Shocking Video: ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ತುಂಡಾದ ಹಗ್ಗ; 100 ಮೀ.ಎತ್ತರದಿಂದ ಬಿದ್ದ ಇಬ್ಬರು ಮಹಿಳೆಯರು

| Updated By: Lakshmi Hegde

Updated on: Dec 22, 2021 | 12:11 PM

ಮಹಿಳೆಯರು ಲೈಫ್​ ಜಾಕೆಟ್​ಗಳನ್ನು ಹಾಕಿಕೊಂಡು, ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಪ್ಯಾರಾಸೈಲಿಂಗ್​ ಮಾಡುತ್ತಿರುತ್ತಾರೆ. ಅವರು ಹಾರುತ್ತಿದ್ದ ಪ್ಯಾರಾಚೂಟ್​ ಹಗ್ಗವನ್ನು ಕೆಳಗೆ ದೋಣಿಗೆ ಕಟ್ಟಿಡಲಾಗುತ್ತದೆ.

Shocking Video: ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ತುಂಡಾದ ಹಗ್ಗ; 100 ಮೀ.ಎತ್ತರದಿಂದ ಬಿದ್ದ ಇಬ್ಬರು ಮಹಿಳೆಯರು
100 ಮೀಟರ್ ಎತ್ತರದಿಂದ ಬಿದ್ದ ಮಹಿಳೆಯರು
Follow us on

ಸಾಹಸದ ಆಟಗಳು ಥ್ರಿಲ್ ಕೊಡುತ್ತವೆ. ಹಾಗೇ, ಎಚ್ಚರ ತಪ್ಪಿದರೆ ಜೀವಕ್ಕೇ ಅಪಾಯ ತರುವುದರಲ್ಲಿ ಸಂಶಯವೇ ಇಲ್ಲ. ಇತ್ತೀಚೆಗೆ ದಿಯುವಿನಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದ ದಂಪತಿ, ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿತ್ತು. ಈ ದಂಪತಿ ಗುಜರಾತ್​​ನವರಾಗಿದ್ದು, ಅವರು ಸಮುದ್ರಕ್ಕೆ ಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಅದೇ ರೀತಿಯ ಇನ್ನೊಂದು ವಿಡಿಯೋ ಈಗ ವೈರಲ್​ ಆಗಿದೆ. ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ ಬಳಿ ಪ್ಯಾರಾಸೈಲಿಂಗ್​ ನಡೆಸುತ್ತಿದ್ದ ಇಬ್ಬರು ಮಹಿಳೆಯರು 100 ಮೀಟರ್​​ ಎತ್ತರದಿಂದ ಸಮುದ್ರಕ್ಕೆ ಬಿದ್ದ ವಿಡಿಯೋ ಈಗ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ಈ ಮಹಿಳೆಯರು ಮುಂಬೈನ ಸಾಕಿ ನಾಕಾ ಪ್ರದೇಶದವರಾಗಿದ್ದು, ರಜಾದಿನಗಳನ್ನು ಕಳೆಯಲು ಈ ಸಾಹಸ ಕ್ರೀಡೆಗೆ ಮುಂದಾಗಿದ್ದರು.  

ಈ ಮಹಿಳೆಯರು ಲೈಫ್​ ಜಾಕೆಟ್​ಗಳನ್ನು ಹಾಕಿಕೊಂಡು, ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಪ್ಯಾರಾಸೈಲಿಂಗ್​ ಮಾಡುತ್ತಿರುತ್ತಾರೆ. ಅವರು ಹಾರುತ್ತಿದ್ದ ಪ್ಯಾರಾಚೂಟ್​ ಹಗ್ಗವನ್ನು ಕೆಳಗೆ ದೋಣಿಗೆ ಕಟ್ಟಿಡಲಾಗುತ್ತದೆ. ಹಾಗೇ ಅದನ್ನೊಬ್ಬರು ಹಿಡಿದಿರುತ್ತಾರೆ. ಮಹಿಳೆಯರೇನೋ ಫುಲ್​ ಖುಷಿಯಲ್ಲಿ ಹಾರುತ್ತ ಮೇಲೇರುತ್ತಿರುತ್ತಾರೆ. ಆದರೆ ಅಷ್ಟರಲ್ಲಿ ದೋಣಿಗೆ ಕಟ್ಟಲಾಗಿದ್ದ ಹಗ್ಗ ಹರಿದು, ಅವರಿಬ್ಬರೂ 100 ಮೀಟರ್​ ಎತ್ತರದಿಂದ ಸಾಗರಕ್ಕೆ ಬೀಳುತ್ತಾರೆ. ಅವರಿಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ದೊಡ್ಡ ಅನಾಹುತ ಆಗಲಿಲ್ಲ. ಇಲ್ಲಿ ಬೋಟ್​​ನಲ್ಲಿದ್ದವರು ಕೂಡಲೇ ಹೋಗಿ ಅವರನ್ನು ರಕ್ಷಿಸಿದ್ದಾರೆ.

ಆಧಾರ್ ನ್ಯೂಸ್​ ಎಂಬ ಹರ್ಯಾಣ ಮೂಲದ ಸುದ್ದಿ ವೆಬ್​ಸೈಟ್​ನ ಫೇಸ್​ಬುಕ್​​ನಲ್ಲಿ ಈ ವಿಡಿಯೋ ಮೊದಲು ಪೋಸ್ಟ್ ಆಗಿದೆ.  ಈ ಪ್ರಕರಣದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಈ ವಿಡಿಯೋಕ್ಕೆ 3.7 ಮಿಲಿಯನ್​​ಗೂ ಅಧಿಕ ವೀವ್ಸ್​ ಬಂದಿದೆ.  ಆದರೆ ಇತ್ತೀಚೆಗೆ ಪದೇಪದೆ ಇಂಥ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ನೀರಿನ ಸಾಹಸ ಕ್ರೀಡೆಗಳ ಸುರಕ್ಷತೆ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಿರಿಯ ವಿದ್ವಾನ್, ಆಧ್ಯಾತ್ಮಿಕ ಚಿಂತಕ ಹಾಗೂ ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ ನಿಧನ