ವೈರಲ್ ಟಿಕ್​ಟ್ಯಾಕ್ ಹ್ಯಾಕ್​ ; ಮೈಕ್ರೋವೇವ್​ನಲ್ಲಿ ಮೊಟ್ಟೆ ಬೇಯಿಸಲು ಹೋಗಿ ಮುಖ ಸುಟ್ಟುಕೊಂಡ ಮಹಿಳೆ

| Updated By: ಶ್ರೀದೇವಿ ಕಳಸದ

Updated on: May 30, 2023 | 12:21 PM

Viral Hack Video: ಹ್ಯಾಕ್ ವಿಡಿಯೋಗಳನ್ನು ನೋಡಿ ಯಾರೂ ಇಂಥ ಪ್ರಯೋಗಗಳಿಗೆ ಮುಂದಾಗಬೇಡಿ. ನನ್ನ ಜೀವನದ ಅತ್ಯಂತ ಕೆಟ್ಟ ಘಟನೆ ಇದು. ನಾನಿನ್ನೆಂದೂ ಮೊಟ್ಟೆಯನ್ನೇ ತಿನ್ನುವುದಿಲ್ಲ ಎಂದು ಪ್ರಮಾಣ ಮಾಡಿದ್ದಾಳೆ ಶಫಿಯಾ ಬಷೀರ್.

ವೈರಲ್ ಟಿಕ್​ಟ್ಯಾಕ್ ಹ್ಯಾಕ್​ ; ಮೈಕ್ರೋವೇವ್​ನಲ್ಲಿ ಮೊಟ್ಟೆ ಬೇಯಿಸಲು ಹೋಗಿ ಮುಖ ಸುಟ್ಟುಕೊಂಡ ಮಹಿಳೆ
ಮೈಕ್ರೋವೇವ್​ನಲ್ಲಿ ಮೊಟ್ಟೆ ಕುದಿಸಲು ಹೋಗಿ ಮುಖ ಸುಟ್ಟುಕೊಂಡ ಶಫಿಯಾ ಬಷೀರ್
Follow us on

Viral : ಬೆಳಗ್ಗೆ ಕಣ್ಣು ಬಿಟ್ಟೊಡನೇ ಮೊಬೈಲ್​ನಲ್ಲಿ ಸ್ಕ್ರಾಲ್ ಮಾಡುತ್ತಿದ್ದಂತೆ ನಿಮ್ಮನ್ನು ಸ್ವಾಗತಿಸುವ ವಿಡಿಯೋಗಳಲ್ಲಿ ಹ್ಯಾಕ್​ ವಿಡಿಯೋಗಳದ್ದೇ ಸಿಂಹಪಾಲು. ಎಂದೂ ಮುಗಿಯದ ಸಮುದ್ರದ ಅಲೆಗಳಂತೆ ಒಂದಾದ ಮೇಲೊಂದು ವಿಡಿಯೋಗಳು ಪ್ಲೇ ಆಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣದ ಸಹಾಯವಿಲ್ಲದೆ ನಾವು ಬದುಕಲಾರೆವೇನೋ ನಮಗೆ ಅಸ್ತಿತ್ವವೇ ಇಲ್ಲವೇನೋ ಎಂದು ಭ್ರಮಿಸುತ್ತಿರುವ ನಾವೆಲ್ಲಾ ಬಿಟ್ಟಕಣ್ಣುಗಳಿಂದ ನೋಡುತ್ತಲೇ ಇರುತ್ತೇವೆ, ಅಷ್ಟೇ ಅಲ್ಲ ಅನುಸರಿಸಲೂ. ಇದೀಗ ವೈರಲ್ ಆಗಿರುವ ಈ ಸುದ್ದಿ ಇಂಥ ಹ್ಯಾಕ್​ ವಿಡಿಯೋಗಳಿಗೇ ಸಂಬಂಧಿಸಿದ್ದು.

ಮಹಿಳೆಯೊಬ್ಬಳು ವೈರಲ್ ಟಿಕ್​ಟ್ಯಾಕ್​ ಹ್ಯಾಕ್​ ವಿಡಿಯೋ ನೋಡಿ ತಾನೂ ಅದನ್ನು ಪ್ರಯೋಗಿಸಲು ಹೋಗಿ ಅಪಾಯ ತಂದುಕೊಂಡಿದ್ದಾಳೆ. ಮೈಕ್ರೋವೇವ್​ನಲ್ಲಿ ಮೊಟ್ಟೆಗಳನ್ನು ಬೇಯಿಸಿ ಹೊರತೆಗೆದಾಗ ಮೊಟ್ಟೆಗಳು ಸ್ಫೋಟಗೊಂಡಿವೆ. ಆ ಪರಿಣಾಮವಾಗಿ ಆಕೆಯ ಮುಖದ ಚರ್ಮವೇ ಸುಟ್ಟುಹೋಗಿದೆ.

ಇದನ್ನೂ ಓದಿ : Viral Video: ನಾಯಿಯನ್ನು ರಕ್ಷಿಸಲು ಹಿಮಸರೋವರಕ್ಕೆ ಧುಮುಕಿದ ವ್ಯಕ್ತಿ

37 ವರ್ಷದ ಶಫಿಯಾ ಬಷೀರ್ ಈ ಭಯಾನಕ ಘಟನೆಗೆ ಒಳಗಾಗಿದ್ದಾರೆ. ಯಾರೂ ಇಂಥ ಹ್ಯಾಕ್​ಗಳನ್ನು ಪ್ರಯೋಗಿಸಲು ಹೋಗಬೇಡಿ. ಇದು ಅತ್ಯಂತ ಅಪಾಯಕಾರಿ, ಇದಕ್ಕೆ ನಾನೇ ಸಾಕ್ಷಿ ಎನ್ನುತ್ತಿದ್ದಾಳೆ. ಹೌದು ಮೈಕ್ರೋವೇವ್​ನಲ್ಲಿ ಮೊಟ್ಟೆಗಳನ್ನು ಬೇಯಿಸುವುದು ನಿಜಕ್ಕೂ ಅಪಾಯಕಾರಿ. ಏಕೆಂದರೆ ಮೊಟ್ಟೆಗಳ ಕವಚವು ಶಾಖವನ್ನು ಹೀರಿಟ್ಟುಕೊಳ್ಳುತ್ತವೆ. ಆಗ ಸ್ಪೋಟ ಸಂಭವಿಸುವುದು ಸಹಜ.

ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಯುವತಿಯರಿಬ್ಬರ ನಡುವೆ ಬಂಧಿ ಈ ಡಾಲ್ಫಿನ್​, ನೆಟ್ಟಿಗರ ಆಕ್ರೋಶ

ಶಫಿಯಾ, ಬಟ್ಟಲಿನೊಳಗೆ ನೀರು ಮತ್ತು ಮೊಟ್ಟೆ ಹಾಕಿ ಮೈಕ್ರೋವೇವ್​ನಲ್ಲಿ ಇಟ್ಟಿದ್ದಾರೆ. ಎರಡು ನಿಮಿಷಗಳ ನಂತರ ಹೊರತೆಗೆದು ಸುಲಿಯಲು ನೋಡಿದಾಗ ಮೊಟ್ಟೆಯೊಳಗಿನದು ಬಿಸಿಬುಗ್ಗೆಯಂತೆ ಮುಖಕ್ಕೆ ಚಿಮ್ಮಿದೆ. ಆಗ ಆಕೆಯ ಮುಖದ ಬಲಭಾಗವು ಸುಟ್ಟಿದೆ. ಆನಂತರ ತುರ್ತು ಚಿಕಿತ್ಸೆಗೆ ಹೋಗುವ ಮೊದಲು ಆಕೆ 12 ತಾಸುಗಳ ಕಾಲ ನೀರಿನೊಳಗೆ ಮುಖವನ್ನಿಟ್ಟು ಉರಿಯನ್ನು ಶಮನ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾಳೆ.

ಇದನ್ನೂ ಓದಿ : Viral Video: ಎಗ್​ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು

ಇದು ನನ್ನ ಜೀವನದಲ್ಲಿ ಅತ್ಯಂತ ನೋವು ತಂದ ಘಟನೆಯಾಗಿದೆ. ದಯವಿಟ್ಟು ಇಂಥ ಅಪಾಯಕಾರಿ ಟ್ರೆಂಡಿಂಗ್​ ವಿಡಿಯೋಗಳನ್ನು ಅನುಸರಿಸಬೇಡಿ. ನನ್ನ ಮುಖದ ಗಾಯ ಈಗ ವಾಸಿಯಾಗಿದೆ, ಅದೃಷ್ಟವಶಾತ್ ಕಲೆಗಳು ಉಳಿದಿಲ್ಲ. ವ್ಯಾಸಲೀನ್​, ಸುಡೋಕ್ರೆಮ್​ ಮುಂತಾದನ್ನೆಲ್ಲ ಹಚ್ಚಿಕೊಂಡಿದ್ದೇನೆ ಎಂದಿದ್ದಾಳೆ. ಇನ್ನು ನಾನೆಂದೂ ಮೊಟ್ಟೆಯನ್ನೇ ತಿನ್ನುವುದಿಲ್ಲ ಎಂದು ಶಫಿಯಾ ಶಪಥ ಮಾಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:20 pm, Tue, 30 May 23