Viral : ಅರವತ್ತು ದಾಟಿದ ನಂತರ ವಿಶ್ರಾಂತಿ ಪಡೆಯಬೇಕಲ್ಲವೆ? ಆದರೆ ನಮ್ಮ ಸುತ್ತಮುತ್ತಲಿರುವ ಎಷ್ಟೋ ಹಿರಿಯ ನಾಗರಿಕರಿಗೆ ಎಲ್ಲಿದೆ ವಿಶ್ರಾಂತಿ? ಜೈಪುರದ ಜಂತರ್ಮಂತರ್ ಬಳಿ ಇರುವ ಜಿಲೇಬಿ ಚೌಕ್ಗೆ ಬಂದರೆ 68 ವರ್ಷದ ಹಿರಿಯಮಹಿಳೆ ನಿಮ್ಮನ್ನು ಎದುರುಗೊಳ್ಳುತ್ತಾರೆ. ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಎರಡೂ ಮೊಣಕೈಗಳ ತನಕ ಮುಟ್ಟುವಷ್ಟು ದೊಡ್ಡದಾದ ಗರಿಗರಿಯಾದ ಹಪ್ಪಳದ ಮೇಲೆ ಮಿತವಾಗಿ ಖಾರಪುಡಿ ಉದುರಿಸಿ ನಿಮ್ಮ ಕೈಗಿಡುತ್ತಾರೆ. ಒಂದು ಹಪ್ಪಳಕ್ಕೆ ಕೇವಲ ರೂ. 20! ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಯಸ್ಸಿನಲ್ಲಿಯೂ ಸ್ವಾಭಿಮಾನ ಮತ್ತು ಘನತೆಯೊಂದಿಗೆ ಬದುಕುತ್ತಿರುವ ಇವರ ಪ್ರಾಮಾಣಿಕತೆಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ!
ಇನ್ಸ್ಟಾಗ್ರಾಮ್ನಲ್ಲಿರುವ ಪೋಸ್ಟ್ನಲ್ಲಿ, ‘68 ವರ್ಷದ ಈ ಮಹಿಳೆ ಈಗಲೂ ಕಷ್ಟಪಟ್ಟು ದುಡಿದು ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ. ಕೇವಲ 20 ರೂಪಾಯಿಗೆ ಹಪ್ಪಳವನ್ನು ಮಾರುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಶರವೇಗದಲ್ಲಿ ಇವರ ಹಪ್ಪಳಗಳು ಮಾರಾಟವಾಗುತ್ತಿವೆ. ಇಡೀ ಕುಟುಂಬವನ್ನು ಇಬರೊಬ್ಬರೇ ದುಡಿದು ಸಾಕುತ್ತಿದ್ದಾರೆ.’ ಎಂಬ ಒಕ್ಕಣೆ ಇದೆ.
ನೆಟ್ಟಿಗರು ಮನಕರಗಿ, ದಯವಿಟ್ಟು ಇವರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಸಿ ಎಂದು ಕೇಳಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯ ನೆಟ್ಟಿಗರು ಹೇಗಾದರೂ ನಾವವರಿಗೆ ಸಹಾಯ ಮಾಡಲೇಬೇಕು, ಹೇಗೆಂದು ತಿಳಿಸಿ ಎಂದು ಕೋರಿಕೊಂಡಿದ್ದಾರೆ. ಅವರು ಮಾರುವ ಹಪ್ಪಳವನ್ನು ನಾನು ಮಾರಬಯಸುತ್ತೇನೆ ಎಂದೂ ಕೆಲವರು ಹೇಳಿದ್ದಾರೆ. ಅದಕ್ಕೆ ಕೆಲವರು ನೇರ ಜೈಪುರಕ್ಕೆ ಹೋಗಿ ಇವರನ್ನು ಭೇಟಿಮಾಡಿ ಎಂದಿದ್ದಾರೆ ಒಬ್ಬರು.
ಇದನ್ನು ನೋಡಿದ ನಾವು ಘನತೆ, ಸ್ವಾಭಿಮಾನ ಎಂದು ಕೊಂಡಾಡುತ್ತೇವೆ. ಆದರೆ ಈ ಇಳಿವಯಸ್ಸಿನಲ್ಲಿ ಇವರು ಇಂಥ ಪರಿಸ್ಥಿತಿಯಲ್ಲಿರಬೇಕೆ? ಎಂದು ಅವರು ಆರಾಮಾಗಿ ನಿಶ್ಚಿಂತೆಯಿಂದ ಬದುಕುವುದು? ಯೋಚಿಸಿ.
ಇನ್ನಷ್ಟು ವೈರಲ್ ವಿಡಯೋಗಳಿಗಾಗಿ ಕ್ಲಿಕ್ ಮಾಡಿ