
IIT : ಮೂರು ವರ್ಷಗಳ ಹಿಂದೆ ದೆಹಲಿಯ ಐಐಟಿ (IIT Delhi) Vegan Egg (ಸಸ್ಯಜನ್ಯ ಮೊಟ್ಟೆ) ಸಂಶೋಧಿಸಿದ್ದು ನಿಮಗೆ ನೆನಪಿರಬಹುದು. ಮೊಟ್ಟೆ ತಿನ್ನಲು ಬಯಸುವ ಸಸ್ಯಾಹಾರಿಗಳಿಗೆ ಇದೊಂದು ವರದಾನ, ಕೋಳಿಮೊಟ್ಟೆಯಲ್ಲಿರುವ ಎಲ್ಲ ಪೋಷಕಾಂಶಗಳೂ ಇದರಲ್ಲಿರುತ್ತವೆ ಮತ್ತು ಕೊಲೆಸ್ಟ್ರಾಲ್ ರಹಿತವಾಗಿರುತ್ತದೆ ಎಂದು ಸಂಶೋಧನಾ ತಂಡದ ಪ್ರೊ ಕಾವ್ಯ ದಶೋರಾ ಹೇಳಿದ್ದರು. ಇದನ್ನು ಸಂಶೋಧಿಸಿದ ರಾಹುಲ್ ದಿವಾನ್, ಸಸ್ಯಾಹಾರವು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಮತ್ತು ಅತ್ಯವಶ್ಯ ಎಂಬುದನ್ನು ವಿವರಿಸಿದ್ದರು. ಇದನ್ನು ಬೆಳೆದ ರೈತರ ಆದಾಯವೂ ಹೆಚ್ಚಲಿದೆ ಎಂದೂ ಹೇಳಿದ್ದರು. ಹಾಗಿದ್ದರೆ ಈ ವಿಡಿಯೋಗೂ ಮತ್ತು ಐಐಟಿ ಸಂಶೋಧನೆಗೂ ಸಂಬಂಧ ಇದೆಯಾ? ಈ ವಿಡಿಯೋಗಾಗಿ ಕ್ಲಿಕ್ ಮಾಡಿ ನೋಡಿ ಈ ಪ್ರೊಫೈಲಿನಲ್ಲಿ.
ಖಂಡಿತ ಇಲ್ಲ. ಐಐಟಿ ಸಂಶೋಧನಾ ತಂಡದ ವೇಗನ್ ಎಗ್ ಇದು ಅಲ್ಲವೇ ಅಲ್ಲ. ಹಾಗಾದರೆ ಏನಿದು? ನೆಟ್ಟಿಗರಿಗಂತೂ ಇದರ ಹಿಂದಿನ ತಂತ್ರ ಗೊತ್ತಾಗಿದೆ. ಬಹುಶಃ ನಿಮಗೂ. ಹೌದು, ಕೋಳಿಮೊಟ್ಟೆಯನ್ನು ಬದನೆತೊಟ್ಟಿಗೆ ಅಂಟಿಸಲಾಗಿದೆ. ಈ ಗಿಡದಲ್ಲಿಯೇ ನಿಜವಾಗಲೂ ಮೊಟ್ಟೆ ಬಿಟ್ಟಿದೆಯೇನೋ ಎಂಬಷ್ಟು ಪರ್ಫೆಕ್ಟ್! ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಫೆವಿಕಾಲ್ ಹಾಕಿ ಅಂಟಿಸಿರಬೇಕು ಎಷ್ಟು ಗಟ್ಟಿಯಾಗಿ ನೀಟ್ ಆಗಿ ಅಂಟಿಸಲಾಗಿದೆ ನೋಡಿ. ಅಬ್ಬಾ! ಎಗ್ ಪ್ಲ್ಯಾಂಟ್ ಅಂತ ಹೆಸರಿಟ್ಟಿದ್ದನ್ನು ನೀವು ಈವಿಡಿಯೋ ಮೂಲಕ ಅಕ್ಷರಶಃ, ಚಿತ್ರಶಃ ನಿರೂಪಿಸಿದ್ದೀರಿ. ಓಹೋ ಮಸ್ತ್ ಇದೆ ಅಂಟು. ವೇಗನ್ ಎಗ್ ಎಂದರೆ ಇದೇ ಎಂದು ಈಗ ತಿಳಿಯಿತು… ಹೀಗೆ ಪ್ರತಿಕ್ರಿಯೆಗಳು ಸಾಗಿವೆ.
ಈತನಕ ಸುಮಾರು 60,000 ಜನರು ಈ ವಿಡಿಯೋ ನೋಡಿದ್ದಾರೆ. ವಿಡಿಯೋ ನೋಡಬೇಕೆಂದೇ ಇಂಥ ಐಡಿಯಾಗಳನ್ನು ಡಿಜಿಟಲ್ ಕ್ರಿಯೇಟರ್ಸ್ ಮಾಡುತ್ತಿರುತ್ತಾರೆ. ಎಲ್ಲವೂ ಮನರಂಜನೆಗೆ, ತಮಾಷೆಗೆ. ನಿತ್ಯಕೆಲಸದ ಏಕತಾನತೆಯನ್ನು ಮುರಿಯಲು ನೀವು ಸ್ಕ್ರೋಲ್ ಮಾಡುತ್ತ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುತ್ತೀರಿ. ನೀವೂ ಬೆಳೆಯುತ್ತೀರಾ ಈ ಎಗ್ ಪ್ಲ್ಯಾಂಟ್? ಅಥವಾ ಇನ್ನೇನಾದರೂ ಹೊಸ ಐಡಿಯಾ ಹೊಮ್ಮುತ್ತಿವೆಯೋ? ಏನೇ ಮಾಡಿದರೂ ಎಲ್ಲ ರೀಲಿಗಾಗಿ ಎಂಬಂಥ ಉತ್ತುಂಗದ ಸ್ಥಿತಿ ಸದ್ಯದ ಸಾಮಾಜಿಕ ಜಾಲತಾಣಗಳದ್ದು. ಏನಂತೀರಿ?
Published On - 10:29 am, Tue, 30 May 23