ವೈರಲ್ ವಿಡಿಯೋ: ಮೊನ್ನೆಯಷ್ಟೇ ನಮ್ಮ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿನಿಯರು ಶಾಲಾ ಆವರಣದ ಹೊರಗಡೆ ರಸ್ತೆಬದಿಯಲ್ಲಿ ಹೊಡೆದಾಡಿದ್ದು, ಬಡಿದಾಡಿದ್ದು, ಅರಚಾಡಿದ್ದನ್ನು ನೀವೆಲ್ಲ ನೋಡಿದ್ದೀರಿ. ಅಂಥದ್ದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ ಮಾರಾಯ್ರೇ. ವ್ಯತ್ಯಾಸವೇನೆಂದರೆ ನಮ್ಮ ಬೆಂಗಳೂರಿನ ವಿದ್ಯಾರ್ಥಿನಿಯರು ಸ್ಕೂಲ್ ಕಂಪೌಂಡ್ ಹೊರಗಡೆ ಜಗಳವಾಡಿದರೆ ಈ ವಿಡಿಯೋದಲ್ಲಿರುವ ವಿದ್ಯಾರ್ಥಿನಿಯರು ಕ್ಲಾಸ್ ರೂಮಿನೊಳಗೆ ಫೈಟ್ ಮಾಡುತ್ತಿದ್ದಾರೆ.
View this post on Instagram
ವಿಡಿಯೋ ಆರಂಭವಾಗೋದೇ ಇಬ್ಬರು ವಿದ್ಯಾರ್ಥಿನಿಯರ ನಡುವಿನ ವಾಗ್ವಾದದಿಂದ. ಪರಸ್ಪರ ಬೈದಾಡುವ ಅವರು ಬಳಿಕ ಮುಷ್ಟಿ ಕಾಳಗಕ್ಕೆ ಇಳಿಯುತ್ತಾರೆ. ಕ್ಲಾಸ್ ನಲ್ಲಿರುವ ಬೇರೆ ವಿದ್ಯಾರ್ಥಿನಿಯರು ಅವರಿಬ್ಬರನ್ನು ಬೇರ್ಪಡಿಸುವ ಪ್ರಯತ್ನ ಮಾಡುತ್ತಾರಾದರೂ ಅದು ವ್ಯಾರ್ಥವಾಗುತ್ತದೆ. ಅವರ ಹೊಡೆದಾಟ, ಅರಚಾಟ, ಕೂದಲು ಹಿಡಿದೆಳೆಯುವುದು ಟೀಚರೊಬ್ಬರು ರೂಮಿನೊಳಗೆ ಪ್ರವೇಶಿಸಿದಾಗಲೂ ಮುಂದುವರಿಯುತ್ತದೆ.
ಈ ಶಾಲೆ ಕೋ-ಎಡ್ (ಸಹ-ಶಿಕ್ಷಣ) ಮಾರಾಯ್ರೇ. ಕ್ಲಾಸ್ ರೂಮಿನಲ್ಲಿರುವ ಹುಡುಗ ವಿದ್ಯಾರ್ಥಿಗಳು ಪುಕ್ಕಟೆ ಮನರಂಜನೆಯನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಒಬ್ಬ ವಿದ್ಯಾರ್ಥಿ ನಗುತ್ತಿರುವುದನ್ನು ನೀವು ನೋಡಬಹುದು.
‘ಭೂತ್ನೀ ಕೀ ಮೀಮ್ಸ್’ ಹೆಸರಲ್ಲಿ ಖಾತೆ ಇಟ್ಟುಕೊಂಡಿರುವವರೊಬ್ಬರು ಸದರಿ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ನೆಟ್ಟಿಗರಿಗೆ ವಿಡಿಯೋ ಭಾರೀ ಮನರಂಜನೆ ನೀಡುತ್ತಿದೆ. ಬಹಳಷ್ಟು ಜನ ಇಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಒಬ್ಬ ನೆಟ್ಟಿಗ ‘ಅತ್ಯುತ್ತಮ ಮನರಂಜನಾತ್ಮಕ ದೃಶ್ಯಾವಳಿ!’ ಅಂತ ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು, ‘ಹುಡುಗರಿಗೆ ಸಖತ್ ಮನರಂಜನೆ!’ ಎಂದಿದ್ದಾರೆ.
ಇದು ಯಾವೂರಿನ ಶಾಲೆ ಅಂತ ಮಾತ್ರ ಗೊತ್ತಾಗಿಲ್ಲ ಮಾರಾಯ್ರೇ. ಅದರೆ ಜನ ಮಾತ್ರ ಜಗಳ ಅರಂಭವಾಗಿದ್ದು ಯಾಕೆ ಅನ್ನೋದನ್ನು ತಿಳಿಯಲು ಕಾತುರರಾಗಿದ್ದಾರೆ.