೀವು ನನ್ನ ಪ್ರೇಮಿಯಾಗುವಿರಾ?’ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂಬೈ ಪೊಲೀಸರು ಉತ್ತರಿಸಿದ್ದಾರೆ. ಆಗ ಆ ವ್ಯಕ್ತಿ ನಿಜವಾದ ಕಾರಣವನ್ನು ಹೇಳಿದ್ದಾರೆ.

ಎಲ್ಲ ಬಿಟ್ಟು ಪೊಲೀಸರನ್ನು ಈ ವ್ಯಕ್ತಿ ಕೇಳುವುದೇ? ಎಂದು ಹುಬ್ಬೇರಬಹುದು. ಮುಂದಿನ ಅನಾಹುತಗಳು ಕಲ್ಪನೆಯ ಎಳೆಗೆ ಸಿಕ್ಕು ನಗು, ಕೋಪ ಎಲ್ಲವನ್ನೂ ತರಬಹುದು. ಆದರೆ ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಇಂಥ ಅನೇಕರ ಪ್ರಶ್ನೆಗಳಿಗೆ ಆಗಾಗ ನವಿರಾದ ಹಾಸ್ಯದಿಂದ, ಬುದ್ಧಿವಂತಿಕೆಯಿಂದ ಉತ್ತರಿಸುತ್ತಿರುತ್ತಾರೆ. ಹಿಂದೊಮ್ಮೆ ಚಂದ್ರನ ಬಳಿ ಸಿಲುಕಿಕೊಂಡಿದ್ದೇನೆ ಎಂದು ಒಬ್ಬರು ಟ್ವೀಟ್ ಮಾಡಿದಾಗ ಈ ಪೊಲೀಸರು ಉತ್ತರಿಸಿದ ರೀತಿ ಅತ್ಯಂತ ಮಾರ್ಮಿಕವಾಗಿತ್ತು.

ಇದನ್ನೂ ಓದಿ : ಧ್ವನಿಮಾಯಾ ಕಲಾವಿದೆ ಇಂದುಶ್ರೀಯ ತಾತ ಹೆಂಡತಿಗೆ ಸೀರೆ ತರಲು ಮಧ್ಯಪ್ರದೇಶಕ್ಕೆ ಹೋದಾಗ

ಇದೀಗ, ನೀವು ನನ್ನ ವ್ಯಾಲೆಂಟೈನ್​ ಆಗಬಹುದೆ? ಎಂದು ಸ್ಯಾಮುಯೆಲ್ ಲೋಪ್ಸ್ ಎಂಬ ವ್ಯಕ್ತಿ ಟ್ವೀಟ್ ಮಾಡಿ ಕೇಳಿದ್ದಾನೆ. ಅದಕ್ಕೆ, ಆಗಬಹುದು ಎಂಬ ಒಪ್ಪಿಗೆಯನ್ನೇನೋ ಪೊಲೀಸ್​ ಇಲಾಖೆ ನೀಡಿದೆ ಜೊತೆಗೆ ಒಂದು ಷರತ್ತನ್ನೂ ಹೇರಿದೆ. ‘ಯಾಕಾಗಬಾರದು? ಆದರೆ ವೈಯಕ್ತಿಕವಾಗಿ ಗಮನ ಕೊಡುತ್ತಿಲ್ಲವೆಂದು ನೀವು ಬೇಸರಿಸಿಕೊಳ್ಳುವುದಿಲ್ಲವೆಂದರೆ ಮಾತ್ರ. ಏಕೆಂದರೆ ನಾವು ಒಬ್ಬರಿಗೆ ಮಾತ್ರ ಬದ್ಧರಾಗಿರಲು ಸಾಧ್ಯವಿಲ್ಲ ಪ್ರತೀ ಮುಂಬೈಕರ್​ರನ್ನೂ ಗಮನಿಸಬೇಕಾಗುತ್ತದೆ.’​

ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

ಹಾಗಿದ್ದರೆ, ರೂ. 26,000 ಮೌಲ್ಯದ ನನ್ನ ಮೊಬೈಲ್​ ಅನ್ನು ದಯವಿಟ್ಟು ಹುಡುಕಿಕೊಡಿ. ಫೆ. 11ರಂದು ಸೌರಾಷ್ಟ್ರ ಎಕ್ಸ್​ಪ್ರೆಸ್​ (19016)ನಲ್ಲಿ ಕಳೆದುಹೋಗಿದೆ. ನೀವು ಇದನ್ನು ಹುಡುಕಿಕೊಟ್ಟರೆ ಇದೇ ನನಗೆ ಶ್ರೇಷ್ಠವಾದ ವ್ಯಾಲೆಂಟೈನ್​ ಗಿಫ್ಟ್​’ ಎಂದು ಹೇಳಿದ್ದಾನೆ ಸ್ಯಾಮುಯೆಲ್​ ಲೋಪ್ಸ್.

ಇದನ್ನೂ ಓದಿ : 67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್

ಈಗಾಗಲೇ ಈ ಪೋಸ್ಟ್​ ಅನ್ನು 23,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ರೀಟ್ವೀಟ್ ಮಾಡಿದ್ದಾರೆ ಹಾಗೇ ಪ್ರತಿಕ್ರಿಯಿಸಿದ್ದಾರೆ ಕೂಡ. ನಾನು ಟರ್ಕಿಯವನು, ನನ್ನ ವ್ಯಾಲೆಂಟೈನ್ ಕೂಡ​ ಆಗುತ್ತೀರಾ? ಎಂದು ಒಬ್ಬರು ಕೇಳಿದ್ದಾರೆ. ಅನೇಕರು ಕೆಲ ಅಪರಾಧ ಪ್ರಕರಣಗಳನ್ನು ಟ್ವೀಟ್ ಮಾಡಿ ಮುಂಬೈ ಪೊಲೀಸರು ನಿಷ್ಪ್ರಯೋಜಕರು ಎಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:59 am, Wed, 15 February 23