ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: 3 ತಿಂಗಳಲ್ಲಿ ಶೇ 8ರಷ್ಟು ಹೆಚ್ಚಳ

Bengaluru House Rent: ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಮನೆ ಬಾಡಿಗೆ ದರ ಮತ್ತೆ ಹೆಚ್ಚಾಗಿದೆ. ಪ್ರಮುಖ ಏರಿಯಾಗಳಲ್ಲಿ ಬಾಡಿಗೆ ದರ ಕಳೆದ ಮೂರು ತಿಂಗಳಲ್ಲಿ ಶೇ 8ರಷ್ಟು ಜಾಸ್ತಿಯಾಗಿದೆ. ಮನೆ ಬಾಡಿಗೆ ದರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಸದ್ಯ ಯಾವ ಏರಿಯಾದಲ್ಲಿ ಎಷ್ಟು ಬಾಡಿಗೆ ಇದೆ ಎಂಬ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: 3 ತಿಂಗಳಲ್ಲಿ ಶೇ 8ರಷ್ಟು ಹೆಚ್ಚಳ
ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: ದರ ಶೇ 8ರಷ್ಟು ಹೆಚ್ಚಳ
Follow us
| Updated By: ಗಣಪತಿ ಶರ್ಮ

Updated on:May 09, 2024 | 1:06 PM

ಬೆಂಗಳೂರು, ಮೇ 6: ರಾಜ್ಯ ರಾಜಾಧಾನಿ ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ನಗರ.‌ ಇಲ್ಲಿ ಒಂದು ಸೈಟ್ ತೆಗದುಕೊಳ್ಳಬೇಕು ಅಂದರೆ ಮಧ್ಯಮ ವರ್ಗದ ಜನರಿಗೆ ಕನಸಿನ ಮಾತೇ ಎನ್ನುವಂತಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸೈಟ್​​ಗಳ ಬೆಲೆ ದುಬಾರಿಯಾಗುತ್ತಿದ್ದು, ಎಷ್ಟೋ ಜನರು ಇಷ್ಟು ದಿನ ನೆಮ್ಮದಿಯಾಗಿ ಬಾಡಿಗೆ ಮನೆಗಳಲ್ಲಿಯೇ (rented House) ಜೀವನ ನಡೆಸುತ್ತಿದ್ದಾರೆ.‌ ಇದೀಗ ಬಾಡಿಗೆ ಮನೆಗಳ ಬಾಡಿಗೆಗೂ (House Rent) ಚಿನ್ನದ ದರ ನಿಗದಿಪಡಿಸಲಾಗುತ್ತಿದೆ. ಬಾಡಿಗೆದಾರರಿಗೆ ಇನ್ನು ಮುಂದೆ ಜೀವನ ಮಾಡುವುದು ತುಂಬ ಕಷ್ಟವಾದಂತೆ ಕಾಣುತ್ತಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇಕಡಾ 8ರಷ್ಟು ಹೆಚ್ಚಳ ಮಾಡಲಾಗಿದೆ. ಹೈ ಫೈ ಏರಿಯಾಗಳಲ್ಲಿ ಬಾಡಿಗರ ದರವನ್ನು ಸಾಮಾನ್ಯ ಜನರು ಕೇಳದಂತಾಗಿದೆ. ಕೋವಿಡ್ ಅವಧಿಯಲ್ಲಿ 2022ರ ಅಂತ್ಯದ ವೇಳೆ ವೈಟ್‌ಫೀಲ್ಡ್‌ನಲ್ಲಿ 2 ಬಿಎಚ್‌ಕೆ ಮನೆ ದರ 22,500 ರೂ. ಇತ್ತು. ಇನ್ನು ಸರ್ಜಾಪುರ ರಸ್ತೆಯಲ್ಲಿ 24,000 ರೂ. ಇತ್ತು. 2023ರ ಅಂತ್ಯದ ವೇಳೆಗೆ, ವೈಟ್‌ಫೀಲ್ಡ್‌ನಲ್ಲಿ 30,200 ರೂ. ಮತ್ತು ಸರ್ಜಾಪುರ ರಸ್ತೆಯಲ್ಲಿ 31,600 ರೂ.ಗೆ ಗಮನಾರ್ಹವಾಗಿ ಏರಿಕೆ ಕಂಡಿತು.

ಈಗ ಯಾವ ಏರಿಯಾದಲ್ಲಿ ಎಷ್ಟಿದೆ ಬಾಡಿಗೆ?

2024ರ ಮೊದಲ ತ್ರೈಮಾಸಿಕದಲ್ಲಿ, ಸರಾಸರಿ ಬಾಡಿಗೆಯು ಸರ್ಜಾಪುರದಲ್ಲಿ 34,000 ರೂ., ಮತ್ತು ವೈಟ್‌ಫೀಲ್ಡ್‌ನಲ್ಲಿ 32,500 ರೂ.ಗೆ ಏರಿಕೆಯಾಗಿದೆ.‌ ಇದಲ್ಲದೇ ಬೆಂಗಳೂರಿನ ಹೈ ಫೈ ಏರಿಯಾಗಳಾದ ಮಲ್ಲೇಶ್ವರಂ, ಕೋರಮಂಗಲ, ಡಾಲೋರ್ಸ್ ಕಾಲೋನಿ, ಸದಾಶಿವನಗರ, ಜಯನಗರ, ಜೆಪಿನಗರ, ರಾಜಾಜಿನಗರ, ಆರ್​ಆರ್ ನಗರ, ಇಂದಿರಾನಗರ, ಸೇರಿದಂತೆ ಪ್ರಸಿದ್ಧ ಏರಿಯಾಗಳಲ್ಲೂ ಬಾಡಿಗೆ ದಾಖಾಲೆ ಬರೆಯುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಬೆಂಗಳೂರಿನಲ್ಲಿ ಅತಿಹೆಚ್ಚು ಬೆಲೆ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿ ತುಂಬ ದುಬಾರಿ ಎನ್ನುವಂತಾಗಿದೆ.

ಕೋರೋನಾ ಸಂದರ್ಭದಲ್ಲಿ ಐಟಿಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದವು. ಇದೀಗ ಕೋವಿಡ್ ಸಮಯದಲ್ಲಿ ಮುಚ್ಚಿದ್ದ ಆಫೀಸ್​​ಗಳು ಒಪನ್ ಆಗುತ್ತಿದ್ದು, ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಐಟಿ – ಬಿಟಿ ನೌಕರರಿಂದ ಹೆಚ್ಚಾಗಿ ಮನೆಗಳಿಗೆ ಬೇಡಿಕೆ ಇದೆ. ‌ಅಲ್ಲದೆ, ಈಗ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ.‌ ಈ ಕಾರಣದಿಂದಾಗಿ ಮನೆಯ ಬಾಡಿಗಳು ಜಾಸ್ತಿಯಾಗುತ್ತಿವೆ ಎಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಫೆಡರೇಷನ್ ಹೇಳಿದೆ.

ಇದನ್ನೂ ಓದಿ: ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ

ಇದೇ ರೀತಿಯಾಗಿ ಮನೆಯ ಬಾಡಿಗೆ ಹೆಚ್ಚಳವಾಗುತ್ತಿದ್ದರೆ ಬಡಜನರು ಜೀವನ‌ ಮಾಡುವುದು ಹೇಗೆ? ಚಿಕ್ಕ ಮನೆಗಳಿಗೆ 7 ರಿಂದ 10 ಸಾವಿರ ಕೇಳುತ್ತಾರೆ.‌ ಕೂಲಿ ಕೆಲಸ ಮಾಡಿ ಅಷ್ಟು ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆಯೇ? ಈ ಕುರಿತಾಗಿ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು‌ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Thu, 9 May 24

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ