Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಹೆಣ್ಣು ಮಗು ಬೇಕು ಎಂಬ ಆಸೆಗೆ 9 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; 10ನೇ ಹೆರಿಗೆಯಲ್ಲಿ ಹೆಣ್ಣು ಜನನ

ಯಲಾನ್ಸಿಯಾ ರೊಸಾರಿಯೊ ಎಂಬ 31 ವರ್ಷದ ಮಹಿಳೆ ಹತ್ತನೇ ಬಾರಿಗೆ ಗರ್ಭಿಣಿಯಾದಾಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಅವಳಿ ಮಕ್ಕಳಲ್ಲಿ ಒಂದು ಹೆಣ್ಣು ಮತ್ತು ಮತ್ತೊಂದು ಗಂಡು. ತನಗೆ ಈ ಬಾರಿಯೂ ಹೆಣ್ಣು ಮಗು ಆಗದೇ ಹೋಗಿದ್ದರೆ 11ನೇ ಬಾರಿಗೆ ಗರ್ಭಿಣಿಯಾಗಲು ಸಿದ್ಧನಿದ್ದೆ ಎಂದು ಯಲಾನ್ಸಿಯಾ ಹೇಳಿಕೊಂಡಿದ್ದಾರೆ.

Viral News: ಹೆಣ್ಣು ಮಗು ಬೇಕು ಎಂಬ ಆಸೆಗೆ 9 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; 10ನೇ ಹೆರಿಗೆಯಲ್ಲಿ ಹೆಣ್ಣು ಜನನ
Follow us
ಅಕ್ಷತಾ ವರ್ಕಾಡಿ
|

Updated on: Jun 20, 2024 | 12:15 PM

ಮಹಿಳೆಯೊಬ್ಬರು ತನಗೆ ಹೆಣ್ಣು ಮಗು ಬೇಕೇ ಎಂದು ಪಣತೊಟ್ಟು ಬರೋಬ್ಬರಿ 10 ಬಾರಿ ಗರ್ಭಧರಿಸಿದ್ದಾರೆ. ಪ್ರತೀ ಬಾರಿ ಅಂದರೆ 9 ಬಾರಿ ಗಂಡು ಮಗುವಿನ ಜನನವಾಗಿದೆ. ಆದರೆ ಇಷ್ಟೆಲ್ಲ ಆದರೂ ಆಕೆಗೆ ಹೆಣ್ಣು ಮಗುವಿನ ಜನನದ ಆಸೆ ಈಡೇರದ ಕಾರಣ 10ನೇ ಬಾರಿಗೆ ಗರ್ಭಧರಿಸಿದ್ದಾಳೆ. ಈ ಬಾರಿಗೆ ಹೆಣ್ಣು ಮಗು ಜನಿಸಿದ್ದು, ಸಂಭ್ರಮ ಮನೆ ಮಾಡಿದೆ. ಸದ್ಯ ತನ್ನ ಹತ್ತು ಮಕ್ಕಳ ವಿಡಿಯೋವೊಂದನ್ನು ಆಕೆ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

ಯಲಾನ್ಸಿಯಾ ರೊಸಾರಿಯೊ ಎಂಬ 31 ವರ್ಷದ ಮಹಿಳೆ ಹತ್ತನೇ ಬಾರಿಗೆ ಗರ್ಭಿಣಿಯಾದಾಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಅವಳಿ ಮಕ್ಕಳಲ್ಲಿ ಒಂದು ಹೆಣ್ಣು ಮತ್ತು ಮತ್ತೊಂದು ಗಂಡು. ತನಗೆ ಈ ಬಾರಿಯೂ ಹೆಣ್ಣು ಮಗು ಆಗದೃ ಹೋಗಿದ್ದರೆ 11ನೇ ಬಾರಿಗೆ ಗರ್ಭಿಣಿಯಾಗಲು ಸಿದ್ಧ ಎಂದು ಯಲಾನ್ಸಿಯಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸಿಗೆ ಹಿಡಿದ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದ ನಟ ಮಹೇಶ್ ಬಾಬು

ಯಲಾನ್ಸಿಯಾ 18 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮಗನಿಗೆ ಜನ್ಮ ನೀಡಿದಳು. ಮೊದಲ ಮಗುವಿಗೆ ಈಗ 13 ವರ್ಷ. ಆದರೆ ಯಲಾನ್ಸಿಯಾ ರೊಸಾರಿಯೊ ಹತ್ತನೇ ಬಾರಿಗೆ ಮತ್ತೆ ಗರ್ಭಿಣಿಯಾದಾಗ ಅನೇಕರು ಅವಳನ್ನು ಟೀಕಿಸಿದ್ದರು. ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾಳೆ ಎಂದು ಹಲವರು ಟೀಕಿಸಿದ್ದಾರೆ. ಈ ವಿಚಾರವಾಗಿ ತಲೆಕೆಡಿಸಿಕೊಳ್ಳದ ಯಲಾನ್ಸಿಯಾ ತನ್ನ 11 ಮಕ್ಕಳೊಂದಿಗೆ ಖುಷಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: