Viral Video : ರೈಲು ಚಲಿಸುತ್ತಿರುವಾಗ ಪ್ಲ್ಯಾಟ್ಫಾರ್ಮ್ ಮತ್ತು ಹಳಿಗಳ ನಡುವಿನ ಅಂತರದಲ್ಲಿ ಬಿದ್ದ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರತನಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ್ರಾದಿಂದ ಹೊರಟ ಸೂಪರ್ ಫಾಸ್ಟ್ ಇಂಟರ್ಸಿಟಿ ಎಕ್ಸ್ಪ್ರೆಸ್ ಭರತನಾ ರೈಲು ನಿಲ್ದಾಣದ ಪ್ಲ್ಯಾಟ್ಫಾರ್ಮ್ ನಂ. 2 ಕ್ಕೆ ಬಂದು ಪುನಾ ಚಲಿಸುವಾಗ ಈ ಘಟನೆ ನಡೆದಿದೆ. ಆಗ ಸಮಯ ಬೆಳಗ್ಗೆ 9.45 ಆಗಿತ್ತು.
भरथना रेलवे स्टेशन पर आज सुबह 9 बजे भूरा सिंह नाम के यात्री जल्दबाजी के चलते ट्रैक पर गिर गए। इंटरसिटी ट्रेन उनके ऊपर से गुजर गई। खुशकिस्मत रहे बाल बांका नहीं हुआ। लेकिन इन घटनाओं में सबक ये है कि जिंदगी आपकी है ट्रेन की नहीं… pic.twitter.com/x9tGRzPfTI
— Ravish Ranjan Shukla (@ravishranjanshu) September 6, 2022
ಈ ವ್ಯಕ್ತಿ ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ ಪರಿಣಾಮವೇ ಈ ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಪ್ಲ್ಯಾಟ್ಫಾರ್ಮ್ನಲ್ಲಿ ನೆರೆದ ಜನರ ಪೈಕಿ ಕೆಲವರು ಈ ಘಟನೆಯನ್ನು ಸೆರೆಹಿಡಿದಿದೆ. ಬಿದ್ದು ಪಾರಾದ ನಂತರ ಚೆಲ್ಲಾಪಿಲ್ಲಿಯಾದ ತನ್ನ ವಸ್ತುಗಳನ್ನು ಎತ್ತಿಕೊಂಡು, ಸದ್ಯ ಬದುಕಿದೆ. ನೀವು ಬದುಕಿಸಿದಿರಿ ಎಂಬರ್ಥದಲ್ಲಿ ಅಲ್ಲಿದ್ದ ಎಲ್ಲರಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾನೆ.
ಅವಸರವೇ ಅಪಾಯಕ್ಕೆ ಕಾರಣ ಎನ್ನುವುದನ್ನು ಅರಿತು ಈತ ಮುಂದಿನ ರೈಲಿಗೆ ಹೋಗಿದ್ದರೆ ಇಂಥ ಅಪಾಯ ಸಂಭವಿಸುತ್ತಿರುಲಿಲ್ಲ. ಸಂಭವಿಸಿದರೂ ಬದುಕುಳಿಯುವ ಅದೃಷ್ಟ ಇವರಿಗೆ ಲಭಿಸಿದೆ. ಸದ್ಯ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ