ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಅಬ್ಬರಿಸಿದ್ದ ಮಳೆರಾಯ ಮಂಗಳ ಕೊಂಚ ರಿಲೀಫ್ ನೀಡದ್ದ, ಬಳಿಕ ಬುಧವಾರ ಬೆಳಿಗ್ಗೆಯಿಂದ ಬಿಸಿಲಿನ ಬೇಗೆಗೆ ಬೇಸತ್ತ ಸಿಟಿ ಮಂದಿಗೆ ಸಾಯಂಕಾಲ ಆಗುತ್ತಿದ್ದಂತೆ ವರುಣ ತಂಪೆರೆದಿದ್ದ, ಇನ್ನೂ ಮೂರು ದಿನಗಳ ಕಾಲ ಬೆಂಗಳೂರಿಗೆ ಹವಾಮಾನ ಇಲಾಖೆ‌ ಮಳೆ ಮುನ್ಸೂಚನೆ ನೀಡಿದೆ.

ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ
ಬೆಂಗಳೂರು ಮಳೆ
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: May 09, 2024 | 7:08 AM

ಬೆಂಗಳೂರು, ಮೇ.09: ರಾಜ್ಯ ರಾಜಧಾನಿ ಬೆಂಗಳೂರು ಜನರು ಮಳೆರಾಯನ (Bengaluru Rain) ದರ್ಶನ ಇಲ್ಲದೇ ಬಿಸಿಲಿನ ಧಗೆಗೆ ಬೇಸತ್ತು ಹೋಗಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆ ದಾಖಲಾಗಿತ್ತು. ಅಲ್ಲದೇ ಸರಾಸರಿ ಗರಿಷ್ಟ ಉಷ್ಣತಾಪಮಾನ 37° ಯಿಂದ 39° ವರೆಗೆ ದಾಖಲಾಗಿತ್ತು. ಮೇ ತಿಂಗಳು ಆರಂಭವಾಗುತ್ತಿದ್ದಂತೆ ಮಳೆರಾಯನ ಆಗಮನದಿಂದ ಕಾದ ಕಾವಲಿಯಾಗಿದ್ದ ಸಿಟಿ ಇದೀಗ ಕೂಲ್ ಆಗುತ್ತಿದ್ದು, ನಿನ್ನೆ ಮೆಜೆಸ್ಟಿಕ್, ಕೆ ಆರ್ ಸರ್ಕಲ್, ಟೌನ್ ಹಾಲ್, ಕನಕಪುರ ರಸ್ತೆ, ಕಾರ್ಪೋರೇಷನ್, ವಿಧಾನಸೌಧ ಸೇರಿದಂತೆ ನಗರದ ವಿವಿಧೆಡೆ ಮಳೆ ಬಂದಿದ್ದು ಕೆಲಸ ಮುಗಿಸಿ ಮನೆಗಳ ತೆರಳುವವರು ಪರದಾಡುವಂತಾದರೆ, ಟೌನ್ ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇಂದಿನಿಂದ ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.

ಕರ್ನಾಟಕದ ಒಳನಾಡಿನಲ್ಲಿ 1.5 ಕೀಮಿ ಎತ್ತರಲ್ಲಿ ವಾಯು ಭಾರ ಕುಸಿತ ಹಿನ್ನಲೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇವತ್ತಿನಿಂದ 11 ನೇ ತಾರೀಖಿನ ವರೆಗೆ ಮಳೆ ಅಬ್ಬರಿಸಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದ್ದು, ನಾಳೆ ಹಾಗೂ ನಾಡಿದ್ದು ಬೆಂಗಳೂರಿಗೆ ಎರಡು ದಿನ ಯಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇ 12 ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಬಿಸಿಲಿನ ಧಗೆಗೆ ಬೇಸತ್ತ ಸಿಲಿಕಾನ್ ಮಂದಿಗೆ ಇನ್ನೂ ಮೂರು ದಿನಗಳ ಕಾಲ ವರುಣ ತಂಪೆರೆಯಲಿದ್ದಾನೆ.

ಮಳೆಗೆ ಭಾರೀ ಅವಾಂತರ

ರಣ ಬಿಸಿಲಿಗೆ ಬಸವಳಿದ್ದಿದ ಬೆಂಗಳೂರು ಇದೀಗ ಮಹಾ ಮಳೆಯಲ್ಲಿ ಮಿಂದೇಳ್ತಿದೆ. ಮೊನ್ನೆ ರಾತ್ರಿ ಬಿದ್ದ ಮಳೆಗೆ ಬೆಂಗಳೂರಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿ ಮಳೆಗೆ ಮರದಕೊಂಬೆ ಬಿದ್ದು ಟೆಕ್ಕಿಯೊಬ್ಬನ ಬೆನ್ನು ಮೂಳೆ ಮುರಿದಿದೆ. ಹೀಗೆ ನಗರದಲ್ಲಿ ಸಾಲು ಸಾಲು ಅನಾಹುತಗಳಾಗಿವೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮಳೆ ಅವಾಂತರ, ಬೋರ್ ಬ್ಯಾಂಕ್ ರಸ್ತೆ ಕುಸಿತ

ಸೋಮವಾರ ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಗೆ ಸಾಫ್ಟ್‌ವೇರ್ ಇಂಜಿನಿಯರೊಬ್ಬ ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ನಾಗವಾರ ಪಾಳ್ಯದ ಆಂಜನೇಯ ಸ್ವಾಮಿ ದೇವಾಲಯದ ಎರಡನೇ ಕ್ರಾಸ್ ಬಳಿ ಮೊನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಆ ವೇಳೆ ಆಫೀಸ್ ನಿಂದ ಮನೆಗೆ ಹೋಗಿತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ರಾತ್ರಿ 8-30 ರಿಂದ 8-40ರ ಸುಮಾರಿಗೆ ಮರ ನೆಲಕ್ಕುರುಳಿದೆ. ಈ ವೇಳೆ ಮರದ ಕೆಳಗೆ ನಡೆದುಕೊಂಡು ಹೋಗಿದ್ದ ಬಿಹಾರ ಮೂಲದ 26 ವರ್ಷದ ಟೆಕ್ಕಿ ತಲೆ ಮೇಲೆ ಅರಳಿ ಮರ ಬಿದ್ದಿದೆ. ಇದರಿಂದ ಮರ ಅಡಿಯಲ್ಲಿ ಸಿಲುಕಿಕೊಂಡು ಜೋರಾಗಿ ಸಹಾಯಕ್ಕಾಗಿ ಕಿರುಚಾಡುತ್ತಿದ್ದ ನಂತರ ಸ್ಥಳೀಯರಾದ ನಾರಾಯಣ ಸ್ವಾಮಿ ಮತ್ತು ಸ್ನೇಹಿತರು ಮರವನ್ನು ಮೇಲಕ್ಕೆ ಎತ್ತಿ ಆತನನ್ನು ಕೆ.ಆರ್ ಪುರ ಸರ್ಕಾರಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದ್ದಾರೆ.

ಇನ್ನು ವಿಪರೀತವಾಗಿ ಮಳೆ ಬರ್ತಿತ್ತು. ಅದರಿಂದಾಗಿ ಸುಮಾರು ನೂರು ವರ್ಷ ಹಳೆದಾದ ಅರಳಿ ಮರ ನೆಲ್ಕಕ್ಕುರುಳಿತ್ತು. ಮರ ಬಿದ್ದ ರಭಸಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅದರಿಂದ ರವಿಕುಮಾರ್ ಸಹಾಯ ಮಾಡಲು ತುಂಬಾ ಕಷ್ಟ ಆಯಿತಂತೆ .ನಂತರ ಮರದ ಪೋಲ್ಸ್ ಗಳಿಂದ ಬಿದ್ದ ಮರವನ್ನು ಪಕ್ಕಕ್ಕೆ ಸರಿಸಿ ಆತನನ್ನು ರಕ್ಷಿಸಲಾಗಿದೆ. ಸದ್ಯ ರವಿ ಕುಮಾರ್ ರನ್ನ ಹೆಚ್ಚಿನ ಚಿಕಿತ್ಸೆ ಗಾಗಿ ಹೆಚ್ಎಎಲ್ ಬಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು ಬೆನ್ನು ಮೂಲೆ ಮುರಿದಿದೆ. ಸದ್ಯ ವೈದ್ಯರು ಸರ್ಜರಿ ಮಾಡಿದ್ದು ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಮರ ಬಿದ್ದಿದ್ದರಿಂದ ಮರದ ಕೆಳಗೆ ಸಿಲುಕಿ ಸಹಾಯಕ್ಕಾಗಿ ತುಂಬಾ ಜೋರಾಗಿ ಕಿರುಚುತ್ತಿದ್ದ ನಂತರ ಸ್ಥಳೀಯರು ನಾವೆಲ್ಲರೂ ಸೇರಿ ಆತನನ್ನು ರಕ್ಷಣೆ ಮಾಡಿದ್ವಿ ಎಂದು ಸ್ಥಳೀಯ ನಿವಾಸಿ ರಂಗನಾಥ ತಿಳಿಸಿದರು.

ಒಟ್ನಲ್ಲಿ ಯುದ್ಧಕಾಲದಲ್ಲಿ ಶಸ್ತ್ರಭ್ಯಾಸ ಅನ್ನುವಂತೆ ನಮ್ಮ ಬಿಬಿಎಂಪಿ ಅಧಿಕಾರಿಗಳು ಈಗ ಒಣಗಿದ ಮರಗಳ ರೆಂಬೆ ಕೊಂಬೆಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಈ ಕೆಲಸವನ್ನು ಮಾರ್ಚ್ ಏಪ್ರಿಲ್ ನಲ್ಲೇ ಮಾಡಿದ್ರೆ ಅನಾಹುತಗಳು ಸಂಭವಿಸುವ ಸಾಧ್ಯತೆಯಾದ್ರು ಕಡಿಮೆ ‌ಇತ್ತು ಎನ್ನಲಾಗ್ತಿದೆ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಒಣಗಿದ ಮರಗಳನ್ನು ತೆರವು ಮಾಡ್ತಾರ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ