Viral Video: ಮದುವೆ ಮಂಟಪಕ್ಕೆ ನುಗ್ಗಿ ವರನಿಗೆ ಹಿಗ್ಗಾಮುಗ್ಗಾ  ಥಳಿಸಿದ ವಧುವಿನ ಮಾಜಿ ಪ್ರಿಯಕರ 

ಸಾಮಾನ್ಯವಾಗಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ವಧುವಿನ ಪ್ರಿಯಕರ ಮದುವೆ ಮನೆಗೆ ನುಗ್ಗಿ ರಂಪಾಟ ಮಾಡುವಂತಹ ಅಥವಾ ವಧುವಿಗೆ ತಾನೇ ತಾಳಿ ಕಟ್ಟುವಂತಹ ಸೀನ್‌ಗಳನ್ನು  ನೋಡಿರುತ್ತೇವೆ. ಆದ್ರೆ ಇಲ್ಲೊಂದು ಇಂತಹ ನೈಜ್ಯ ಘಟನೆ ನಡೆದಿದ್ದು, ಮಾಜಿ ಗೆಳತಿಯ ಮದುವೆ ಆರತಕ್ಷತೆಗೆ ಬಂದ ಯುವಕ ಮದುವೆ ಮಂಟಪದಲ್ಲಿಯೇ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral Video: ಮದುವೆ ಮಂಟಪಕ್ಕೆ ನುಗ್ಗಿ ವರನಿಗೆ ಹಿಗ್ಗಾಮುಗ್ಗಾ  ಥಳಿಸಿದ ವಧುವಿನ ಮಾಜಿ ಪ್ರಿಯಕರ 
Updated By: ಅಕ್ಷಯ್​ ಪಲ್ಲಮಜಲು​​

Updated on: May 21, 2024 | 11:39 AM

ಆಗೋಮ್ಮೆ ಈಗೊಮ್ಮೆ ಮದುವೆ ಸಮಾರಂಭಗಳಲ್ಲಿ  ಸಿನಿಮೀಯಾ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ವಧುವಿನ ಪ್ರಿಯಕರ ಬಂದು ವಧುವಿಗೆ ತಾಳಿ ಕಟ್ಟುವಂತಹದ್ದು, ವರನ ಮಾಜಿ ಪ್ರಿಯತಮೆ ಮದುವೆ ಮಂಟಪದಲ್ಲಿ ರಂಪರಾಮಾಯಣ ಮಾಡುವಂತಹದ್ದು, ಇತ್ಯಾದಿ  ಘಟನೆಗಳು ನಡೆದಿವೆ. ಸದ್ಯ ಅದೇ ರೀತಿಯ ಸುದ್ದಿಯೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ತನ್ನ ಮಾಜಿ ಗೆಳತಿಯ ಮದುವೆ ಆರತಕ್ಷತೆಗೆ ಬಂದ ಯುವಕ ಮಂಟಪದಲ್ಲಿಯೇ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಈ ಘಟನೆ ರಾಜಸ್ಥಾನ್‌ ಚಿತ್ತೋರ್‌ಗಢ ಜಿಲ್ಲೆಯ ಭಿಲ್ವಾರದಲ್ಲಿ ನಡೆದಿದ್ದು, ವಧು ವರರಿಗೆ ವಿಶ್‌ ಮಾಡುವ ನೆಪದಲ್ಲಿ ಸ್ಟೇಜ್‌ ಹತ್ತಿದ ವಧುನಿನ ಮಾಜಿ ಪ್ರಿಯಕರ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್‌ ವರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಹಲ್ಲೆ ನಡೆಸಿರುವ ಆರೋಪಿ ಶಂಕರ್‌ ಲಾಲ್‌ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ವಧು ಮತ್ತು ಶಂಕರ್‌ ಲಾಲ್‌ ಎರಡು ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇವರಿಬ್ಬರ ಮಧ್ಯೆ ಗೆಳೆತನ ಬೆಳೆದಿದೆ.  ನಂತರ ಇವರಿಬ್ಬರ ನಡುವೆ ಬ್ರೇಕಪ್‌ ಆಗಿದ್ದು, ಇದೇ ಸೇಡಿನಿಂದ ಶಂಕರ್‌ ಲಲ್‌ ಮಾಜಿ ಗೆಳತಿಯ ಮದುವೆಗೆ ಬಂದು ವರನ ಮೇಲೆ ಹಲ್ಲೆ ನಡೆಸಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ವಧು ವರರಿಗೆ ವಿಶ್‌ ಮಾಡುವ ನೆಪದಲ್ಲಿ ಸ್ಟೇಜ್‌ ಮೇಲೆ ಬಂದಂತಹ ವಧುವಿನ ಮಾಜಿ ಪ್ರಿಯಕರ ಇದ್ದಕ್ಕಿದ್ದಂತೆ ವರನ ಮೇಲೆ ಹಲ್ಲೆ ನಡೆಸುವಂತಹ ದೃಶ್ಯವನ್ನು ಕಾಣಬಹುದು. ನಂತರ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಕೈಗಳಿಗೆ ಹಸಿರು ಬಳೆ ತೊಟ್ಟು, ವಧುವಿನಂತೆ ಸಿಂಗಾರಗೊಂಡು ಹಾಸ್ಟೆಲ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ

@gharkekalesh ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯಾವುದೇ ತಪ್ಪು ಮಾಡದಿರುವ ವರನ ಮೇಲೆ ಹಲ್ಲೆ ನಡೆಸುವಂತಹ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಆ ಯುವಕನ ವಿರುದ್ಧ ಕಿಡಿಕಾರಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ