ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿ ಮನೆ ಬಾಡಿಗೆ ಕಟ್ಟದಿದ್ದಕ್ಕೆ ಮಹಡಿಗೆ ಹೋಗುವ ಮೆಟ್ಟಿಲನ್ನೇ ಕೆಡವಿದ ಮಾಲೀಕ

ವ್ಯಕ್ತಿಯೊಬ್ಬ ಮನೆ ಬಾಡಿಗೆ ಕಟ್ಟದಿದ್ದಕ್ಕೆ ಮನೆ ಮಾಲೀಕ ಮಹಡಿಗೆ ಹೋಗುವ ಮೆಟ್ಟಿನಲ್ಲೇ ಕೆಡವಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವ್ಯಕ್ತಿಗೆ ಏಕಾಏಕಿ ಪಾರ್ಶ್ವ ಹೊಡೆದಿತ್ತು, ಹಾಗಾಗಿ ಮನೆ ಬಾಡಿಗೆಯನ್ನು ಕಟ್ಟಲು ಸಾಧ್ಯವಾಗಿರಲಿಲ್ಲ, ಆ ಕಾರಣಕ್ಕೆ ಮನೆ ಮಾಲೀಕ ಮಹಡಿಗೆ ಹೋಗುವ ಮೆಟ್ಟಿನಲ್ಲೇ ಒಡೆದು ಹಾಕಿದ್ದಾರೆ.

ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿ ಮನೆ ಬಾಡಿಗೆ ಕಟ್ಟದಿದ್ದಕ್ಕೆ ಮಹಡಿಗೆ ಹೋಗುವ ಮೆಟ್ಟಿಲನ್ನೇ ಕೆಡವಿದ ಮಾಲೀಕ
Image Credit source: India Today
Follow us
|

Updated on:Jun 19, 2024 | 3:12 PM

ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿ ಮನೆ ಬಾಡಿಗೆ ಕಟ್ಟದಿದ್ದಕ್ಕೆ ಮನೆ ಮಾಲೀಕ ಮಹಡಿಗೆ ಹೋಗುವ ಮೆಟ್ಟಿಲನ್ನೇ ಕೆಡವಿದ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ. ವ್ಯಕ್ತಿಗೆ ಏಕಾಏಕಿ ಪಾರ್ಶ್ವ ಹೊಡೆದಿತ್ತು, ಹಾಗಾಗಿ ಮನೆ ಬಾಡಿಗೆಯನ್ನು ಕಟ್ಟಲು ಸಾಧ್ಯವಾಗಿರಲಿಲ್ಲ, ಆ ಕಾರಣಕ್ಕೆ ಮನೆ ಮಾಲೀಕ ಮಹಡಿಗೆ ಹೋಗುವ ಮೆಟ್ಟಿನಲ್ಲೇ ಒಡೆದು ಹಾಕಿದ್ದಾರೆ.

ವೇಣುಗೋಪಾಲ್ ಪಾರ್ಶ್ವವಾಯುವಿಗೆ ತುತ್ತಾಗಿ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಶ್ರೀನಿವಾಸನ್ ಎಂಬುವವರ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಾಗಿದ್ದರು.

ವೇಣುಗೋಪಾಲ್‌ಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಶ್ರೀನಿವಾಸನ್‌ ಅವರನ್ನು ಖಾಲಿ ಮಾಡುವಂತೆ ಹೇಳಿದರು. ವೇಣುಗೋಪಾಲ್ ವಕೀಲರ ಸಹಾಯವನ್ನು ಕೇಳಿದರು ಮತ್ತು ಖಾಲಿ ಮಾಡಲು ಸಮಯ ಪಡೆದರು. ಇದರಿಂದ ಕೋಪಗೊಂಡ ಶ್ರೀನಿವಾಸನ್ ಮೊದಲ ಮಹಡಿಯ ಮೆಟ್ಟಿಲನ್ನೇ ಕೆಡವಿಹಾಕಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: 3 ತಿಂಗಳಲ್ಲಿ ಶೇ 8ರಷ್ಟು ಹೆಚ್ಚಳ

ತಕ್ಷಣವೇ ಸ್ಥಳೀಯರು ತುರ್ತು ಸೇವೆಗೆ ಮಾಹಿತಿ ನೀಡಿದ್ದು, ಏಣಿಯ ಸಹಾಯದಿಂದ ಅವರನ್ನು ಕೆಳಗಿಳಿಸಲಾಯಿತು.

ಮನುಷ್ಯನಾದವನಿಗೆ ತಾಳ್ಮೆ, ಕರುಣೆ ಎರಡೂ ಬೇಕು, ಬೇರೆಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಇಲ್ಲದಿದ್ದರೆ ಕ್ರೂರ ಮೃಗಗಳಿಗೂ ಮನುಷ್ಯನಿಗೂ ವ್ಯತ್ಯಾಸವೇನಿರುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್​ ಬರುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:06 pm, Wed, 19 June 24

ತಾಜಾ ಸುದ್ದಿ