ಬೆಡ್​ರೂಂ ಇಲ್ಲದ ಮನೆ ಇದು, ಬಾತ್​ರೂಂನ ಮೇಲ್ಭಾಗದಲ್ಲಿ ಮಲಗಬೇಕು, ಆದ್ರೂ ಬಾಡಿಗೆ ಬರೋಬ್ಬರಿ 4 ಲಕ್ಷ ರೂ ಅಂತೆ!

|

Updated on: Jun 20, 2024 | 11:51 AM

ನೀವೆಲ್ಲಾದರೂ ಬೆಡ್​ರೂಂ ಇಲ್ಲದ ಮನೆಯನ್ನು ನೋಡಿದ್ದೀರಾ, ನ್ಯೂಯಾರ್ಕ್​ನಲ್ಲಿ ಉತ್ತಮ ಮನೆ ಒಳ್ಳೆಯ ಬೆಲೆಯಲ್ಲಿ ಸಿಗಲು ಸಾಧ್ಯವೇ ಇಲ್ಲ,  ಸ್ವಂತ ಮನೆಯೂ ಕೈಗೆಟುಕುವ ದರದಲ್ಲಿ ಸಿಗುವುದು ಕನಸೆಂದೇ ಹೇಳಬಹುದು. ಆದರೆ ಅಲ್ಲಿರುವ ಬೆಡ್ ರೂಂ ಇಲ್ಲದ ಮನೆಯ ಚಿತ್ರ ಇದೀಗ ವೈರಲ್ ಆಗುತ್ತಿದೆ.

ಬೆಡ್​ರೂಂ ಇಲ್ಲದ ಮನೆ ಇದು, ಬಾತ್​ರೂಂನ ಮೇಲ್ಭಾಗದಲ್ಲಿ ಮಲಗಬೇಕು, ಆದ್ರೂ ಬಾಡಿಗೆ ಬರೋಬ್ಬರಿ 4 ಲಕ್ಷ ರೂ ಅಂತೆ!
Image Credit source: News 18
Follow us on

ನೀವೆಲ್ಲಾದರೂ ಬೆಡ್​ರೂಂ ಇಲ್ಲದ ಮನೆಯನ್ನು ನೋಡಿದ್ದೀರಾ, ನ್ಯೂಯಾರ್ಕ್​ನಲ್ಲಿ ಉತ್ತಮ ಮನೆ ಒಳ್ಳೆಯ ಬೆಲೆಯಲ್ಲಿ ಸಿಗಲು ಸಾಧ್ಯವೇ ಇಲ್ಲ,  ಸ್ವಂತ ಮನೆಯೂ ಕೈಗೆಟುಕುವ ದರದಲ್ಲಿ ಸಿಗುವುದು ಕನಸೆಂದೇ ಹೇಳಬಹುದು. ಆದರೆ ಅಲ್ಲಿರುವ ಬೆಡ್ ರೂಂ ಇಲ್ಲದ ಮನೆಯ ಚಿತ್ರ ಇದೀಗ ವೈರಲ್ ಆಗುತ್ತಿದೆ.

ಡೇವಿಡ್ ಒಕೋಚಾ ಎಂಬ ರಿಯಲ್ ಎಸ್ಟೇಟ್ ವ್ಯಾಪಾರಿ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನ ನೋಲಿಟಾದಲ್ಲಿ ಸ್ಟುಡಿಯೊವನ್ನು ತೋರಿಸುವ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮನೆಯಲ್ಲಿ ಬೆಡ್​ರೂಂ ಇಲ್ಲ, ಬಾತ್​ರೂಂನ ಮೇಲ್ಭಾಗ ಖಾಲಿ ಇದ್ದು ಅಲ್ಲಿಯೇ ಮಲಗಬೇಕು, ಶವರ್ ಅಡುಗೆಮನೆಗೆ ಎಷ್ಟು ಹತ್ತಿರದಲ್ಲಿದೆ, ಅವುಗಳ ನಡುವೆ ಕೇವಲ ಪ್ಲಾಸ್ಟಿಕ್ ಶೀಟ್ ಇದೆ.

ಕೈ ತೊಳೆಯಲು ಸಿಂಕ್ ಇಲ್ಲದೆ ಸಣ್ಣ ಪ್ರದೇಶದಲ್ಲಿ ಟಾಯ್ಲೆಟ್ ಸೀಟ್ ಇತ್ತು. ಸ್ವಲ್ಪ ಸಮಯದ ಹಿಂದೆ, ನ್ಯೂಯಾರ್ಕ್ ನಗರದ ಅತ್ಯಂತ ಚಿಕ್ಕ ಅಪಾರ್ಟ್ಮೆಂಟ್​ನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪಾರ್ಟ್​ಮೆಂಟ್​ಗೆ ಬರೋಬ್ಬರಿ 4 ಲಕ್ಷ ರೂ. ಬಾಡಿಗೆಯಂತೆ.

ಮತ್ತಷ್ಟು ಓದಿ: ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿ ಮನೆ ಬಾಡಿಗೆ ಕಟ್ಟದಿದ್ದಕ್ಕೆ ಮಹಡಿಗೆ ಹೋಗುವ ಮೆಟ್ಟಿಲನ್ನೇ ಕೆಡವಿದ ಮಾಲೀಕ

ಒಮಲ್ ಲ್ಯಾಬಾಕ್ ಅಮೆರಿಕದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್, ಇನ್​ಸ್ಟಾಗ್ರಾಂನಲ್ಲಿ ಅವರಿಗೆ 1 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್​ ಇದ್ದಾರೆ. ಅಲ್ಲಿ ಒಂದು ತಿಂಗಳಲ್ಲಿ ಕೊಡುವ ಬಾಡಿಗೆಯಲ್ಲಿ ಭಾರತದಲ್ಲಿ ಒಂದು ವರ್ಷ ಬಾಡಿಗೆ ಕಟ್ಟಬಹುದು.

ಫ್ಲಾಟ್ ನಲ್ಲಿ 12 ಅಡಿ ಸೀಲಿಂಗ್ ಇದೆ. ಈ ಕೋಣೆಯ ಪಕ್ಕದಲ್ಲಿ ಸುಂದರವಾದ ಸ್ನಾನಗೃಹವಿದೆ. ಆದರೆ ಮನೆಯಲ್ಲಿ ಮಲಗುವ ಸ್ಥಳವು ಈ ಸ್ನಾನಗೃಹದ ಮೇಲಿರುವ ಸಣ್ಣ ಸ್ಥಳವಾಗಿದೆ. ಅದನ್ನು ಹತ್ತಲು ಏಣಿಯನ್ನು ಬಳಸಬೇಕು. ಈ ಮನೆ ಶವಪೆಟ್ಟಿಗೆಯಷ್ಟು ದೊಡ್ಡದಾಗಿದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:49 am, Thu, 20 June 24