Viral Video: ಏಕಸಂಗಾತಿ ನಿಷ್ಠೆಯ ಮ್ಯಾಂಡರಿನ್ ಬಾತುಕೋಳಿ ವೈರಲ್

| Updated By: ಶ್ರೀದೇವಿ ಕಳಸದ

Updated on: Aug 25, 2022 | 1:02 PM

Mandarin Duck: ಇದು ನೈಜ ಮ್ಯಾಂಡರಿನ್​ ಬಾತುಕೋಳಿಯೇ? ಎನ್ನುವಷ್ಟು ಆಕರ್ಷಕವಾದ ಗರಿ ಮತ್ತು ವಿನ್ಯಾಸವನ್ನು ಹೊಂದಿದೆ. ಇದರ ಅಂದಕ್ಕೆ 1.2ಮಿಲಿಯನ್ ನೆಟ್ಟಿಗರು ಹುಬ್ಬೇರಿಸಿದ್ದಾರೆ.

Viral Video: ಏಕಸಂಗಾತಿ ನಿಷ್ಠೆಯ ಮ್ಯಾಂಡರಿನ್ ಬಾತುಕೋಳಿ ವೈರಲ್
ಮ್ಯಾಂಡರಿನ್ ಬಾತುಕೋಳಿ
Follow us on

Mandarin Duck: ಈ ಅದ್ಭುತವಾದ ಮ್ಯಾಂಡರಿನ್ ಬಾತುಕೋಳಿ ನೆಟ್ಟಿಗರನ್ನು ಹಿಡಿದಿಟ್ಟಿದೆ. ಆಕರ್ಷಕ ಕಿತ್ತಳೆ ಮತ್ತು ನೇರಳೆ ಗರಿಗಳಿಂದ ಕೂಡಿದ ಈ ಅಪರೂಪದ ಬಾತುಕೋಳಿ ವೈರಲ್ ಆಗಿದೆ. ಈ ವಿಡಿಯೋ ಅನ್ನು ಈತನಕ ಸುಮಾರು 1.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 27,000 ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಇಲ್ಲಿರುವುದು ಗಂಡು ಮ್ಯಾಂಡರಿನ್ ಬಾತುಕೋಳಿಯಾಗಿದೆ.

ಈ ಬಾತುಕೋಳಿಗಳು ಕೆಲ ದೇಶಗಳಲ್ಲಿ ಪ್ರೀತಿ ಮತ್ತು ನಿಷ್ಠೆಯ ಸಂಕೇತವಾಗಿವೆ. ಏಕೆಂದರೆ ಇವು ಏಕಸಂಗಾತಿಯನ್ನು ಹೊಂದಿರುತ್ತವೆ. ಸುಂದರವಾದ ಈ ಪಕ್ಷಿಯ ಮೂಲ ಪೂರ್ವ ಏಷ್ಯಾ. ದಟ್ಟವಾದ ಕಾಡು, ಪೊದೆಗಳು, ಅರಣ್ಯಗಳಲ್ಲಿ ಇವು ವಾಸಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಚೀನಾ ಮತ್ತು ರಷ್ಯಾದಲ್ಲಿ ಇವುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 1:01 pm, Thu, 25 August 22